ನಡಾಲ್ ವರ್ಸಸ್ ವಾವ್ರಿಂಕ
Team Udayavani, Jun 11, 2017, 3:45 AM IST
ಪ್ಯಾರಿಸ್: “ಕ್ಲೇ ಕೋರ್ಟ್ ಕಿಂಗ್’ ರಫೆಲ್ ನಡಾಲ್ 10ನೇ ಸಲ ಫ್ರೆಂಚ್ ಓಪನ್ ಫೈನಲಿಗೆ ಲಗ್ಗೆ ಇರಿಸಿದ್ದಾರೆ. ಹಿಂದಿನ 9 ಸಲವೂ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ನಡಾಲ್ ಅವರದು. ಹೀಗಾಗಿ ದಾಖಲೆ 10ನೇ ಸಲ “ರೊಲ್ಯಾಂಡ್ ಗ್ಯಾರೋಸ್’ನಲ್ಲಿ ಕಿರೀಟ ಏರಿಸಿಕೊಳ್ಳುವ ನೆಚ್ಚಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ ಸ್ಪೇನಿಗನ ಎದುರಾಳಿ ಸ್ವಿಟ್ಸರ್‌ಲ್ಯಾಂಡಿನ ಸ್ಟಾನಿಸ್ಲಾಸ್ ವಾವ್ರಿಂಕ. ಇವರಿಗೆ 2015ರಲ್ಲಿ ಪ್ಯಾರಿಸ್ ಪ್ರಶಸ್ತಿ ಒಲಿದಿತ್ತು.
ಇವರಿಬ್ಬರ ನಡುವಿನ ಕಾಳಗ ಭಾರತೀಯ ಕಾಲಮಾನದ ಪ್ರಕಾರ ರವಿವಾರ ಸಂಜೆ 6.30ಕ್ಕೆ ಆರಂಭವಾಗಲಿದೆ.
ಶುಕ್ರವಾರ ರಾತ್ರಿಯ ಪುರುಷರ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಆಸ್ಟ್ರಿಯಾದ ಅಚ್ಚರಿಯ ಸರದಾರ ಡೊಮಿನಿಕ್ ಥೀಮ್ ಅವರನ್ನು 6-3, 6-4, 6-0 ಅಂತರದಿಂದ ಹಿಮ್ಮೆಟ್ಟಿಸಿದರು. ಹಾಲಿ ಚಾಂಪಿ ಯನ್ ನೊವಾಕ್ ಜೊಕೋವಿಕ್ ಅವರನ್ನು ಮಣಿಸಿ ದೊಡ್ಡ ಹೀರೋ ಎನಿಸಿಕೊಂಡಿದ್ದ ಥೀಮ್ ಆಟ ನಡಾಲ್ ಎದುರು ನಡೆಯಲಿಲ್ಲ. 1995ರ ಬಳಿಕ ಗ್ರ್ಯಾನ್‌ಸ್ಲಾಮ್ ಫೈನಲ್ ಪ್ರವೇಶಿಸಿದ ಕೇವಲ 2ನೇ ಆಸ್ಟ್ರಿಯನ್ ಟೆನಿಸಿಗನೆಂಬ ಹೆಗ್ಗಳಿಕೆಯಿಂದ ಥೀಮ್ ದೂರವೇ ಉಳಿದರು. ಅಂದು ಥಾಮಸ್ ಮಸ್ಟರ್ ಈ ಸಾಧನೆ ಮಾಡಿದ್ದರು. ಜತೆಗೆ ಮಸ್ಟರ್ ಪ್ರಶಸ್ತಿಯನ್ನೂ ಎತ್ತಿದ್ದರು.
ಮೊದಲ ಉಪಾಂತ್ಯದಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕ ಬ್ರಿಟನ್ನಿನ ಆ್ಯಂಡಿ ಮರ್ರೆ ಅವರನ್ನು 5 ಸೆಟ್‌ಗಳ ಉಗ್ರ ಕಾದಾಟದ ಬಳಿಕ 6-7 (6-8), 6-3, 5-7, 7-6 (7-3), 6-1ರಿಂದ ಮಣಿಸುವಲ್ಲಿ ಯಶಸ್ವಿಯಾಗಿದ್ದರು.”ಆರಂಭದಲ್ಲಿ ನಾನು ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ಕೂಡಲೇ ಲಯಕ್ಕೆ ಮರಳಿದೆ. ಥೀಮ್ ಇಲ್ಲಿ ಬಹಳಷ್ಟು ತಪ್ಪು ಮಾಡಿದರು. ಬಲವಾಗಿ ಬೀಸುತ್ತಿದ್ದ ಗಾಳಿ ಕೂಡ ಇದಕ್ಕೆ ಕಾರಣವಾಗಿರಬಹುದು…’ ಎಂದು ರಫೆಲ್ ನಡಾಲ್ ಪ್ರತಿಕ್ರಿಯಿಸಿದರು.
ನಡಾಲ್ 15-3 ಮುನ್ನಡೆ
ಹಿಂದಿನ 9 ಫೈನಲ್‌ಗಳಲ್ಲೂ ಚಾಂಪಿಯನ್ ಆಗಿ ಮೂಡಿಬಂದಿದ್ದ ರಫೆಲ್ ನಡಾಲ್ ರವಿವಾರವೂ ಈ ಸಾಧನೆಯನ್ನು ಪುನರಾವರ್ತಿಸಿದರೆ 10 ಸಲ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಟೆನಿಸಿಗನೆಂಬ ಹಿರಿಮೆಯನ್ನು ಒಲಿಸಿಕೊಳ್ಳಲಿದ್ದಾರೆ. ವಾವ್ರಿಂಕ ವಿರುದ್ಧ 15-3 ಗೆಲುವಿನ ದಾಖಲೆ ಹೊಂದಿರುವುದರಿಂದ ನಡಾಲ್ ಅವರೇ ನೆಚ್ಚಿನ ಆಟಗಾರನಾಗಿ ಗುರುತಿಸಲ್ಪಟ್ಟಿದ್ದಾರೆ. ಆದರೆ 3 ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನಡಾಲ್ ಅವರನ್ನೇ ಮಣಿಸುವ ಮೂಲಕ ವಾವ್ರಿಂಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದನ್ನು ಮರೆಯುವಂತಿಲ್ಲ. 32ರ ಹರೆಯದ ವಾವ್ರಿಂಕ ಕಳೆದ 44 ವರ್ಷಗಳಲ್ಲೇ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ ಅತೀ ಹಿರಿಯ ಆಟಗಾರನಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.