Dharamsala Test ; ಕೆ.ಎಲ್.ರಾಹುಲ್ ಆಡುವ ಸಾಧ್ಯತೆ ವಿರಳ: ಬುಮ್ರಾ ತಂಡಕ್ಕೆ
ಅಭಿಪ್ರಾಯವನ್ನು ಪಡೆಯಲು ಲಂಡನ್‌ಗೆ ಪ್ರಯಾಣ...
Team Udayavani, Feb 28, 2024, 4:57 PM IST
ಧರ್ಮಶಾಲಾ: ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮ್ಯಾನ್ ಕೆ.ಎಲ್. ರಾಹುಲ್ ಅವರು ಆಡುವ ಸಾಧ್ಯತೆ ವಿರಳ ಎಂದು ಹೇಳಲಾಗಿದೆ.
ಜನವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆದ ಸರಣಿ ಆರಂಭ ಪಂದ್ಯದ ನಂತರ ರಾಹುಲ್ ಅವರು ಬಲ ತೊಡೆಯ ನೋವಿನಿಂದ ಅಲಭ್ಯರಾಗಿದ್ದರು. ಆದರೆ ಬಿಸಿಸಿಐ ಪ್ರಕಾರ, ಈ ತಿಂಗಳ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ಗೆ ಮೊದಲು ಅವರು 90 ಪ್ರತಿಶತದಷ್ಟು ಫಿಟ್ ಆಗಿದ್ದರು.
ಸದ್ಯ ಗಾಯದ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪಡೆಯಲು ಲಂಡನ್‌ಗೆ ಪ್ರಯಾಣಿಸಿದ್ದು, ಸರಣಿಯ ಮಾರ್ಚ್ 7 ರಿಂದ ಪ್ರಾರಂಭವಾಗುವ ಧರ್ಮಶಾಲಾ ಟೆಸ್ಟ್‌ನಲ್ಲಿ ಅವರನ್ನು ಆಡಲಿಳಿಸುವ ಅಪಾಯವನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ತೆಗೆದುಕೊಳ್ಳುವುದಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ಅನ್ನು ಮುನ್ನಡೆಸಲಿರುವ ರಾಹುಲ್ ಐಪಿಎಲ್‌ಗೆ ಮೊದಲು ಸಂಪೂರ್ಣವಾಗಿ ಫಿಟ್ ಆಗಿರಬೇಕಾಗಿದ್ದು, ಆಬಳಿಕ ಮತ್ತು ಯು ಎಸ್ ಮತ್ತು ಕೆರಿಬಿಯನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗಿದೆ.
”ತಜ್ಞರ ಅಭಿಪ್ರಾಯವನ್ನು ಪಡೆಯಲು ಲಂಡನ್‌ಗೆ ಪ್ರಯಾನಿಸಿದ್ದು, ಬ್ಯಾಟಿಂಗ್ ಮಾಡುವಾಗ ಬಲ ತೊಡೆಯಲ್ಲಿ ಸ್ವಲ್ಪ ನೋವು ಅನುಭವಿಸುತ್ತಾರೆ. ತಂಡಕ್ಕೆ ದೀರ್ಘಾವಧಿಯ ಅಗತ್ಯವಿರುವ ಆಟಗಾರನಾಗಿರುವುದರಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಅವರ ದಾರಿಯಲ್ಲಿ ತುಂಬಾ ಸ್ಪರ್ಧೆ ಇದ್ದು, ಐಪಿಎಲ್, ಟಿ 20 ವಿಶ್ವಕಪ್ ನಲ್ಲಿಯೂ ಇರಬಹುದು. ನಂತರ ನಾವು ನ್ಯೂಜಿ ಲ್ಯಾಂಡ್ ವಿರುದ್ಧ ಕೆಲವು ಪ್ರಮುಖ ಟೆಸ್ಟ್ ಸರಣಿಗಳನ್ನು ಆಡಲಿದ್ದೇವೆ. ಅವರು ಆಡುವುದಕ್ಕಿಂತ ಸರಿಯಾಗಿ ಚೇತರಿಸಿಕೊಳ್ಳಲು ಸಮಯ ನೀಡುವುದು ಉತ್ತಮ ಎಂದು ಮ್ಯಾನೇಜ್ಮೆಂಟ್ ಅಭಿಪ್ರಾಯ ಹೊಂದಿರುವುದಾಗಿ ಐಪಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ.
ಟೆಸ್ಟ್ ಸರಣಯಲ್ಲಿ ರಾಹುಲ್ ಜಾಗದಲ್ಲಿ ರಜತ್ ಪಾಟಿದಾರ್ ತಂಡದಲ್ಲಿದ್ದರು. ಆದರೆ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 63 ರನ್ ಗಳಿಸಿರುವ ಕಾರಣ ಆಡುವ ಹನ್ನೊಂದರ ಬಳಗದಲ್ಲಿ ಅವರ ಸ್ಥಾನವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾಗಿದೆ. ಧರ್ಮಶಾಲಾದಲ್ಲಿ ದೇವದತ್ ಪಡಿಕ್ಕಲ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಬುಮ್ರಾ ವಾಪಸ್
ರಾಂಚಿ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಭಾರತದ ಪ್ರೀಮಿಯರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದೆ. ಸರಣಿಯನ್ನು ಗೆದ್ದಾಗಿದೆಯಾದರೂ ರೆ ಪ್ರತಿ ಟೆಸ್ಟ್ ಪಂದ್ಯವು ನಿರ್ಣಾಯಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ನೀಡುತ್ತದೆ ಮತ್ತು ಧರ್ಮಶಾಲಾದ ತಂಪಾದ ವಾತಾವರಣದಲ್ಲಿ ಬುಮ್ರಾ ದೊಡ್ಡ ಪಾತ್ರವನ್ನು ವಹಿಸುವ ನಿರೀಕ್ಷೆ ಇರಿಸಲಾಗಿದೆ.
ಭಾರತ ಐದು ಗೆಲುವು, ಎರಡು ಸೋಲು ಹಾಗೂ ಒಂದು ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನ್ಯೂಜಿ ಲ್ಯಾಂಡ್ 75 ಗೆಲುವಿನ ಶೇಕಡಾವಾರು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅವರು ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Hockey; ಕರ್ನಾಟಕಕ್ಕೆ ಜಯ
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
MUST WATCH
ಹೊಸ ಸೇರ್ಪಡೆ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.