ಯುಎಸ್ ಸಾಮ್ರಾಜ್ಯಕ್ಕೆ ನಡಾಲ್ ಸಾಮ್ರಾಟ್
Team Udayavani, Sep 12, 2017, 6:20 AM IST
ನ್ಯೂಯಾರ್ಕ್: ವಿಶ್ವದ ನಂಬರ್ ವನ್ ಟೆನಿಸಿಗ, ಸ್ಪೇನಿನ ರಫೆಲ್ ನಡಾಲ್ ನ್ಯೂಯಾರ್ಕ್‌ನಲ್ಲಿ “ಯುಎಸ್ ಓಪನ್ ಚಾಂಪಿಯನ್’ ನಗುವನ್ನು ಹೊಮ್ಮಿಸಿದ್ದಾರೆ. ರವಿವಾರ ಪ್ರಶಸ್ತಿ ಕಾಳಗದಲ್ಲಿ, ಇದೇ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಫೈನಲಿಗೆ ಬಂದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು ನಡಾಲ್ 6 3, 6 3, 6 4 ನೇರ ಸೆಟ್‌ಗಳಿಂದ ಸುಲಭದಲ್ಲಿ ಹಿಮ್ಮೆಟ್ಟಿಸಿದರು.
ಇದು ರಫೆಲ್ ನಡಾಲ್ ಗೆದ್ದ 3ನೇ ಯುಎಸ್ ಓಪನ್ ಪ್ರಶಸ್ತಿಯಾದರೆ, ಒಟ್ಟಾರೆಯಾಗಿ ಏರಿಸಿಕೊಂಡ 16ನೇ ಗ್ರ್ಯಾನ್‌ಸ್ಲಾಮ್ ಕಿರೀಟ. ಈ ಲೆಕ್ಕಾಚಾರದಲ್ಲಿ, ಪುರುಷರ ವಿಭಾಗದಲ್ಲಿ ನಡಾಲ್‌ಗಿಂತ ಮುಂದಿರುವ ಏಕೈಕ ಆಟಗಾರನೆಂದರೆ ರೋಜರ್ ಫೆಡರರ್ (19).
2017ರಲ್ಲೇ ಮರಳಿ ನಂ.1 ಪಟ್ಟ ಅಲಂಕರಿಸಿದ ರಫೆಲ್ ನಡಾಲ್ ಈ ವರ್ಷ ಗೆದ್ದ 2ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಇದಾಗಿದೆ. ಫ್ರೆಂಚ್ ಓಪನ್‌ನಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕ ಅವರನ್ನು ಮಣಿಸುವ ಮೂಲಕ ದಾಖಲೆ 10ನೇ ಸಲ “ರೊಲ್ಯಾಂಡ್ ಗ್ಯಾರಸ್ ಕಿಂಗ್’ ಆಗಿ ಮೂಡಿಬಂದಿದ್ದರು.
ಹಿಂದಿನ ಎದುರಾಳಿ ಜೊಕೋ
ರಫೆಲ್ ನಡಾಲ್ ಇದಕ್ಕೂ ಮುನ್ನ 2010 ಮತ್ತು 2013ರಲ್ಲಿ ಯುಎಸ್ ಓಪನ್ ಚಾಂಪಿಯನ್ ಆಗಿದ್ದರು. ಹಿಂದಿನೆರಡೂ ಸಲ ಅವರು ಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ ಅವರನ್ನು 4 ಸೆಟ್‌ಗಳ ಕಾದಾಟದಲ್ಲಿ ಮಣಿಸಿದ್ದರು. ಈವರೆಗೆ ಒಟ್ಟು 23 ಸಲ ಗ್ರ್ಯಾನ್‌ಸ್ಲಾಮ್ ಫೈನಲ್ ಪ್ರವೇಶಿಸಿದ್ದು, 7 ಸಲ ಪ್ರಶಸ್ತಿ ವಂಚಿತರಾಗಿದ್ದಾರೆ.
ಜೊಕೋವಿಕ್, ಮರ್ರೆ, ವಾವ್ರಿಂಕ ಮೊದಲಾದ ಸ್ಟಾರ್ ಟೆನಿಸಿಗರು ಗಾಯಾಳಾಗಿ ಈ ಬಾರಿಯ ಯುಎಸ್ ಓಪನ್‌ನಿಂದ ಹಿಂದೆ ಸರಿದುದರಿಂದ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ನೆಚ್ಚಿನ ಆಟಗಾರರಾಗಿದ್ದರು. ಆದರೆ ಫೆಡರರ್ ಕ್ವಾರ್ಟರ್ ಫೈನಲ್‌ನಲ್ಲೇ ಹೊರಬಿದ್ದರು. ಕೆವಿನ್ ಆ್ಯಂಡರ್ಸನ್ ಅಚ್ಚರಿಯೆಂಬಂತೆ ಫೈನಲಿಗೆ ಏರಿ ಬಂದರು. ಇವರೆದುರು ನಡಾಲ್ ಸೊಲುವ ಪ್ರಶ್ನೆಯೇ ಇಲ್ಲ ಎಂಬ ಟೆನಿಸ್ ಪಂಡಿತರ ಲೆಕ್ಕಾಚಾರ ಸುಳ್ಳಾಗಲಿಲ್ಲ!
“ವೈಯಕ್ತಿಕವಾಗಿ ಹೇಳುವುದಾದರೆ ಈ ವರ್ಷದಲ್ಲಿ ಏನು ಸಂಭವಿಸಿತೋ ಅದನ್ನು ನಾನು ನಂಬುವ ಸ್ಥಿತಿಯಲ್ಲಿಲ್ಲ. 2 ವರ್ಷಗಳ ಗಾಯದ ಸಮಸ್ಯೆಯಿಂದಾಗಿ ನನಗೆ ಅಷ್ಟೇನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೂ 2 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ನನ್ನ ಪಾಲಾಯಿತು…’ ಎಂಬುದಾಗಿ ರಫೆಲ್ ನಡಾಲ್ ಪ್ರತಿಕ್ರಿಯಿಸಿದ್ದಾರೆ.
“ನಡಾಲ್ ನನ್ನ ಐಡಲ್’
32ರಷ್ಟು ಕೆಳ ರ್‍ಯಾಂಕಿಂಗಿನ ಕೆವಿನ್ ಆ್ಯಂಡರ್ಸನ್ ಈವರೆಗೆ ಗ್ರ್ಯಾನ್‌ಸ್ಲಾಮ್‌ನಲ್ಲಿ ಕ್ವಾರ್ಟರ್ ಫೈನಲ್ ದಾಟಿದವರಲ್ಲ. ಅವರು ಫೈನಲ್ ತಲುಪಲು 34 ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗಳ ತನಕ ಕಾಯಬೇಕಾಯಿತು.
“ನಡಾಲ್, ನೀವು ನನ್ನ ಪಾಲಿನ ನಿಜವಾದ ಐಡಲ್. ನಿಮ್ಮೆದುರು ಆಡುವುದು ಅತ್ಯಂತ ಕಷ್ಟ. ಅದು ಈ ರಾತ್ರಿ ಸಾಬೀತಾಯಿತು. ನಾವಿಬ್ಬರೂ ಒಂದೇ ವಯಸ್ಸಿನವರು. ಆದರೆ ಜೀವಮಾನವಿಡೀ ನಿಮ್ಮ ಆಟವನ್ನು ಆಸ್ವಾದಿಸುತ್ತಲೇ ಬಂದಂತೆ ನನಗನಿಸುತ್ತದೆ…’ ಎಂಬುದು ಗ್ರ್ಯಾನ್‌ಸ್ಲಾಮ್ ಚರಿತ್ರೆಯಲ್ಲೇ ಫೈನಲ್ ತಲುಪಿದ ಅತ್ಯಂತ ಎತ್ತರದ ಆಟಗಾರನಾದ (6 ಅಡಿ, 8 ಇಂಚು) ಕೆವಿನ್ ಆ್ಯಂಡರ್ಸನ್ ಪ್ರತಿಕ್ರಿಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.