ಭಾರತ ತಂಡದಲ್ಲಿ ಮೊದಲ ಸಲ ರಾಜಸ್ಥಾನದ ಮೂವರು
Team Udayavani, Jul 23, 2019, 5:04 AM IST
ಜೈಪುರ: ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಪ್ರಕಟಗೊಂಡ ಭಾರತ ತಂಡದಲ್ಲಿ ಅಚ್ಚರಿ ಯೊಂದನ್ನು ಗಮನಿಸಬಹುದು. ಇದರಲ್ಲಿ ರಾಜಸ್ಥಾನದ ಮೂವರು ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾದಲ್ಲಿ ರಾಜಸ್ಥಾನದ 3 ಮಂದಿ ಅವಕಾಶ ಪಡೆದದ್ದು ಇದೇ ಮೊದಲು!
ಟಿ-20 ತಂಡದಲ್ಲಿ ಸಹೋದರರಾದ ದೀಪಕ್ ಚಹರ್,ರಾಹುಲ್ ಚಹರ್, ಎಡಗೈ ಪೇಸರ್ ಖಲೀಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಸಿಸಿಐ ಆಡಳಿತಾವಧಿಯಲ್ಲಿ ರಾಜಸ್ಥಾನ್ ಕ್ರಿಕೆಟ್ ಮಂಡಳಿ (ಆರ್‌ಸಿಎ) ಅಮಾನತಿನ ಸಂಕಟಕ್ಕೆ ಸಿಲುಕಿತ್ತು. ಈಗ ಏಕಕಾಲದಲ್ಲಿ ರಾಜ್ಯದ ಮೂವರು ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಆರ್‌ಸಿಎಗೆ ಒಲಿದ ದೊಡ್ಡ ಗೆಲುವಾಗಿದೆ.
ಇವರಲ್ಲಿ ದೀಪಕ್ ಚಹರ್ ಈಗಾಗಲೇ ಭಾರತ ಪರ ಟಿ20 ಪಂದ್ಯ ಆಡಿದ್ದಾರೆ. ಖಲೀಲ್ ಅಹ್ಮದ್ ಕೂಡ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಇವರಿಬ್ಬರ ಸಾಲಲ್ಲಿ ಕಾಣಿಸಿಕೊಂಡವರು ಲೆಗ್‌ಸ್ಪಿನ್ನರ್ ರಾಹುಲ್ ಚಹರ್. ಮುಂಬೈ ಇಂಡಿಯನ್ಸ್ ಪರ ಆಡುತ್ತ ಐಪಿಎಲ್‌ನಲ್ಲಿ ಸಾಧಿಸಿದ ಯಶಸ್ಸು ಹಾಗೂ ಭಾರತ “ಎ’ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು ರಾಹುಲ್‌ಗೆ ಭಾರತ ತಂಡ ಬಾಗಿಲು ತೆರೆಯುವಂತೆ ಮಾಡಿತು.
“ಈ ದಿನಕ್ಕಾಗಿ ಕಾಯುತ್ತಿದ್ದೆವು’
“ನಾವೀಗ ಬಹಳ ಖುಷಿ ಯಾಗಿದ್ದೇವೆ. ಕುಟುಂಬದ ಇಬ್ಬರು ಏಕಕಾಲದಲ್ಲಿ ಭಾರತ ತಂಡ ಪ್ರತಿನಿಧಿಸುವುದನ್ನು ನೋಡುವ ಸೌಭಾಗ್ಯ ನಮ್ಮದು. ಇಂಥ ದಿನಗಳಿಗಾಗಿ ನಾವು ಯಾವತ್ತೋ ಕಾಯುತ್ತಿದ್ದೆವು’ ಎಂದು ಪ್ರತಿಕ್ರಿಯಿಸಿದ್ದಾರೆ .
ದೀಪಕ್ ಚಹರ್
ಸಹೋದರಿ ಮಾಲತಿ.
“ದೀಪಕ್ ತುಂಟ ಹುಡುಗನಾಗಿದ್ದ. ಓದಿನಲ್ಲಿ ಆಸಕ್ತಿ ಕಡಿಮೆ. 4ನೇ ತರಗತಿಯಲ್ಲಿದ್ದಾಗ ಅಪ್ಪ ಆತನಿಗೆ ಮೊದಲ ಸಲ ಕ್ರಿಕೆಟ್ ಬ್ಯಾಟ್ ತಂದುಕೊಟ್ಟಿದ್ದರು. ಆದರೆ ಅವನ ಆಸಕ್ತಿ ಬೌಲಿಂಗ್ ಮೇಲಿತ್ತು. ಇನ್ನೊಂದೆಡೆ ರಾಹುಲ್ ಕೂಡ ಇದೇ ಹಾದಿಯಲ್ಲಿದ್ದ. ಅವನ ಬೌಲಿಂಗ್ ಶೈಲಿಯನ್ನು ಗಮನಿಸಿದಾಗ ಸ್ಪಿನ್ನರ್ ಆಗುವ ಸೂಚನೆ ಲಭಿಸಿತು. ಅನಂತರ ಆತ ಹಿಂದಿರುಗಿ ನೋಡಲಿಲ್ಲ…’ಎಂದು ನೆನಪಿಸಿಕೊಳ್ಳುತ್ತಾರೆ ಸಹೋದರಿ ಮಾಲತಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.