ಸ್ಮಿತ್ ಸಿಡಿತದ ನಿರೀಕ್ಷೆಯಲ್ಲಿ ರಾಜಸ್ಥಾನ್
ಜೈಪುರದಲ್ಲಿ ರಹಾನೆ-ಅಶ್ವಿನ್ ತಂಡಗಳ ಕಾಳಗ
Team Udayavani, Mar 25, 2019, 6:17 AM IST
ಜೈಪುರ: ಸೋಮವಾರದ ಐಪಿಎಲ್ ಹಣಾಹಣಿಯಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ತಂಡಗಳು ಪರಸ್ಪರ ಸೆಣಸಲಿವೆ. ಜೈಪುರದಲ್ಲಿ ನಡೆಯುವ ಈ ಪಂದ್ಯದ ಕುತೂಹಲವೆಂದರೆ, ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಬ್ಯಾಟಿಂಗ್ ಲಯ ಕಂಡುಕೊಳ್ಳಬಹುದೇ ಎಂಬುದು. ಇದು ರಾಜಸ್ಥಾನ್ ಯಶಸ್ಸಿನ ದೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಸ್ಮಿತ್ ಜತೆ ನಿಷೇಧಕ್ಕೊಳಗಾಗಿದ್ದ ಡೇವಿಡ್ ವಾರ್ನರ್ ರವಿವಾರ ಭರ್ಜರಿ ಪುನರಾಗಮನ ಸಾರಿದ್ದಾರೆ. ಇದು ಸ್ಮಿತ್ ಅವರಿಗೂ ಸ್ಫೂರ್ತಿಯಾದೀತೇ ಎಂಬ ನಿರೀಕ್ಷೆ ಎಲ್ಲರದೂ. ನಿಷೇಧದ ವೇಳೆ ಸ್ಮಿತ್ ಕಳೆದ ವರ್ಷಾಂತ್ಯ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಕೆಲವು ಪಂದ್ಯಗಳಾನ್ನಡಿದರು. ಅಷ್ಟರಲ್ಲಿ ಮಣಿಗಂಟಿನ ನೋವಿನಿಂದ ಹೊರಗುಳಿದರು. ಸ್ಮಿತ್ ಅಥವಾ ವಾರ್ನರ್ ಅವರ ನಿಷೇಧ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗೇ ಹೊರತು ಡೊಮೆಸ್ಟಿಕ್ ಅಥವಾ ಕ್ಲಬ್ ಕ್ರಿಕೆಟಿಗಲ್ಲ. ಇನ್ನು ನಾಲ್ಕೇ ದಿನಗಳಲ್ಲಿ ಇವರ ನಿಷೇಧದ ಅವಧಿ ಮುಗಿಯಲಿದೆ. ಈ ಖುಷಿಯಲ್ಲಿ ಸ್ಮಿತ್ ಆಡಿದರೆ ಕ್ಲಿಕ್ ಆಗುವುದರಲ್ಲಿ ಅನುಮಾನವಿಲ್ಲ.
ಸ್ಟೋಕ್ಸ್, ಬಟ್ಲರ್ ಸ್ಟಾರ್
ಬೆನ್ ಸ್ಟೋಕ್ಸ್ ಮತ್ತು ಜಾಸ್ ಬಟ್ಲರ್ ರಾಜಸ್ಥಾನ್ ತಂಡದ ಸ್ಟಾರ್ ಆಟಗಾರರು. ಕಳೆದ ವರ್ಷ ಬಟ್ಲರ್ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಬಾರಿ ಎ. 25ರ ತನಕ ಮಾತ್ರ ಐಪಿಎಲ್‌ಗೆ ಇವರ ಸೇವೆ ಸಿಗಲಿದೆ. ಬಳಿಕ ವಿಶ್ವಕಪ್‌ಗಾಗಿ ಇಸಿಬಿ ಇವರನ್ನು ವಾಪಸ್ ಕರೆದುಕೊಳ್ಳಲಿದೆ. ಅಷ್ಟರೊಳಗೆ ರಾಜಸ್ಥಾನ್ ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ.
ದುಬಾರಿ ಬೌಲರ್ ಜೈದೇವ್ ಉನಾ ದ್ಕತ್, ಕೆ. ಗೌತಮ್, ಧವಳ್ ಕುಲಕರ್ಣಿ, ವರುಣ್ ಆರೋನ್, ರಾಹುಲ್ ತ್ರಿಪಾಠಿ, ಶ್ರೇಯಸ್ ಗೋಪಾಲ್ ಅವರನ್ನೊಳಗೊಂಡ ಭಾರತದ ಬೌಲಿಂಗ್ ಪಡೆಯನ್ನು ರಾಜಸ್ಥಾನ್ ಹೊಂದಿದೆ.
ರಾಹುಲ್, ಗೇಲ್ ಬಲ
ಆರ್. ಅಶ್ವಿನ್ ಸಾರಥ್ಯದ ಪಂಜಾಬ್ ಆರಂಭಿಕರಾದ ಗೇಲ್-ರಾಹುಲ್ ಜೋಡಿಯನ್ನು ಹೆಚ್ಚು ಅವಲಂಬಿಸಿದೆ. ಅಗರ್ವಾಲ್, ನಾಯರ್, ಮಿಲ್ಲರ್, ಕರನ್ ಅವರನ್ನೊಳಗೊಂಡ ಪಂಜಾಬ್ ಬ್ಯಾಟಿಂಗ್ ವಿಭಾಗ ಸಾಕಷ್ಟು ವೈವಿಧ್ಯಮಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.