ಇನ್ನಿಂಗ್ಸ್ ಮುನ್ನಡೆಗಾಗಿ ರೈಲ್ವೇಸ್ ಹೋರಾಟ
Team Udayavani, Nov 27, 2017, 12:16 PM IST
ಹೊಸದಿಲ್ಲಿ: ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಅಂತಿಮ ಲೀಗ್ ಪಂದ್ಯದಲ್ಲಿ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ಪಡೆ ನೀಡಿರುವ ಸವಾಲಿಗೆ ರೈಲ್ವೇಸ್ ದಿಟ್ಟ ಉತ್ತರ ನೀಡುತ್ತಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ರೈಲ್ವೇಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟಿಗೆ 241 ರನ್ ಗಳಿಸಿದೆ. ರೈಲ್ವೇಸ್ ಇನ್ನಿಂಗ್ಸ್ ಮುನ್ನಡೆ ಪಡೆಯಬೇಕಾದರೆ ಇನ್ನು ಉಳಿದ 6 ವಿಕೆಟ್‌ನಲ್ಲಿ 194 ರನ್ ಬಾರಿಸಬೇಕಾಗಿದೆ.
ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 6 ವಿಕೆಟ್‌ಗೆ 355 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿತ್ತು. ರವಿವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತನ್ನ ಮೊತ್ತವನ್ನು 434 ರನ್ನಿಗೆ ವಿಸ್ತರಿಸಿತು. ಶ್ರೇಯಸ್, ಮಿಥುನ್ ವೇಗದ ಆಟ: ಒಂದು ಹಂತದಲ್ಲಿ ಕರ್ನಾಟಕ ತಂಡ 9 ವಿಕೆಟ್‌ಗೆ 388 ರನ್ ಬಾರಿಸಿ ಇನ್ನೇನು 400 ಗಡಿ ದಾಟುವುದು ಅನುಮಾನದಲ್ಲಿತ್ತು. ಆದರೆ ಶ್ರೇಯಸ್ ಗೋಪಾಲ್ ಮತ್ತು ಅಭಿಮನ್ಯು ಮಿಥುನ್ ಅಂತಿಮ ವಿಕೆಟಿಗೆ 46 ರನ್‌ಗಳ ಜತೆಯಾಟ ನೀಡಿದರು. ಆದರೆ ಮಿಥುನ್ ಅವರನ್ನು ಔಟ್ ಮಾಡುವ ಮೂಲಕ ಅಮಿತ್ ಮಿಶ್ರಾ ಈ ಜೋಡಿಯನ್ನು ಬೇರ್ಪಡಿಸಿದರು. ಶ್ರೇಯಸ್ 65 ಎಸೆತದಲ್ಲಿ ಅಜೇಯ 44 ರನ್ ಬಾರಿಸಿದರು. ಮಿಥುನ್ 30 ಎಸೆತದಲ್ಲಿ 31 ರನ್ ಬಾರಿಸಿ ಔಟ್ ಆದರು.
ಆರಂಭದಲ್ಲಿ ಎಡವಿದ ರೈಲ್ವೇಸ್: ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್‌ಗೆ ಕರ್ನಾಟಕ ಬೌಲರ್‌ಗಳು ಆರಂಭದಲ್ಲಿಯೇ ಆಘಾತ ನೀಡಿದ್ದರು. ಶಿವಕಾಂತ್ ಶುಕ್ಲಾ (28 ರನ್), ಮ್ರುನಲ್ ದೇವಧರ್ (7 ರನ್), ಪ್ರಥಮ್ ಸಿಂಗ್ (35 ರನ್), ನಿತಿನ್ ಭಿಲ್ಲೆ (7 ರನ್) ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ತಂಡದ ಮೊತ್ತ 4 ವಿಕೆಟಿಗೆ 83 ರನ್. ಮಿಥುನ್ ಮತ್ತು ಕೆ.ಗೌತಮ್ ತಲಾ 2 ವಿಕೆಟ್ ಪಡೆದು ಭರ್ಜರಿ ಆಘಾತ ನೀಡಿದ್ದರು.
ರೈಲ್ವೇಸ್ ಹಳಿ ಹತ್ತಿಸಿದ ಘೋಷ್, ರಾವತ್: ಹಳಿ ತಪ್ಪಿದ ರೈಲ್ವೇಸ್ ತಂಡವನ್ನು ಪುನಃ ಹಳಿಗೆ ತಂದ ಕೀರ್ತಿ ಅರಿಂದಮ್ ಘೋಷ್ ಮತ್ತು ಮಹೇಶ್ ರಾವತ್‌ಗೆ ಸೇರುತ್ತದೆ. 5ನೇ ವಿಕೆಟಿಗೆ ಈ ಜೋಡಿ ಕರ್ನಾಟಕ ಬೌಲರ್‌ಗಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ಈ ಜೋಡಿ ಅನಂತರ ರನ್ ವೇಗವನ್ನು ಹೆಚ್ಚಿಸಿದರು.
ಅಂತಿಮವಾಗಿ ಈ ಜೋಡಿ 158 ರನ್‌ಗಳ ಜತೆಯಾಟ ಆಡಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಘೋಷ್ 133 ಎಸೆತದಲ್ಲಿ 10 ಬೌಂಡರಿ, 2 ಸಿಕ್ಸರ್ ಸೇರಿದಂತೆ ಅಜೇಯ 70 ರನ್ ಬಾರಿಸಿದ್ದಾರೆ. ರಾವತ್ 97 ಎಸೆತದಲ್ಲಿ 10 ಬೌಂಡರಿ, 2 ಸಿಕ್ಸರ್ ಸೇರಿದಂತೆ ಅಜೇಯ 86 ರನ್ ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.