ಪೂವಮ್ಮ ಪ್ರಕರಣ; ನಾಡಾ ಮೇಲ್ಮನವಿಗೆ ಜಯ
Team Udayavani, Sep 20, 2022, 9:01 PM IST
ಹೊಸದಿಲ್ಲಿ: ಕರ್ನಾಟಕದ ಆ್ಯತ್ಲೀಟ್, ಏಷ್ಯಾಡ್ ರಿಲೇಯಲ್ಲಿ ಬಂಗಾರ ವಿಜೇತ ತಂಡದ ಸದಸ್ಯೆ ಎಂ.ಆರ್. ಪೂವಮ್ಮ ಉದ್ದೀಪನ ಮದ್ದು ಸೇವಿಸಿ ಎರಡು ವರ್ಷಗಳ ನಿಷೇಧಕ್ಕೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ನಾಡಾ ಸಲ್ಲಿಸಿದ ಮೇಲ್ಮನವಿಗೆ ಗೆಲುವಾಗಿದೆ.
ಫೆ. 18ರಂದು ಪಾಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾನ್‌ಪ್ರಿಕ್ಸ್ ವೇಳೆ ಪೂವಮ್ಮ ಅವರ ಸ್ಯಾಂಪಲ್ ಪಡೆಯಲಾಗಿತ್ತು. ಇದರಲ್ಲಿ “ವಾಡಾ’ ನಿಷೇಧಿಸಿದ ಔಷಧಿ ಪತ್ತೆಯಾಗಿತ್ತು. ಅದರಂತೆ ಜೂನ್‌ನಲ್ಲಿ ಅವರಿಗೆ 3 ತಿಂಗಳ ನಿಷೇಧ ಹೇರಲಾಯಿತು.
ಶಿಸ್ತು ಸಮಿತಿಯ ಈ ನಿರ್ಧಾರದ ವಿರುದ್ಧ “ನಾಡಾ’ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಎತ್ತಿಹಿಡಿಯಲಾಗಿದ್ದು, ಈ ನಿಷೇಧವನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಪೂವಮ್ಮ ಮುಂದಿನ ಏಷ್ಯಾಡ್ ಸೇರಿದಂತೆ ಪ್ರಮುಖ ಜಾಗತಿಕ ಕ್ರೀಡಾಕೂಟಗಳಿಂದ ಹೊರಗುಳಿಯಬೇಕಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.