ದೇವರ ಹೆಸರು ಬಳಸಿ ಆನ್‌ಲೈನ್ ಬೆಟ್ಟಿಂಗ್!
Team Udayavani, Oct 22, 2020, 11:30 PM IST
ಸಾಂದರ್ಭಿಕ ಚಿತ್ರ
ಜೈಪುರ: ಆನ್‌ಲೈನ್ ಮೂಲಕ ನಡೆಯುತ್ತಿದ್ದ ಐಪಿಎಲ್ ಬೆಟ್ಟಿಂಗ್ ದಂಧೆಯೊಂದನ್ನು ರಾಜಸ್ಥಾನದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದಕ್ಕೆ ದೇವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿರುವುದು ಬೇಸರದ ಸಂಗತಿ.
ವಾಟ್ಸ್‌ಆ್ಯಪ್‌ನಲ್ಲಿ ಜೈ ಮಾತಾದಿ, ಜೈ ಗೋವಿಂದ್ ಜಿ, ಬಾಲಾಜಿ ಮಹಾರಾಜ್ ಕೀ ಜೈ, ಖೊರಿಯರ್ ಮಾತಾಕಿ… ಹೀಗೆಲ್ಲ ಗುಂಪುಗಳನ್ನು ಸೃಷ್ಟಿಸಲಾಗಿದೆ. ಇಲ್ಲಿ ಬೆಟ್ಟಿಂಗ್ ಸಂಬಂಧಿ ಚಟುವಟಿಕೆಗಳನ್ನು ನಡೆಸಲಾಗಿದೆ. ಈ ದಂಧೆಯನ್ನು ರಾಕೇಶ್ ರಾಜ್‌ಕೋಟ್ ಎಂಬ ವ್ಯಕ್ತಿ ದುಬಾೖಯಲ್ಲಿ ಇದ್ದುಕೊಂಡೇ ಡೈಮಂಡೆಕ್ಸ್$c.ಕಾಮ್ ಎಂಬ ವೆಬ್‌ಸೈಟ್ ಮೂಲಕ ನಿಯಂತ್ರಿಸುತ್ತಿದ್ದಾನೆ!
ಕೋಟ್ಯಂತರ ರೂ. ಹಂಚಲು ಬೆಟ್ಟಿಂಗ್ ಪಡೆ ಸಿದ್ಧವಾಗಿದೆ ಎಂಬ ಮಾಹಿತಿ ಜೈಪುರ ವಿಶೇಷ ಪೊಲೀಸ್ ಪಡೆಗೆ ಲಭಿಸಿತು. ಇದನ್ನು ಬೆನ್ನತ್ತಿ ಹೊರಟ ಪೊಲೀಸರು, ಜೈಪುರದ ಕೋಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದರು. ಈ ವೇಳೆ ರಾಜ್‌ಕೋಟ್ ಜಿಲ್ಲೆಯ ರಣಧೀರ್ ಸಿಂಗ್, ಅಜೆ¾àರ್‌ನ ಕೃಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ. ದಾಳಿಯಲ್ಲಿ 4.18 ಕೋಟಿ ರೂ. ನಗದು, 2 ನಗದು ಯಂತ್ರ, 9 ಮೊಬೈಲ್ ಫೋನ್‌ಗಳು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಬೇರೆಬೇರೆ ಪ್ರಕರಣಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZ vs ENG Test: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್ ಜಯಭೇರಿ
T20; ವೆಸ್ಟ್ ಇಂಡೀಸ್ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ
T20I;ಡಬಲ್ ಹ್ಯಾಟ್ರಿಕ್ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್
Gukesh Dommaraju; ಚದುರಂಗ ಚಾಂಪಿಯನ್ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ
MAHE;ಅ.ಭಾ.ಅಂತರ್ ವಿ.ವಿ. ವನಿತಾ ಟೆನಿಸ್: ಒಸ್ಮಾನಿಯಾ ವಿ.ವಿ. ಚಾಂಪಿಯನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.