ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಕರ್ನಾಟಕದ ಎದುರಾಳಿ ಜಮ್ಮು ಮತ್ತು ಕಾಶ್ಮೀರ
Team Udayavani, Feb 16, 2020, 3:57 PM IST
ಬೆಂಗಳೂರು: 2019-20ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ನಾಕೌಟ್ ಹಂತದ ಚಿತ್ರಣವೀಗ ಸ್ಪಷ್ಟಗೊಂಡಿದೆ. ಲೀಗ್ ಹಂತದ ಮುಖಾಮುಖೀಗಳೆಲ್ಲ ಶನಿವಾರಕ್ಕೆ ಕೊನೆಗೊಳ್ಳುವುದರೊಂದಿಗೆ ಕ್ವಾರ್ಟರ್ ಫೈನಲ್ ಹಣಾಹಣಿಗೆ ಕ್ಷಣಗಣನೆ ಮೊದಲ್ಗೊಂಡಿದೆ.
ಫೆ. 20ರಿಂದ 24ರ ತನಕ ದೇಶದ 4 ಕೇಂದ್ರಗಳು ಈ ಪಂದ್ಯಗಳನ್ನು ಆಯೋಜಿಸಲಿವೆ. ಇದರಂತೆ “ಎಲೈಟ್ ಎ-ಬಿ’ ಹಂತದ ತೃತೀಯ ಸ್ಥಾನಿ ಕರ್ನಾಟಕ “ಎಲೈಟ್ ಸಿ’ ಹಂತದ ಅಗ್ರಸ್ಥಾನಿಯಾದ ಜಮ್ಮು ಕಾಶ್ಮೀರವನ್ನು ಎದುರಿ ಸಲಿದೆ. ಈ ಮುಖಾಮುಖೀ ಜಮ್ಮುವಿನಲ್ಲಿ ನಡೆಯಲಿದೆ.
ಶುಕ್ರವಾರದ ತನಕ ಕರ್ನಾಟಕ ಅಂಕಪಟ್ಟಿ ಯಲ್ಲಿ ದ್ವಿತೀಯ ಸ್ಥಾನಿಯಾಗಿತ್ತು. ಆದರೆ ಗುಜರಾತ್ ತಂಡ ಆಂಧ್ರಪ್ರದೇಶವನ್ನು 8 ವಿಕೆಟ್‌ಗಳಿಂದ ಮಣಿಸಿ ಅಗ್ರಸ್ಥಾನಕ್ಕೆ ನೆಗೆ ಯಿತು. ಮೊದಲ ಸ್ಥಾನದಲ್ಲಿದ್ದ ಬಂಗಾಲ ಎರಡಕ್ಕೆ, ಎರಡರಲ್ಲಿದ್ದ ಕರ್ನಾಟಕ ಮೂರಕ್ಕೆ ಇಳಿಯಿತು. ಸೌರಾಷ್ಟ್ರ 4ನೇ ಸ್ಥಾನ ಪಡೆದರೆ, ಆಂಧ್ರ ಪ್ರದೇಶ 5ನೇ ಸ್ಥಾನದೊಂದಿಗೆ ನಾಕೌಟ್ ಟಿಕೆಟ್ ಸಂಪಾದಿಸಿತು. ನಿರ್ಣಾಯಕ ಪಂದ್ಯ ವೊಂದರಲ್ಲಿ ಬಂಗಾಲ ವಿರುದ್ಧ ಪಂಜಾಬ್ ಸೋತ ಕಾರಣ ಆಂಧ್ರಕ್ಕೆ ಅದೃಷ್ಟ ಕೈ ಹಿಡಿಯಿತು.
3 ವಿಭಾಗಗಳ ಲೀಗ್ ಸ್ಪರ್ಧೆ
ರಣಜಿ ತಂಡಗಳನ್ನು ಒಟ್ಟು 3 ಗುಂಪುಗಳಾಗಿ ವಿಂಗಡಿಸಿ ಲೀಗ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇದರಂತೆ “ಎಲೈಟ್ ಎ-ಬಿ ವಿಭಾಗ’ದ 5 ಅಗ್ರಸ್ಥಾನಿ ತಂಡಗಳು, “ಎಲೈಟ್ ಸಿ ವಿಭಾಗ’ದ ಅಗ್ರ 2 ತಂಡಗಳು ಹಾಗೂ ಪ್ಲೇಟ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ತಂಡ ಸೇರಿದಂತೆ ಒಟ್ಟು 8 ತಂಡಗಳು ನಾಕೌಟ್ ಹಂತಕ್ಕೆ ತೇರ್ಗಡೆಯಾಗಿವೆ.
ರಣಜಿ ಕಿಂಗ್ ಖ್ಯಾತಿಯ ಮುಂಬಯಿ, ಕಳೆದೆರಡು ಬಾರಿಯ ಚಾಂಪಿಯನ್ ವಿದರ್ಭ ಮೊದಲಾದ ದೊಡ್ಡ ಹಾಗೂ ಬಲಿಷ್ಠ ತಂಡಗಳೆಲ್ಲ ಈ ಸಲ ಲೀಗ್ ಹಂತದಲ್ಲೇ ಉದುರಿ ಹೋದವು. ಕಾಶ್ಮೀರ, ಗೋವಾದಂಥ ತಂಡಗಳು ಇವನ್ನು ಮೀರಿ ನಿಂತದ್ದು ವಿಶೇಷ. ಇದರಿಂದ ರಣಜಿ ಲೀಗ್ ಮಾದರಿಯ ಬಗ್ಗೆ ಅಪಸ್ವರವೆದ್ದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಸಿ ವಿಭಾಗದ ಅಗ್ರಸ್ಥಾನಿ ಜಮ್ಮು ಕಾಶ್ಮೀರ 9ರಲ್ಲಿ 6 ಪಂದ್ಯಗಳನ್ನು ಗೆದ್ದು 39 ಅಂಕ ಸಂಪಾದಿಸಿದೆ. ಒಡಿಶಾ ಐದನ್ನು ಗೆದ್ದು ದ್ವಿತೀಯ ಸ್ಥಾನಿಯಾಯಿತು (38 ಅಂಕ). ಪ್ಲೇಟ್ ವಿಭಾಗದ ಅಗ್ರ ತಂಡವಾದ ಗೋವಾ 9ರಲ್ಲಿ 7 ಗೆಲುವು ಸಂಪಾದಿಸಿ ಕೂಟದಲ್ಲೇ ಸರ್ವಾಧಿಕ 50 ಅಂಕ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.
5 ದಿನಗಳ ನಾಕೌಟ್ ಪಂದ್ಯ
ನಾಕೌಟ್ ಹಂತದಿಂದ ರಣಜಿ ಪಂದ್ಯಗಳು 5 ದಿನಗಳ ಕಾಲ ನಡೆಯಲಿವೆ. ನಾಲ್ಕೂ ಕ್ವಾರ್ಟರ್ ಫೈನಲ್ ಪಂದ್ಯಗಳು ಫೆ. 20ರಿಂದ ಆರಂಭಗೊಂಡು ಫೆ. 24ಕ್ಕೆ ಕೊನೆಗೊಳ್ಳುತ್ತವೆ. ಹೀಗಾಗಿ ಎಲ್ಲ ಪಂದ್ಯಗಳು ಸ್ಪಷ್ಟ ಫಲಿತಾಂಶ ಕಾಣುವುದರಲ್ಲಿ ಅನುಮಾನವಿಲ್ಲ. ಇಲ್ಲವಾದರೆ ಮೊದಲ ಇನ್ನಿಂಗ್ಸ್ ಮುನ್ನಡೆ ನಿರ್ಣಾಯಕವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Champions Trophy: ಹೈಬ್ರಿಡ್ ಮಾದರಿಯೇ ಅಂತಿಮ
Ravichandran Ashwin: ಯಾವುದೇ ಪಶ್ಚಾತ್ತಾಪವಿಲ್ಲ: ಅಶ್ವಿನ್
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.