World Blitz : ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರ್. ವೈಶಾಲಿಗೆ ಕಂಚು
Team Udayavani, Jan 1, 2025, 10:54 PM IST
ನ್ಯೂಯಾರ್ಕ್: ಭಾರತದ ಆರ್. ವೈಶಾಲಿ ಬ್ಲಿಟ್ಜ್ ಚೆಸ್ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇತ್ತೀಚೆಗೆ ರ್ಯಾಪಿಡ್ ವಿಭಾಗದಲ್ಲಿ ಕೊನೆರು ಹಂಪಿ ಪ್ರಶಸ್ತಿ ಗೆದ್ದ ಬಳಿಕ ವೈಶಾಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಚೀನದ ಝು ಜಿನರ್ ವಿರುದ್ಧ 2.5-1.5 ಅಂಕಗಳಿಂದ ಜಯಿಸಿದ್ದ ವೈಶಾಲಿ, ಸೆಮಿಫೈನಲ್‌ನಲ್ಲಿ ಚೀನದ ಜು ವೆಂಜುನ್ ವಿರುದ್ಧ 0.5-2.5 ಅಂಕಗಳಿಂದ ಸೋತರು. ಬಳಿಕ ವೆಂಜುನ್ ಫೈನಲ್‌ನಲ್ಲಿ ತಮ್ಮದೇ ನಾಡಿನ ಲೀ ತಿಂಗಿj ವಿರುದ್ಧ 3.5-2.5 ಅಂಕಗಳಿಂದ ಗೆದ್ದು ಚಿನ್ನ ಜಯಿಸಿದರು.
ವೈಶಾಲಿ ಸಾಧನೆಗೆ 5 ಬಾರಿಯ ಮಾಜಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಶುಭಾಶಯ ಹೇಳಿದ್ದಾರೆ. “ಕಂಚು ಗೆದ್ದ ವೈಶಾಲಿಗೆ ಅಭಿನಂದನೆಗಳು. ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮಗೆಲ್ಲ ಹೆಮ್ಮೆಯಾಗಿದೆ’ ಎಂದು ವಿಶಿ ಟ್ವೀಟ್ ಮಾಡಿದ್ದಾರೆ.
ಜಂಟಿ ಚಾಂಪಿಯನ್ಸ್
ಪುರುಷರ ವಿಭಾಗದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್, ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ಜಂಟಿ ಚಾಂಪಿಯನ್ ಆಗಿದ್ದಾರೆ. ಚೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ಹಾಗೆಯೇ ಈ ನಡೆ ವಿವಾದಕ್ಕೂ ಕಾರಣವಾಗಿದೆ.
ಫೈನಲ್‌ನಲ್ಲಿ ಕಾರ್ಲ್ಸನ್ ಆರಂಭದ 2 ಪಂದ್ಯ ಗೆದ್ದರು. ಅನಂತರ ನೆಪೋಮ್ನಿಯಾಚ್ಚಿ 2 ಪಂದ್ಯ ಗೆದ್ದರು. ಪಂದ್ಯ 2-2 ಅಂಕಗಳಿಂದ ಸಮಗೊಂಡಿತು. ಹೀಗಾಗಿ ಟೈಬ್ರೇಕರ್‌ಗೆ ಹೋಗಲು ನಿರ್ಧರಿಸಲಾಯಿತು. ಕಿರು ಅವಧಿಯ ಮೂರೂ ಪಂದ್ಯಗಳು ಡ್ರಾಗೊಂಡ ಅನಂತರ ಸ್ವತಃ ಕಾಲ್ಸìನ್ ಪ್ರಶಸ್ತಿಯನ್ನು ಹಂಚಿಕೊಳ್ಳುವ ಸಲಹೆ ನೀಡಿದರು. ಇದನ್ನು ನೆಪೋಮ್ನಿಯಾಚ್ಚಿ ಮತ್ತು ಫಿಡೆ ಒಪ್ಪಿಕೊಂಡಿತು.
ಟೈಬ್ರೇಕರ್‌ನ ಮೂರೂ ಪಂದ್ಯಗಳು ಡ್ರಾಗೊಂಡ ಬಳಿಕ ಕಾಲ್ಸನ್-ನೆಪೋಮ್ನಿಯಾಚ್ಚಿ ಒಂದು ಬದಿಯಲ್ಲಿ ಪ್ರಶಸ್ತಿ ಹಂಚಿಕೊಳ್ಳುವ ಕುರಿತು ಮಾತನಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಆ ಪ್ರಕಾರ ಒಂದು ವೇಳೆ ಪ್ರಶಸ್ತಿ ಹಂಚಿಕೊಳ್ಳಲು ಫಿಡೆ ಸಮ್ಮತಿಸದಿದ್ದರೆ, ಸತತವಾಗಿ ಡ್ರಾ ಮಾಡಿಕೊಳ್ಳುತ್ತಲೇ ಹೋಗೋಣ ಎಂದಿ ದ್ದಾರೆನ್ನಲಾಗಿದೆ. ಇದು ಫಿಕ್ಸಿಂಗ್ ಎಂದು ಚೆಸ್ ವಲಯದಲ್ಲಿ ಆರೋಪಗಳು ಕೇಳಿಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.