ಮಹಿಳಾ ಏಷ್ಯಾಕಪ್ ಹಾಕಿ: ಭಾರತಕ್ಕೆ ರಾಣಿ ಸಾರಥ್ಯ
Team Udayavani, Oct 17, 2017, 7:00 AM IST
ನವದೆಹಲಿ: ಅ.28ರಿಂದ ಜಪಾನ್ನಲ್ಲಿ ಆರಂಭವಾಗಲಿರುವ ಮಹಿಳಾ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ರಾಣಿ ರಾಂಪಾಲ್ ಮುನ್ನಡೆಸಲಿದ್ದಾರೆ. 18 ಆಟಗಾರ್ತಿಯರ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಹಿರಿಯ ಗೋಲ್ಕೀಪರ್ ಸವಿತಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಯೂರೋಪ್ ಟೂರ್ನಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ತಂಡದಲ್ಲಿ ಕೆಲವು ಬದಲಾವಣೆ ಮಾಡಲಾಗಿತ್ತು. ಹಿರಿಯ ಆಟಗಾರ್ತಿಯರ ಜತೆಗೆ ಯುವ ಆಟಗಾರ್ತಿಯರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರಲ್ಲದೆ ಗುರ್ಜಿತ್ ಕೌರ್, ಸೋನಿಕಾ ನವಜೋತ್ ಕೌರ್, ವಂದನಾ ಕಟಾರಿಯಾ, ನಿಕ್ಕಿ ಪ್ರಧಾನ್ ತಂಡದಲ್ಲಿರುವ ಪ್ರಮುಖರಾಗಿದ್ದಾರೆ.
ಕೂಟದಲ್ಲಿ ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಳಿದಂತೆ “ಎ’ ಗುಂಪಿನಲ್ಲಿ ಚೀನಾ, ಮಲೇಷ್ಯಾ, ಸಿಂಗಾಪುರ ತಂಡಗಳು ಸ್ಥಾನ ಪಡೆದಿವೆ. ಅ.28ಕ್ಕೆ ಭಾರತ ತಂಡ ಸಿಂಗಾಪುರ ತಂಡದ ಸವಾಲನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. 2018ರಲ್ಲಿ ನಡೆಯಲಿರುವ ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಇದು ಮಹತ್ವದ ಟೂರ್ನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.