ರಣಜಿ ಮುಖಾಮುಖಿ: ರಾಜಸ್ಥಾನವನ್ನು ಕೆಡವಿದ ಕರ್ನಾಟಕ
Team Udayavani, Jan 12, 2023, 10:36 PM IST
ಆಲೂರು: ರಾಜಸ್ಥಾನ ವಿರುದ್ಧದ ರಣಜಿ ಮುಖಾಮುಖಿಯಲ್ಲಿ ಕರ್ನಾಟಕ ತಂಡ 10 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿದೆ. ಇದರೊಂದಿಗೆ “ಸಿ’ ವಿಭಾಗದ ಅಂಕಪಟ್ಟಿಯ ಅಗ್ರಸ್ಥಾನ ಅನ್ಯರ ಪಾಲಾಗದು ಎಂಬುದನ್ನು ಸಾರಿಹೇಳಿದೆ.
ಗೆಲುವಿಗೆ ಕೇವಲ 15 ರನ್ ಗಳಿಸ ಬೇಕಿದ್ದ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಇದರೊಂದಿಗೆ ಪಂದ್ಯ ಮೂರೇ ದಿನದಲ್ಲಿ ಮುಗಿಯಿತು. ಇದು 5 ಪಂದ್ಯಗಳಲ್ಲಿ ಕರ್ನಾಟಕ ಮೊಳಗಿಸಿದ 3ನೇ ಜಯಭೇರಿ. ಉಳಿದೆರಡು ಪಂದ್ಯ ಡ್ರಾಗೊಂಡಿದೆ. ಅಂಕ 26ಕ್ಕೆ ಏರಿದೆ. ಕರ್ನಾಟಕಕ್ಕೆ ಶರಣಾದ ರಾಜಸ್ಥಾನ ಇಷ್ಟೇ ಪಂದ್ಯಗಳಿಂದ 14 ಅಂಕ ಹೊಂದಿದೆ. ಒಂದು ಜಯ, ಒಂದು ಸೋಲು ಹಾಗೂ 3 ಡ್ರಾ ರಾಜಸ್ಥಾನದ ಸಾಧನೆಯಾಗಿದೆ.
ರಾಜಸ್ಥಾನವನ್ನು 129ಕ್ಕೆ ತಡೆದು ನಿಲ್ಲಿಸಿದ ಕರ್ನಾಟಕ, ಇದಕ್ಕೆ ಜವಾಬಾಗಿ 445 ರನ್ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸುಧಾರಿತ ಬ್ಯಾಟಿಂಗ್ ಪ್ರದರ್ಶಿಸಿದರೂ ರಾಜಸ್ಥಾನದ ಮೊತ್ತ 330ರ ಗಡಿಯಲ್ಲಿ ನಿಂತಿತು. ಇನ್ನಿಂಗ್ಸ್ ಸೋಲಿನಿಂದ ಬಚಾವಾದುದೊಂದೇ ರಾಜಸ್ಥಾನದ ಸಾಧನೆ. ಮಾಯಾಂಕ್ ಅಗರ್ವಾಲ್ 10, ಆರ್. ಸಮರ್ಥ್ 5 ರನ್ ಮಾಡಿ ಅಜೇಯರಾಗಿ ಉಳಿದರು.
ರಾಜಸ್ಥಾನದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಓಪನರ್ ಮಹಿಪಾಲ್ ಲೊನ್ರೋರ್ 99, ಆದಿತ್ಯ ಗರ್ವಾಲ್ 66, ಸಮರ್ಪಿತ್ ಜೋಶಿ 63 ರನ್ ಬಾರಿಸಿದರು. ಬೌಲಿಂಗ್‌ನಲ್ಲಿ ಮಿಂಚಿದವರೆಂದರೆ ವಿಜಯ್‌ಕುಮಾರ್ ವೈಶಾಖ್ (4 ವಿಕೆಟ್), ಕೆ. ಗೌತಮ್ (3 ವಿಕೆಟ್) ಮತ್ತು ವಾಸುಕಿ ಕೌಶಿಕ್ (2 ವಿಕೆಟ್).
ಮೊದಲ ಇನ್ನಿಂಗ್ಸ್‌ನಲ್ಲಿ 101 ರನ್ ಮಾಡಿದ ಮನೀಷ್ ಪಾಂಡೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.ಕರ್ನಾಟಕದ ಮುಂದಿನ ಎದುರಾಳಿ ಕೇರಳ. ಈ ಪಂದ್ಯ ಜ. 17ರಂದು ತಿರುವನಂತಪುರದಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ-129 ಮತ್ತು 330 (ಮಹಿಪಾಲ್ ಲೊನ್ರೋರ್ 99, ಆದಿತ್ಯ ಗರ್ವಾಲ್ 66, ಸಮರ್ಪಿತ್ ಜೋಶಿ 63, ವಿ. ವೈಶಾಖ್ 73ಕ್ಕೆ 4, ಕೆ. ಗೌತಮ್ 72ಕ್ಕೆ 3, ವಿ. ಕೌಶಿಕ್ 66ಕ್ಕೆ 2). ಕರ್ನಾಟಕ-445 ಮತ್ತು ವಿಕೆಟ್ ನಷ್ಟವಿಲ್ಲದೆ 15.
ಇನ್ನಿಂಗ್ಸ್ ಗೆಲುವಿನತ್ತ ಮುಂಬಯಿ
ಗುವಾಹಟಿ: ಆತಿಥೇಯ ಅಸ್ಸಾಂಗೆ ಫಾಲೋಆನ್ ಹೇರಿದ ಮುಂಬಯಿ ಇನ್ನಿಂಗ್ಸ್ ಗೆಲುವಿತ್ತ ಮುನ್ನಡೆದಿದೆ. ಮುಂಬಯಿಯ 687 ರನ್‌ಗೆ (4 ವಿಕೆಟಿಗೆ ಡಿಕ್ಲೇರ್) ಜವಾಬು ನೀಡಿದ ಅಸ್ಸಾಂ 370ಕ್ಕೆ ಆಲೌಟ್ ಆಯಿತು. ಇದು ಪೃಥ್ವಿ ಶಾ ಅವರ ವೈಯಕ್ತಿಕ ಗಳಿಕೆಗಿಂತಲೂ (379) ಕಡಿಮೆ ಮೊತ್ತವಾಗಿತ್ತು.
317 ರನ್ನುಗಳ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಿರುವ ಅಸ್ಸಾಂ 3ನೇ ದಿನದಾಟದ ಅಂತ್ಯಕ್ಕೆ ಕೇವಲ 36 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಅದಿನ್ನೂ 281 ರನ್ ಹಿಂದಿದೆ. ಶಾದೂìಲ್ ಠಾಕೂರ್ 3, ಮೋಹಿತ್ ಅವಸ್ತಿ 2 ವಿಕೆಟ್ ಕಿತ್ತು ಅಸ್ಸಾಂಗೆ ಬೆದರಿಕೆಯೊಡ್ಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.