Barbados; 27 ವರ್ಷಗಳ ಹಿಂದಿನ ಪಂದ್ಯ ನೆನಪಿಸಿದ ರಿಪೋರ್ಟರ್; ತಾಳ್ಮೆ ಕಳೆದುಕೊಂಡ ದ್ರಾವಿಡ್
Team Udayavani, Jun 20, 2024, 10:26 AM IST
ಬಾರ್ಬಡೋಸ್: ಟಿ20 ವಿಶ್ವಕಪ್ ನ್ ಸೂಪರ್ 8 ಹಂತಕ್ಕೆ ಭಾರತ ತಲುಪಿದೆ. ಇಂದು ಅಫ್ಘಾನಿಸ್ತಾನ ವಿರುದ್ದ ಭಾರತ ಮೊದಲ ಸೂಪರ್ 8 ಪಂದ್ಯ ಆಡಲಿದೆ. ಬಾರ್ಬಡೋಸ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
ಪಂದ್ಯಕ್ಕೂ ಮೊದಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಸದಾ ತಾಳ್ಮೆಯಲ್ಲಿರುವ ರಾಹುಲ್ ಪತ್ರಕರ್ತರೊಬ್ಬರ ಪ್ರಶ್ನೆಗೆ ಕೋಪಗೊಂಡ ಘಟನೆ ನಡೆದಿದೆ.
ಪತ್ರಕರ್ತರೊಬ್ಬರು 27 ವರ್ಷಗಳ ಹಿಂದಿನ ಪಂದ್ಯವೊಂದನ್ನು ನೆನಪಿಸಿ, ಬಾರ್ಬಡೋಸ್ ಮೈದಾನದಲ್ಲಿ ರಾಹುಲ್ ದ್ರಾವಿಡ್ ಅವರ ಬಗ್ಗೆ ವ್ಯಂಗ್ಯದ ಪ್ರಶ್ನೆಯೊಂದನ್ನು ಎಸೆದರು. ಈ ಪ್ರಶ್ನೆಗೆ ರಾಹುಲ್ ತುಸು ಕೋಪದಿಂದಲೇ ಉತ್ತರಿಸಿದರು.
ವರದಿಗಾರ: “ರಾಹುಲ್, ನೀವು ಆಟಗಾರನಾಗಿ, ನೀವು ಇಲ್ಲಿ ಆಡಿದ್ದೀರಿ. 97 ಟೆಸ್ಟ್‌ನ ಅತ್ಯುತ್ತಮ ನೆನಪುಗಳಲ್ಲವೇ?”
ರಾಹುಲ್: ಧನ್ಯವಾದಗಳು ಗೆಳೆಯ! ನಾನು ಇಲ್ಲಿ ಇತರ ಉತ್ತಮ ನೆನಪುಗಳನ್ನೂ ಹೊಂದಿದ್ದೇನೆ.
ವರದಿಗಾರ: “ಇದು ನಿಜವಾಗಿ ನನ್ನ ಪ್ರಶ್ನೆಯಾಗಿದೆ. ನಾಳೆ ಹೊಸ ಮತ್ತು ಹೆಚ್ಚು ಉತ್ತಮವಾದ ನೆನಪುಗಳನ್ನು ಮಾಡಲು ನಿಮಗೆ ಅವಕಾಶವಿದೆಯೇ?”
ರಾಹುಲ್: ದೇವರೇ, ನಾನು ಹೊಸದನ್ನು ಮಾಡಲು ಪ್ರಯತ್ನಿಸುತ್ತಿಲ್ಲ!
ರಾಹುಲ್ ದ್ರಾವಿಡ್ ಅವರು 1997ರ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ಭಾಗವಾಗಿದ್ದರು. ಬಾರ್ಬಡೋಸ್ ಟೆಸ್ಟ್ ಪಂದ್ಯದಲ್ಲಿ ಅವರು ಎರಡು ಇನ್ನಿಂಗ್ಸ್ ನಲ್ಲಿ 78 ರನ್ ಮತ್ತು 2 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ 38 ರನ್ ಗಳಿಂದ ಸೋಲು ಕಂಡಿತ್ತು.
“ನಾನು ಯಾವುದೇ ವಿಷಯದಿಂದ ಬೇಗನೇ ಹೊರಬರುತ್ತೇನೆ. ಅದು ನನ್ನ ವೈಶಿಷ್ಟ್ಯ. ನಾನು ಪದೇ ಪದೇ ಹಿಂತುರುಗಿ ನೋಡುವುದಿಲ್ಲ. ನಾನು ಸದ್ಯ ಏನು ಮಾಡುತ್ತಿದ್ದೇನೆ ಎನ್ನುವುದರ ಬಗ್ಗೆ ಅಷ್ಟೇ ಚಿಂತೆ ಮಾಡುತ್ತೇನೆ. 1997ರಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ” ಎಂದು ರಾಹುಲ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.