ಮಳೆ ಪಂದ್ಯದಲ್ಲಿ ಭಾರತಕ್ಕೆ ಗೆಲುವು
Team Udayavani, Oct 8, 2017, 6:00 AM IST
ರಾಂಚಿ: ಮಳೆಯಿಂದ ತೊಂದರೆ ಗೊಳಗಾದ ರಾಂಚಿ ಟ್ವೆಂಟಿ 20 ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯ ತಂಡವನ್ನು ಡಕ್‌ವರ್ತ್ ಲೂಯಿಸ್ ನಿಯಮದಡಿ 9 ವಿಕೆಟ್‌ಗಳಿಂದ ಸೋಲಿಸಿದೆ.
ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಕುಸಿದ ಆಸ್ಟ್ರೇಲಿಯವು 18.4 ಓವರ್‌ಗಳಲ್ಲಿ 8 ವಿಕೆಟಿಗೆ 118 ರನ್ ಗಳಿಸಿದ ವೇಳೆ ಮಳೆ ಸುರಿದ ಕಾರಣ ಅಲ್ಲಿಗೆ ಪ್ರವಾಸಿಗರ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಲಾಯಿತು. ಆಬಳಿಕ ಡಕ್‌ವರ್ತ್ ಲೂಯಿಸ್ ನಿಯಮದಡಿ ಭಾರತ ಗೆಲ್ಲಲು 6 ಓವರ್‌ಗಳಲ್ಲಿ 48 ರನ್ ಗಳಿಸುವ ಗುರಿ ನೀಡಲಾಯಿತು.
ವಿರಾಟ್ ಕೊಹ್ಲಿ ಅವರ ಬಿರುಸಿನ ಆಟ ದಿಂದಾಗಿ ಭಾರತವು 5.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 49 ರನ್ ಗಳಿಸಿ ಜಯಭೇರಿ ಬಾರಿಸಿತು. ಕೊಹ್ಲಿ 14 ಎಸೆತಗಳಿಂದ 22 ರನ್ ಹೊಡೆದರು.
ಮೊದಲ ಓವರಿನಲ್ಲೇ ಆಘಾತ
ಸ್ಟೀವ್ ಸ್ಮಿತ್ ಗೈರಲ್ಲಿ ನಾಯಕನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮೊದಲ ಓವರಿನಲ್ಲೇ 2 ಬೌಂಡರಿ ಬಾರಿಸಿ ಅಬ್ಬರಿಸಿದರೂ ಭುವನೇಶ್ವರ್ ಅವರ ಅದೇ ಓವರಿನ 5ನೇ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಆಸೀಸ್‌ಗೆ ಆರಂಭದಲ್ಲೇ ದೊಡ್ಡ ಕಂಟಕ ಎದುರಾಯಿತು.
ಈ ಸಂದರ್ಭದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಬಡ್ತಿ ಪಡೆದು ಬಂದರು. ಏಕದಿನ ಸರಣಿಯಲ್ಲಿ ಅಬ್ಬರಿಸಲು ವಿಫಲರಾಗಿದ್ದ ಮ್ಯಾಕ್ಸ್‌ವೆಲ್ ಇಲ್ಲಿಯೂ ನೈಜ ಆಟಕ್ಕೆ ಕುದುರಲಿಲ್ಲ. ಅವರಿಗೆ ಮತ್ತೆ ಚಾಹಲ್ ದುಃಸ್ವಪ್ನವಾಗಿ ಕಾಡಿದರು. 16 ಎಸೆತಗಳಿಂದ 17 ರನ್ ಮಾಡಿದ “ಮ್ಯಾಕ್ಸಿ’ 7ನೇ ಓವರಿನಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಮಿಡ್ ವಿಕೆಟ್‌ನಲ್ಲಿದ್ದ ಬುಮ್ರಾಗೆ ಕ್ಯಾಚಿತ್ತರು. ಇದರೊಂದಿಗೆ ಈ ಪ್ರವಾಸದ ನಾಲ್ಕೂ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ವಿಕೆಟ್ ಹಾರಿಸಿದ ಹೆಗ್ಗಳಿಕೆ ಚಾಹಲ್ ಅವರದಾಯಿತು. ಈ ನಡುವೆ ಫಿಂಚ್-ಮ್ಯಾಕ್ಸ್‌ವೆಲ್ ಜತೆ ಯಾಟದಲ್ಲಿ 47 ರನ್ ಬಂದಿತ್ತು.
ಇನ್ನೊಂದು ತುದಿಯಲ್ಲಿ ಕ್ರೀಸ್ ಆಕ್ರಮಿಸಿ ಕೊಂಡಿದ್ದ ಆರನ್ ಫಿಂಚ್ ಅಪಾಯಕಾರಿಯಾಗಿ ಗೋಚರಿಸಿದ್ದರು. ಆಸೀಸ್ ಸರದಿಯನ್ನು ಬೆಳೆಸುವ ಯೋಜನೆ ಅವರದಾಗಿತ್ತು. ಆದರೆ 10ನೇ ಓವರ್‌ನಲ್ಲಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಆಸೀಸ್ ಆರಂಭಿಕನ ಸ್ಟಂಪ್ ಎಗರಿಸಿ ಭಾರತಕ್ಕೆ ದೊಡ್ಡದೊಂದು ರಿಲೀಫ್ ಕೊಟ್ಟರು. ಫಿಂಚ್ ಗಳಿಕೆ 30 ಎಸೆತಗಳಿಂದ 42 ರನ್. ಬೀಸಿದ್ದು 4 ಬೌಂಡರಿ ಹಾಗೂ ಒಂದು ಸಿಕ್ಸರ್.
ಕುಲದೀಪ್ ಅವರ ಮುಂದಿನ ಬೇಟೆ ಮೊಸಸ್ ಹೆನ್ರಿಕ್ಸ್. ಕೇವಲ 8 ರನ್ ಮಾಡಿದ ಹೆನ್ರಿಕ್ಸ್ ಕೂಡ ಯಾದವ್ ಎಸೆತದ ಗತಿಯನ್ನರಿಯದೇ ಕ್ಲೀನ್‌ಬೌಲ್ಡ್ ಆದರು.
ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ
ಡೇವಿಡ್ ವಾರ್ನರ್ ಬಿ ಭುವನೇಶ್ವರ್ 8
ಆರನ್ ಫಿಂಚ್ ಬಿ ಯಾದವ್ 42
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಬುಮ್ರಾ ಬಿ ಚಾಹಲ್ 17
ಟ್ರ್ಯಾವಿಸ್ ಹೆಡ್ ಬಿ ಪಾಂಡ್ಯ 9
ಮೊಸಸ್ ಹೆನ್ರಿಕ್ಸ್ ಬಿ ಯಾದವ್ 8
ಡೇನಿಯಲ್ ಕ್ರಿಸ್ಟಿಯನ್ ರನೌಟ್ 9
ಟಿಮ್ ಪೇನ್ ಬಿ ಬುಮ್ರಾ 17
ಕೋಲ್ಟರ್ ನೈಲ್ ಬಿ ಬುಮ್ರಾ 1
ಆ್ಯಂಡ್ರೂé ಟೈ ಔಟಾಗದೆ 0
ಆ್ಯಡಂ ಝಂಪ ಔಟಾಗದೆ 4
ಇತರ 3
ಒಟ್ಟು (18.4 ಓವರ್‌ಗಳಲ್ಲಿ 8 ವಿಕೆಟಿಗೆ) 118
ವಿಕೆಟ್ ಪತನ: 1-8, 2-55, 3-76, 4-87, 5-89, 6-111, 7-113, 8-114,
ಬೌಲಿಂಗ್: ಭುವನೇಶ್ವರ್ ಕುಮಾರ್ 3.4-0-28-1
ಜಸ್‌ಪ್ರೀತ್ ಬುಮ್ರಾ 3-0-17-2
ಹಾರ್ದಿಕ್ ಪಾಂಡ್ಯ 4-0-33-1
ಯಜುವೇಂದ್ರ ಚಾಹಲ್ 4-0-23-1
ಕುಲದೀಪ್ ಯಾದವ್ 4-0-16-2
ಭಾರತ
ರೋಹಿತ್ ಶರ್ಮ ಬಿ ನೈಲ್ 11
ಶಿಖರ್ ಧವನ್ ಔಟಾಗದೆ 15
ವಿರಾಟ್ ಕೊಹ್ಲಿ ಔಟಾಗದೆ 22
ಇತರ: 1
ಒಟ್ಟು (5.3 ಓವರ್‌ಗಳಲ್ಲಿ 1 ವಿಕೆಟಿಗೆ) 49
ವಿಕೆಟ್ ಪತನ: 1-11
ಬೌಲಿಂಗ್: ಜಾಸನ್ ಬೆಹೆÅನ್‌ಡಾಫ್ì 1-0-5-0
ನಥನ್ ಕೋಲ್ಟರ್ ನೈಲ್ 2-0-20-1
ಆ್ಯಂಡ್ರೂé ಟೈ 1-0-10-0
ಆ್ಯಡಂ ಝಂಪ 1-0-6-0
ಡೇನಿಯಲ್ ಕ್ರಿಸ್ಟಿಯನ್ 0.3-0-7-0
ಪಂದ್ಯಶ್ರೇಷ್ಠ: ಕುಲದೀಪ್ ಯಾದವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.