ಐಪಿಎಲ್ ಕ್ವಾಲಿಫೈಯರ್-1: 9ನೇ ಸಲ ಫೈನಲ್ ತಲುಪಿದ ಚೆನ್ನೈ
Team Udayavani, Oct 10, 2021, 11:30 PM IST
ದುಬಾೖ: ರವಿವಾರ ರಾತ್ರಿಯ ಮೊದಲ ಐಪಿಎಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿಯನ್ನು 4 ವಿಕೆಟ್‌ಗಳಿಂದ ಪರಾಭವಗೊಳಿಸಿದ ಚೆನ್ನೈ 9ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿದೆ. ಡೆಲ್ಲಿಯಿನ್ನು ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 5 ವಿಕೆಟಿಗೆ 172 ರನ್ ಪೇರಿಸಿದರೆ, ಚೆನ್ನೈ 19.4 ಓವರ್‌ಗಳಲ್ಲಿ 6 ವಿಕೆಟಿಗೆ 173 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಚೇಸಿಂಗ್ ವೇಳೆ ಡು ಪ್ಲೆಸಿಸ್ ವಿಕೆಟ್ ಮೊದಲ ಓವರ್‌ನಲ್ಲೇ ಕಳೆದುಕೊಂಡ ಚೆನ್ನೈ ಒತ್ತಡಕ್ಕೆ ಸಿಲುಕಿತು. ಆದರೆ ಮತ್ತೋರ್ವ ಆರಂಭಕಾರ ಋತುರಾಜ್ ಗಾಯಕ್ವಾಡ್ 70 ರನ್ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರು. ರಾಬಿನ್ ಉತ್ತಪ್ಪ 63 ರನ್ ಕೊಡುಗೆ ಸಲ್ಲಿಸಿದರು. ಇವರಿಬ್ಬರ ದ್ವಿತೀಯ ವಿಕೆಟ್ ಜತೆಯಾಟದಲ್ಲಿ 110 ರನ್ ಒಟ್ಟುಗೂಡಿತು.
ಟಾಮ್ ಕರನ್ ಅವರ ಅಂತಿಮ ಓವರ್‌ನಲ್ಲಿ 13 ರನ್ ತೆಗೆಯುವ ಸವಾಲು ಎದುರಿಸಿದ ಧೋನಿ ಸತತ 3 ಬೌಂಡರಿ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. ಧೋನಿ 6 ಎಸೆತಗಳಲ್ಲಿ ಅಜೇಯ 18 ರನ್ ಬಾರಿಸಿದರು (3 ಬೌಂಡರಿ, 1 ಸಿಕ್ಸರ್).
ಆರಂಭಕಾರ ಪೃಥ್ವಿ ಶಾ ಅವರ ಆಕ್ರಮಣಕಾರಿ ಆಟ, ಕೊನೆಯಲ್ಲಿ ರಿಷಭ್ ಪಂತ್-ಶಿಮ್ರನ್ ಹೆಟ್‌ಮೈರ್ ಜೋಡಿಯ ಉಪಯುಕ್ತ ಜತೆಯಾಟ ಡೆಲ್ಲಿ ಇನ್ನಿಂಗ್ಸಿನ ಹೈಲೈಟ್ ಆಗಿತ್ತು. ಪೃಥ್ವಿ ಶಾ ಅಬ್ಬರಿಸುತ್ತಿರುವಾಗಲೇ ಶಿಖರ್ ಧವನ್ ವಿಕೆಟ್ ಹಾರಿಸುವ ಮೂಲಕ ಚೆನ್ನೈ ಸಮಾಧಾನ ಪಟ್ಟಿತು. ಹ್ಯಾಝಲ್‌ವುಡ್ ಪಂದ್ಯದ 4ನೇ ಓವರ್‌ನಲ್ಲಿ ಈ ಬೇಟೆಯಾಡಿದರು. ಧವನ್ 7 ಎಸೆತಗಳಿಂದ 7 ರನ್ ಮಾಡಿದ್ದರು. ಆಸೀಸ್ ವೇಗಿ ತಮ್ಮ ಮುಂದಿನ ಓವರ್‌ನಲ್ಲಿ ದೊಡ್ಡ ಬೇಟೆಯೊಂದನ್ನಾಡಿದರು. ಶ್ರೇಯಸ್ ಅಯ್ಯರ್ (1) ಅವರನ್ನು ವಾಪಸ್ ಕಳುಹಿಸಿದರು. ಆದರೂ ಪವರ್ ಪ್ಲೇಯಲ್ಲಿ ಡೆಲ್ಲಿ 51 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಇದರಲ್ಲಿ 43 ರನ್ ಶಾ ಬ್ಯಾಟಿನಿಂದಲೇ ಬಂದಿತ್ತು.
ಇದನ್ನೂ ಓದಿ:ಟಿ20; ಆಸ್ಟ್ರೇಲಿಯ ವನಿತೆಯರಿಗೆ 2-0 ಸರಣಿ
27 ಎಸೆತಗಳಲ್ಲಿ ಪೃಥ್ವಿ ಶಾ ಅರ್ಧ ಶತಕ ಪೂರ್ತಿಗೊಂಡಿತು. ಅವರ ಗಳಿಕೆ 60ಕ್ಕೆ ಏರಿದ ವೇಳೆ ಜಡೇಜ ಈ ಬಿಗ್ ವಿಕೆಟ್ ಹಾರಿಸಿದರು. 34 ಎಸೆತ ಎದುರಿಸಿದ ಶಾ 7 ಫೋರ್ ಜತೆಗೆ 3 ಸಿಕ್ಸರ್ ಸಿಡಿಸಿ ಚೆನ್ನೈ ಬೌಲರ್‌ಗಳಿಗೆ ಬೆವರಿಳಿಸಿದರು. ಭಡ್ತಿ ಪಡೆದು ಬಂದ ಅಕ್ಷರ್ ಪಟೇಲ್ ಆಟ ಹತ್ತೇ ರನ್ನಿಗೆ ಮುಗಿಯಿತು. 11ನೇ ಓವರ್ ವೇಳೆ 80 ರನ್ನಿಗೆ 4 ವಿಕೆಟ್ ಕಿತ್ತ ಚೆನ್ನೈ ಒಂದಿಷ್ಟು ಹಿಡಿತ ಸಾಧಿಸಿತು.
ಆದರೆ ಪಂತ್-ಹೆಟ್‌ಮೈರ್ ಡೆತ್ ಓವರ್‌ಗಳಲ್ಲಿ ಸವಾಲಾಗಿ ಉಳಿದರು. ತಂಡದ ರನ್ ಗತಿಯನ್ನು ಹೆಚ್ಚಿಸುವಲ್ಲಿ ಪ್ರಯತ್ನದಲ್ಲಿ ಭರಪೂರ ಯಶಸ್ಸು ಸಾಧಿಸಿದರು. ಭರ್ತಿ 50 ಎಸೆತಗಳನ್ನು ನಿಭಾಯಿಸಿದ ಈ ಜೋಡಿ 5ನೇ ವಿಕೆಟಿಗೆ ಬಹುಮೂಲ್ಯ 83 ರನ್ ಪೇರಿಸಿತು. ಹೆಟ್‌ಮೈರ್ 24 ಎಸೆತಗಳಿಂದ 37 ರನ್ ಬಾರಿಸಿದರೆ (3 ಬೌಂಡರಿ, 1 ಸಿಕ್ಸರ್), ಅಂತಿಮ ಎಸೆತದಲ್ಲಿ ಅರ್ಧ ಶತಕ ಪೂರೈಸಿದ ಪಂತ್ 35 ಎಸೆತಗಳಿಂದ 51 ರನ್ ಬಾರಿಸಿ ಅಜೇಯರಾಗಿ ಉಳಿದರು. ಡೆಲ್ಲಿ ಕಪ್ತಾನನಿಂದ 3 ಬೌಂಡರಿ, 2 ಸಿಕ್ಸರ್ ಸಿಡಿಯಿತು.
ಸ್ಕೋರ್ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಡು ಪ್ಲೆಸಿಸ್ ಬಿ ಜಡೇಜ 60
ಶಿಖರ್ ಧವನ್ ಸಿ ಧೋನಿ ಬಿ ಹ್ಯಾಝಲ್‌ವುಡ್ 7
ಶ್ರೇಯಸ್ ಸಿ ಗಾಯಕ್ವಾಡ್ ಬಿ ಹ್ಯಾಝಲ್‌ವುಡ್ 1
ಅಕ್ಷರ್ ಸಿ ಸ್ಯಾಂಟ್ನರ್ ಬಿ ಅಲಿ 10
ರಿಷಭ್ ಪಂತ್ ಔಟಾಗದೆ 51
ಹೆಟ್‌ಮೈರ್ ಸಿ ಜಡೇಜ ಬಿ ಬ್ರಾವೊ 37
ಟಾಮ್ ಕರನ್ ಔಟಾಗದೆ 0
ಇತರ 6
ಒಟ್ಟು (5 ವಿಕೆಟಿಗೆ) 172
ವಿಕೆಟ್ ಪತನ: 1-36, 2-50, 3-77, 4-80, 5-163.
ಬೌಲಿಂಗ್; ದೀಪಕ್ ಚಹರ್ 3-0-26-0
ಜೋಶ್ ಹ್ಯಾಝಲ್‌ವುಡ್ 4-0-29-2
ಶಾರ್ದೂಲ್ ಠಾಕೂರ್ 3-0-36-0
ರವೀಂದ್ರ ಜಡೇಜ 3-0-23-1
ಮೊಯಿನ್ ಅಲಿ 4-0-27-1
ಡ್ವೇನ್ ಬ್ರಾವೊ 3-0-31-1
ಚೆನ್ನೈ ಸೂಪರ್‌ಕಿಂಗ್ಸ್
ಗಾಯಕ್ವಾಡ್ ಸಿ ಅಕ್ಷರ್ ಬಿ ಅವೇಶ್ 70
ಫಾ ಡು ಪ್ಲೆಸಿಸ್ ಬಿ ನೋರ್ಜೆ 1
ಉತ್ತಪ್ಪ ಸಿ ಅಯ್ಯರ್ ಬಿ ಕರನ್ 63
ಶಾದೂìಲ್ ಸಿ ಅಯ್ಯರ್ ಬಿ ಕರನ್ 0
ರಾಯುಡು ರನೌಟ್ 1
ಮೊಯಿನ್ ಸಿ ರಬಾಡ ಬಿ ಕರನ್ 16
ಎಂ. ಎಸ್. ಧೋನಿ ಔಟಾಗದೆ 18
ಜಡೇಜ ಔಟಾಗದೆ 0
ಇತರ 4
ಒಟ್ಟು (19.4 ಓವರ್‌ಗಳಲ್ಲಿ 6 ವಿಕೆಟಿಗೆ) 173
ವಿಕೆಟ್ ಪತನ:1-3, 2-113, 3-117, 4-119, 5-149, 6-160.
ಬೌಲಿಂಗ್; ಅನ್ರಿಚ್ ನೋರ್ಜೆ 4-0-31-1
ಆವೇಶ್ ಖಾನ್ 4-0-47-1
ಕಾಗಿಸೊ ರಬಾಡ 3-0-23-0
ಅಕ್ಷರ್ ಪಟೇಲ್ 3-0-23-0
ಟಾಮ್ ಕರನ್ 3.4-0-29-3
ಆರ್. ಅಶ್ವಿನ್ 2-0-19-0
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.