ಭಾರತವನ್ನು ಸೋಲಿಸಲು ಮೈದಾನದಾಚೆಗೂ ಆಸೀಸಿಗರ ಕಿತಾಪತಿ
Team Udayavani, Jan 23, 2021, 11:26 PM IST
ಮುಂಬೈ: ಭಾರತೀಯ ಕ್ರಿಕೆಟ್ ತಂಡ; ಆಸ್ಟ್ರೇಲಿಯಕ್ಕೆ ಇನ್ನಿಲ್ಲದ ಮುಖಭಂಗ ಉಂಟು ಮಾಡಿ ಸ್ವದೇಶಕ್ಕೆ ಮರಳಿದೆ. ಟೀವಿಯಲ್ಲಿ ಆಟಗಾರರ ಆಟವನ್ನು ನೋಡಿದ ನಮಗೆ, ಅವರು ಸೋತಿದ್ದು, ಗೆದ್ದಿದ್ದು ಮಾತ್ರ ಕಂಡಿದೆ. ಆದರೆ ಟೀವಿಯಲ್ಲಿ ತೋರಿಸದ ಒಂದಷ್ಟು ಸಂಗತಿಗಳಿವೆ. ಗೆಲ್ಲಲು ಆಸ್ಟ್ರೇಲಿಯ ಯಾವ ಮಟ್ಟಕ್ಕೂ ಇಳಿಯಬಹುದು ಎನ್ನುವುದನ್ನು ತಿಳಿಸುವ ಘಟನೆಗಳಿವು. ಅವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಕ್ಷೇತ್ರರಕ್ಷಣೆ ತರಬೇತುದಾರ ಆರ್.ಶ್ರೀಧರ್ ಮತ್ತು ಸ್ಪಿನ್ನರ್ ಆರ್.ಅಶ್ವಿನ್.
ನ.10ಕ್ಕೆ ಐಪಿಎಲ್ ಮುಗಿಯಿತು. ಭಾರತೀಯ ಆಟಗಾರರು ಆಸ್ಟ್ರೇಲಿಯಕ್ಕೆ ಹೊರಡಲು ಸಿದ್ಧವಾಗುತ್ತಿದ್ದರು. ಸರಿಯಾಗಿ 2 ದಿನಗಳ ಮುನ್ನ ಆಟಗಾರರ ಕುಟುಂಬವನ್ನು ಕರೆತರಲು ಸಾಧ್ಯವಿಲ್ಲವೆಂದು ಆಸೀಸ್ ಕ್ರಿಕೆಟ್ ಮಂಡಳಿ ತಿಳಿಸಿತು. 7 ಆಟಗಾರರು ತಮ್ಮ ಕುಟುಂಬವನ್ನು ಜೊತೆಗೆ ಹೊಂದಿದ್ದರು. ಇದು ಹೇಗೆ ಸಾಧ್ಯ? ಕೂಡಲೇ ತಂಡದ ತರಬೇತುದಾರ ರವಿಶಾಶಾಸ್ತ್ರೀ ಮಧ್ಯಪ್ರವೇಶಿಸಿದರು. ಅವರು ಬಿಸಿಸಿಐನೊಂದಿಗೆ ಸಭೆ ನಡೆಸಿ, ಕುಟುಂಬವನ್ನು ಜೊತೆಗೊಯ್ಯಲು ಬಿಡದಿದ್ದರೆ, ನಾವ್ಯಾರೂ ಆಸ್ಟ್ರೇಲಿಯಕ್ಕೆ ತೆರಳುವುದಿಲ್ಲ ಎಂದರು. ಅದನ್ನು ಬಿಸಿಸಿಐ, ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಗೆ ತಿಳಿಸಿತು. ಕೂಡಲೇ ಎಚ್ಚೆತ್ತ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ರಾತ್ರೋರಾತ್ರಿ ಕುಟುಂಬವನ್ನು ಜೊತೆಗೊಯ್ಯಲು ಅನುಮತಿ ನೀಡಿತು!
ಅಲ್ಲಿಂದಲೇ ಆಸ್ಟ್ರೇಲಿಯ ತಂಡ ಭಾರತೀಯ ತಂಡದೊಂದಿಗೆ ಮಾನಸಿಕ ಯುದ್ಧ ಶುರು ಮಾಡಿತ್ತು ಎನ್ನುವುದು ಶ್ರೀಧರ್ ಅಭಿಪ್ರಾಯ. ಇದರ ಬಗ್ಗೆ ರವಿಶಾಸ್ತ್ರೀ ಹೇಳಿದ್ದು ಹೀಗೆ: ನಾನು 40 ವರ್ಷದಿಂದ ಆ ದೇಶಕ್ಕೆ ಹೋಗಿ ಬರುತ್ತಿದ್ದೇನೆ. ಅವರ ಬಗ್ಗೆ ನನಗಿಂತ ಚೆನ್ನಾಗಿ ತಿಳಿದವರಿಲ್ಲ. ಅವರೊಂದಿಗೆ ಹೇಗೆ ಮಾತುಕತೆಯಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು!
ಭಾರತೀಯರು ಗೆಲ್ಲುತ್ತಿದ್ದಂತೆ ವರಸೆ ಬದಲಿಸಿದ ಆಸೀಸ್ :
ಒಂದುಕಡೆ ನಿರಂತರ ಅಣಕವಾಡುತ್ತಿದ್ದ ಆಸ್ಟ್ರೇಲಿಯ ಆಟಗಾರರು, ಮತ್ತೂಂದು ಕಡೆ ಅಲ್ಲಿನ ಕ್ರಿಕೆಟ್ ಮಂಡಳಿಯ ನಾಟಕ. ಆರಂಭದಲ್ಲಿ ಭಾರತೀಯರಿಗೆ 14 ದಿನಗಳ ಕ್ವಾರಂಟೈನ್ ಮುಗಿಸಿದರೆ ಹೊರಗೆ ಕಾಫಿ ಕುಡಿಯಬಹುದು, ಊಟ ಮಾಡಬಹುದು ಎಂದು ತಿಳಿಸಲಾಗಿತ್ತು. ಭಾರತ ಮೆಲ್ಬರ್ನ್ನಲ್ಲಿ ಗೆದ್ದು, ಸರಣಿ 1-1ರಿಂದ ಸಮಬಲವಾದ ಕೂಡಲೇ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯ ವರಸೆ ಬದಲಾಯಿತು. ಭಾರತೀಯರಿಗೆ ಹೋಟೆಲ್ ಕೊಠಡಿಯಿಂದ ಹೊರಹೋಗುವಂತಿಲ್ಲವೆಂದು ಆಸೀಸ್ ಮಂಡಳಿ ತಿಳಿಸಿತು. ಇದನ್ನು ಒಪ್ಪಲು ಆಟಗಾರರು ಸಿದ್ಧರಿರಲಿಲ್ಲ.
ಇದರ ಬಗ್ಗೆ ಅಶ್ವಿನ್ ವಿವರವಾಗಿ ಮಾತನಾಡಿದ್ದಾರೆ. ಸಿಡ್ನಿಯಲ್ಲಿ ಎರಡೂ ತಂಡಗಳ ಆಟಗಾರರು ಒಂದೇ ಜೈವಿಕ ಸುರಕ್ಷಾ ವಲಯದಲ್ಲಿ ಇದ್ದರೂ, ಇಬ್ಬರನ್ನೂ ನಡೆಸಿಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಿತ್ತು. ಒಂದು ವೇಳೆ ಆಸ್ಟ್ರೇಲಿಯ ಕ್ರಿಕೆಟಿಗರು ಲಿಫ್ಟ್ನಲ್ಲಿದ್ದರೆ, ಅದಕ್ಕೆ ಭಾರತೀಯರನ್ನು ಸೇರಿಸುತ್ತಿರಲಿಲ್ಲ. ಇದು ತಮ್ಮೆಲ್ಲರಿಗೂ ನೋವು ತರಿಸಿತ್ತು. ಇವೆಲ್ಲ ಅವರ ಕುತಂತ್ರದ ಒಂದು ಭಾಗವೆಂದು ಅಶ್ವಿನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.