ಜೈಪುರ: ಜಯದ ಓಟ ಮುಂದುವರಿಸೀತೇ ರಾಜಸ್ಥಾನ್?
Team Udayavani, May 11, 2018, 6:50 AM IST
ಜೈಪುರ: ಐಪಿಎಲ್‌ನಲ್ಲಿ “ನಿರ್ಗಮನ ಪರ್ವ’ ಮೊದಲ್ಗೊಂಡಿದೆ. ರಾಯಲ್ ಚಾಲೆಂಜರ್ ಬೆಂಗಳೂರು, ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳ ಆಟ ಈಗಾಗಲೇ ಮುಗಿದಿದೆ. ರಾಜಸ್ಥಾನ್ ತಂಡ ಈ ಹಾದಿಯಲ್ಲಿರುವ 3ನೇ ತಂಡ ಎಂಬುದು ಸದ್ಯದ ಲೆಕ್ಕಾಚಾರ. ಆದರೆ ಉಳಿದ ನಾಲ್ಕೂ ಪಂದ್ಯಗಳನ್ನು ಗೆದ್ದರೆ ತನಗೂ ಮುನ್ನಡೆಯುವ ಅವಕಾಶವಿದೆ ಎಂಬುದು ಅಜಿಂಕ್ಯ ರಹಾನೆ ಪಡೆಯ ಲೆಕ್ಕಾಚಾರ. ಇದು ಸಾಕಾರವಾದೀತೇ ಎಂಬುದಕ್ಕೆ ಒಂದು ಹಂತದ ಉತ್ತರ ಶುಕ್ರವಾರ ರಾತ್ರಿ ಜೈಪುರ ಅಂಗಳದಲ್ಲಿ ಲಭಿಸಲಿದೆ.
2 ವರ್ಷಗಳ ನಿಷೇಧ ಮುಗಿಸಿ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ 7 ಜಯ ಹಾಗೂ 14 ಅಂಕಗಳೊಂದಿಗೆ ಈಗಾಗಲೇ ಪ್ಲೇ-ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಇನ್ನೊಂದು ಪಂದ್ಯ ಗೆದ್ದರೆ ಇದು ಅಧಿಕೃತಗೊಳ್ಳಲಿದೆ. ಹೀಗಾಗಿ ಧೋನಿ ಪಡೆ ಚಿಂತೆಪಡುವಂಥದ್ದೇನಿಲ್ಲ.
ಆದರೆ ರಾಜಸ್ಥಾನ್ ಸ್ಥಿತಿ ನಿಜಕ್ಕೂ ಗಂಡಾಂತರ. ಹತ್ತರಲ್ಲಿ ಜಯಿಸಿದ್ದು 4 ಪಂದ್ಯಗಳನ್ನು ಮಾತ್ರ. ಉಳಿದ ನಾಲ್ಕೂ ಪಂದ್ಯಗಳನ್ನು ಗೆದ್ದರಷ್ಟೇ ಉಳಿಗಾಲ ಎಂಬುದು ರಹಾನೆ ಬಳಗದ ಮೇಲಿರುವ ಒತ್ತಡ. ಒಂದು ಪಂದ್ಯ ಸೋತರೂ ಅದು ಕೂಟದಿಂದ ಹೊರಬೀಳಲಿದೆ. ಹೀಗಾಗಿ ಚೆನ್ನೈ ವಿರುದ್ಧದ ಪಂದ್ಯ ರಹಾನೆ ಬಳಗದ ಪಾಲಿಗೆ ನಿರ್ಣಾಯಕ.
ಹ್ಯಾಟ್ರಿಕ್ ಸೋಲಿನ ಬಳಿಕ ಚೇತರಿಸಿಕೊಂಡ ರಾಜಸ್ಥಾನ್, ಹಿಂದಿನ ಮುಖಾಮುಖೀಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ಗ 15 ರನ್ನುಗಳ ಸೋಲುಣಿಸಿ ಗೆಲುವಿನ ಹಳಿ ಏರಿತ್ತು. ತವರಿನ ಜೈಪುರ ಅಂಗಳದಲ್ಲೇ ಈ ಗೆಲುವು ಒಲಿಸಿಕೊಂಡದ್ದು ಹಾಗೂ ಶುಕ್ರವಾರ ಚೆನ್ನೈ ವಿರುದ್ಧ ಇದೇ ಅಂಗಳದಲ್ಲಿ ಆಡುವುದು ರಾಜಸ್ಥಾನ್ ತಂಡದ ಆತ್ಮವಿಶ್ವಾಸವನ್ನು ಸ್ವಲ್ಪ ಮಟ್ಟಿಗಾದರೂ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಮೊದಲ ಸುತ್ತಿನಲ್ಲಿ ಸೋಲು
ಚೆನ್ನೈ ವಿರುದ್ಧ ಪುಣೆಯಲ್ಲಿ ಆಡಿದ ಮೊದಲ ಸುತ್ತಿನಲ್ಲಿ ರಾಜಸ್ಥಾನ್ ರಾಯಲ್ಸ್ 64 ರನ್ನುಗಳ ಭಾರೀ ಸೋಲಿಗೆ ತುತ್ತಾಗಿತ್ತು. ಇದಕ್ಕೆ ಸೇಡು ತೀರಿಸಬೇಕಾದ ಅನಿವಾರ್ಯತೆಯೂ ತಂಡದ ಮೇಲಿದೆ. ಎ. 20ರ ಆ ಮುಖಾಮುಖೀಯಲ್ಲಿ ಶೇನ್ ವಾಟ್ಸನ್ ಅವರ ಅಮೋಘ ಶತಕ ಸಾಹಸದಿಂದ (106) ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟಿಗೆ 204 ರನ್ ಪೇರಿಸಿತ್ತು. ಜವಾಬಿತ್ತ ರಾಜಸ್ಥಾನ್ 18.3 ಓವರ್‌ಗಳಲ್ಲಿ 140ಕ್ಕೆ ಕುಸಿದಿತ್ತು. 45 ರನ್ ಮಾಡಿದ ಬೆನ್ ಸ್ಟೋಕ್ಸ್ ಅವರದೇ ಗರಿಷ್ಠ ಗಳಿಕೆ ಆಗಿತ್ತು. ಚಹರ್, ಠಾಕೂರ್, ಬ್ರಾವೊ ಮತ್ತು ಕಣ್ì ಶರ್ಮ ತಲಾ 2 ವಿಕೆಟ್ ಕಿತ್ತು ರಾಜಸ್ಥಾನ್‌ಗೆ ಕಂಟಕವಾಗಿ ಪರಿಣಮಿಸಿದ್ದರು.
ರಾಜಸ್ಥಾನ್ ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರೂ ಇವರೆಲ್ಲರ ಸಾಮೂಹಿಕ ವೈಫಲ್ಯ ವಿಂತೆಗೀಡುಮಾಡಿದೆ. ಮುಖ್ಯವಾಗಿ ನಾಯಕ ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ಸಾಮಾನ್ಯ ಮಟ್ಟದ ಆಟವಾಡುತ್ತಿದ್ದಾರೆ. ಪಂಜಾಬ್ ಎದುರಿನ ಕಳೆದ ಪಂದ್ಯದಲ್ಲಿ ಜಾಸ್ ಬಟ್ಲರ್ ಸಿಡಿದು ನಿಂತು 58 ಎಸೆತಗಳಿಂದ 82 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಒಟ್ಟುಗೂಡಿದ್ದು 8ಕ್ಕೆ 158 ರನ್ ಆದರೂ ಕೃಷ್ಣಪ್ಪ ಗೌತಮ್, ಐಶ್ ಸೋಧಿ, ಜೋಫÅ ಆರ್ಚರ್ ಅವರ ಬೌಲಿಂಗ್ ಸಾಹಸದಿಂದ ತಂಡ ಗೆಲುವು ಕಾಣುವಲ್ಲಿ ಯಶಸ್ವಿಯಾಗಿತ್ತು. ಜೈಪುರದಲ್ಲಿ ಇದೇ ಜಯದ ಓಟವನ್ನು ರಾಜಸ್ಥಾನ್ ಮುಂದುವರಿಸೀತೇ ಎಂಬುದು ಶುಕ್ರವಾರ ರಾತ್ರಿಯ ಕುತೂಹಲ.
ಚೆನ್ನೈ ರೆಡ್-ಹಾಟ್ ಫಾರ್ಮ್
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಬೆಂಗಳೂರಿನಲ್ಲೇ 127ಕ್ಕೆ ನಿಯಂತ್ರಿಸಿ 7ನೇ ಜಯ ಸಾಧಿಸಿತ್ತು. ರವೀಂದ್ರ ಜಡೇಜ, ಹರ್ಭಜನ್ ಸಿಂಗ್ ಅಮೋಘ ಮಟ್ಟದ ಬೌಲಿಂಗ್ ಪ್ರದರ್ಶಿಸಿದ್ದರು. ಆದರೆ ಗಾಯಾಳು ದೀಪಕ್ ಚಹರ್ ಗೈರಲ್ಲಿ ಲುಂಗಿ ಎನ್‌ಗಿಡಿ, ಡೇವಿಡ್ ವಿಲ್ಲಿ, ಶಾದೂìಲ್ ಠಾಕೂರ್ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ.
ಚೆನ್ನೈ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಅಂಬಾಟಿ ರಾಯುಡು, ಶೇನ್ ವಾಟ್ಸನ್, ಧೋನಿ, ಬ್ರಾವೊ, ರೈನಾ ಎಲ್ಲರೂ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಯಾವುದೇ ಕ್ರಮಾಂಕಕ್ಕೂ ಸಲ್ಲುವ ರಾಯುಡು 10 ಪಂದ್ಯಗಳಿಂದ 423 ರನ್ ಪೇರಿಸಿ ಎದುರಾಳಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಮತ್ತೆ ಫಿನಿಶರ್ ಪಾತ್ರವನ್ನುನ ಯಶಸ್ವಿಯಾಗಿ ನಿಭಾಯಿಸುತ್ತಿರುವ ಧೋನಿ 3 ಅರ್ಧ ಶತಕಗಳ ಸಹಿತ 360 ರನ್ ಪೇರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.