ಮೊದಲ ಪಂದ್ಯ ಗೆದ್ದ ಖುಷಿಯಲ್ಲಿರುವ ಆರ್ ಸಿಬಿಗೆ ಶಾಕ್: ಸ್ಫೋಟಕ ಆಟಗಾರ ತಂಡದಿಂದ ಔಟ್
Team Udayavani, Apr 4, 2023, 4:07 PM IST
ಬೆಂಗಳೂರು: ಐಪಿಎಲ್ ಆರಂಭಿಕ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಸ್ಪೋಟಕ ಬ್ಯಾಟರ್ ನನ್ನು ಕಳೆದುಕೊಂಡಿದೆ. ಪ್ರತಿಭಾನ್ವಿತ ಆಟಗಾರ ರಜತ್ ಪಾಟಿದಾರ್ ಅವರು ಐಪಿಎಲ್ ನಿಂದಲೇ ಹೊರಬಿದ್ದಿದ್ದಾರೆ.
ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ರಜತ್ ಅವರು ಆರ್ ಸಿಬಿ ಪ್ರಾಂಚೈಸಿ ಕೂಡಿಕೊಂಡಿರಲಿಲ್ಲ. ಬದಲಾಗಿ ಎನ್ ಸಿಎ ನಲ್ಲಿ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದರು. ಇಂದು ಟ್ವೀಟ್ ಮಾಡಿರುವ ಆರ್ ಸಿಬಿ ರಜತ್ ಬಗ್ಗೆ ಅಪ್ಡೇಟ್ ನೀಡಿದೆ.
ದುರದೃಷ್ಟವಶಾತ್, ಹಿಮ್ಮಡಿ ಗಾಯದ ಕಾರಣದಿಂದ ರಜತ್ ಪಾಟಿದಾರ್ ಅವರು ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ರಜತ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ಚೇತರಿಕೆಯ ಸಮಯದಲ್ಲಿ ಅವರಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ. ರಜತ್ ಗೆ ಬದಲಿ ಆಟಗಾರನನ್ನು ಹೆಸರಿಸದಿರಲು ಕೋಚ್‌ಗಳು ಮತ್ತು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ:Success Story:ಅಂದು ಟ್ಯಾಕ್ಸಿ ಡ್ರೈವರ್…ಇಂದು 42,000 ಕೋಟಿ ರೂ. ಒಡೆಯ; ಯಾರೀವರು ಜಗತಿಯಾನಿ
ಬೆಂಗಳೂರು ತಂಡವು ಈಗಾಗಲೇ ಗಾಯದ ಕಾರಣದಿಂದ ವಿಲ್ ಜ್ಯಾಕ್ಸ್ ಅವರನ್ನು ಕಳೆದುಕೊಂಡಿದೆ. ಅವರ ಬದಲಿಗೆ ನ್ಯೂಜಿಲ್ಯಾಂಡ್ ಆಲ್ ರೌಂಡರ್ ಬ್ರೇಸ್ ವೆಲ್ ತಂಡ ಕೂಡಿಕೊಂಡಿದ್ದಾರೆ.
Unfortunately, Rajat Patidar has been ruled out of #IPL2023 due to an Achilles Heel injury. 💔
We wish Rajat a speedy recovery and will continue to support him during the process. 💪
The coaches and management have decided not to name a replacement player for Rajat just yet. 🗒️ pic.twitter.com/c76d2u70SY
— Royal Challengers Bangalore (@RCBTweets) April 4, 2023
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಏ.6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.