ಕಾಮನ್ವೆಲ್ತ್‌ ಗೇಮ್ಸ್‌ ಕ್ರಿಕೆಟ್‌: ರಾಣಾ, ತನಿಯಾ, ಹರ್ಲೀನ್ ಆಗಮನ

Team Udayavani, Jul 12, 2022, 11:55 PM IST

ಕಾಮನ್ವೆಲ್ತ್‌ ಗೇಮ್ಸ್‌ ಕ್ರಿಕೆಟ್‌: ರಾಣಾ, ತನಿಯಾ, ಹರ್ಲೀನ್ ಆಗಮನ

ಹೊಸದಿಲ್ಲಿ: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವನಿತಾ ಕ್ರಿಕೆಟ್‌ ಪ್ರಮುಖ ಆಕರ್ಷಣೆಯಾಗಿದ್ದು, ಭಾರತದ 15 ಸದಸ್ಯರ ತಂಡವನ್ನು ಅಂತಿಮಗೊಳಿಸಲಾಗಿದೆ.

ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಈ ತಂಡಕ್ಕೆ ಆಲ್‌ರೌಂಡರ್‌ ಸ್ನೇಹ್‌ ರಾಣಾ, ಮಧ್ಯಮ ಕ್ರಮಾಂಕದ ಬ್ಯಾಟರ್‌ ಹರ್ಲೀನ್ ದೇವಲ್‌ ಮತ್ತು ವಿಕೆಟ್‌ ಕೀಪರ್‌ ತನಿಯಾ ಭಾಟಿಯ ಅವರನ್ನು ಸೇರಿಸಿಕೊಳ್ಳಲಾಗಿದೆ.

ತಂಡದಿಂದ ಬೇರ್ಪಟ್ಟವರೆಂದರೆ ಸಿಮ್ರಾನ್‌ ಬಹಾದೂರ್‌, ರಿಚಾ ಘೋಷ್‌ ಮತ್ತು ಪೂನಂ ಯಾದವ್‌. ಈ ಮೂವರು ಇತ್ತೀಚಿನ ಶ್ರೀಲಂಕಾ ಎದುರಿನ ಸರಣಿಯ ವೇಳೆ ಭಾರತ ತಂಡದಲ್ಲಿದ್ದರು.

ಸ್ನೇಹ್‌ ರಾಣಾಗೆ ಶ್ರೀಲಂಕಾ ಎದುರಿನ 3 ಪಂದ್ಯಗಳ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಹರ್ಲೀನ್ ದೇವಲ್‌ ಏಕದಿನ ಸರಣಿಯಲ್ಲಷ್ಟೇ ಆಡಿದ್ದರು. ತನಿಯಾ ಭಾಟಿಯ 2020ರ ಮಾರ್ಚ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ತನಿಯಾ ಸೇರ್ಪಡೆಯಿಂದ ಇಬ್ಬರು ವಿಕೆಟ್‌ ಕೀಪರ್‌ಗಳಿಗೆ ಅವಕಾಶ ಲಭಿಸಿದಂತಾಯಿತು. ಮತ್ತೋರ್ವ ಕೀಪರ್‌ ಯಾಸ್ತಿಕಾ ಭಾಟಿಯ.

8 ತಂಡಗಳ ಸ್ಪರ್ಧೆ
ಗೇಮ್ಸ್‌ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ಆಸ್ಟ್ರೇಲಿಯ, ಪಾಕಿಸ್ಥಾನ ಮತ್ತು ಬಾರ್ಬಡಾಸ್‌. “ಬಿ’ ವಿಭಾಗದಲ್ಲಿ ಶ್ರೀಲಂಕಾ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಪ್ರತಿಯೊಂದು ವಿಭಾಗದ ಅಗ್ರ 2 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ಭಾರತದ ಮೊದಲ ಎದುರಾಳಿ ಆಸ್ಟ್ರೇಲಿಯ (ಜು. 29). ಬಳಿಕ ಪಾಕಿಸ್ಥಾನ (ಜು. 31) ಮತ್ತು ಬಾರ್ಬಡಾಸ್‌ (ಆ. 3) ವಿರುದ್ಧ ಆಡಲಿದೆ. ಎಲ್ಲ ಪಂದ್ಯಗಳು ಎಜ್‌ಬಾಸ್ಟನ್‌ನಲ್ಲಿ ನಡೆಯಲಿವೆ.

ಭಾರತ ತಂಡ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮ, ಎಸ್‌. ಮೇಘನಾ, ತನಿಯಾ ಭಾಟಿಯ, ಯಾಸ್ತಿಕಾ ಭಾಟಿಯ, ದೀಪ್ತಿ ಶರ್ಮ, ರಾಜೇಶ್ವರಿ ಗಾಯಕ್ವಾಡ್‌, ಪೂಜಾ ವಸ್ತ್ರಾಕರ್‌, ಮೇಘನಾ ಸಿಂಗ್‌, ರೇಣುಕಾ ಸಿಂಗ್‌ ಠಾಕೂರ್‌, ಜೆಮಿಮಾ ರೋಡ್ರಿಗಸ್‌, ರಾಧಾ ಯಾದವ್‌, ಹರ್ಲೀನ್ ದೇವಲ್‌, ಸ್ನೇಹ್‌ ರಾಣಾ.

ಟಾಪ್ ನ್ಯೂಸ್

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.