ಚೆನ್ನೈ ತಂಡದಿಂದ ರೈನಾ ಬಿಡುಗಡೆ?
Team Udayavani, Nov 15, 2017, 8:09 AM IST
ಚೆನ್ನೈ: ಮುಂದಿನ ವರ್ಷ ಐಪಿಎಲ್ ಕ್ರಿಕೆಟಿಗೆ ಮರಳಲಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಿಂದ ಸುರೇಶ್ ರೈನಾ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
2018ರ ಐಪಿಎಲ್‌ಗೆ ಮರು ಹರಾಜು ಪ್ರಕ್ರಿಯೆ ನಡೆಯಲಿದ್ದು, ತಂಡವೊಂದಕ್ಕೆ ಕೇವಲ 3 ಮಂದಿ ಆಟಗಾರರನ್ನಷ್ಟೇ ಉಳಿಸಿಕೊಳ್ಳುವ ಅವಕಾಶವಿದೆ. ಸಿಎಸ್‌ಕೆ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ವಿದೇಶಿ ಕ್ರಿಕೆಟಿಗ ಫಾ ಡು ಪ್ಲೆಸಿಸ್ ತಂಡದಲ್ಲಿ ಮುಂದುವರಿಯುವುದು ಬಹುತೇಕ ಖಚಿತ ಎಂದು ತಮಿಳು ಪತ್ರಿಕೆ “ದಿನತಂತಿ’ ವರದಿ ಮಾಡಿದೆ. ಆಗ ಸುರೇಶ್ ರೈನಾ, ಆಲ್‌ರೌಂಡರ್ ಡ್ವೇನ್ ಬ್ರಾವೊ ಮೊದಲಾದವರನ್ನು ಕೈಬಿಡುವುದು ಅನಿವಾರ್ಯವಾಗಲಿದೆ.
ಸುರೇಶ್ ರೈನಾ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತ ಬಂದಿದ್ದು, ಪ್ರತಿಯೊಂದು ಋತುವಿನಲ್ಲೂ ಸರಾಸರಿ 400 ರನ್ ಬಾರಿಸಿದ ಸಾಧನೆಗೈದಿದ್ದಾರೆ. ಚೆನ್ನೈಯಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳನ್ನೂ ರೈನಾ ಹೊಂದಿದ್ದಾರೆ.
2 ವರ್ಷಗಳ ನಿಷೇಧ ಮುಗಿಸಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಂದಿನ ಐಪಿಎಲ್‌ಗೆ ಸಜ್ಜಾಗಿವೆ. ಈ 2 ತಂಡಗಳಿಗೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳಿಂದ ಆಟಗಾರರನ್ನು ಆಯ್ದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.