Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್ ಜಯದತ್ತ ಮುಂಬಯಿ
Team Udayavani, Nov 9, 2024, 12:44 AM IST
ಬೆಂಗಳೂರು: ಆತಿಥೇಯ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಬಂಗಾಲದ ಹಿಡಿತ ಬಿಗಿಗೊಳ್ಳತೊಡಗಿದೆ. 80 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾದ ಬಂಗಾಲ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 3ಕ್ಕೆ 127 ರನ್ ಗಳಿಸಿದೆ. ಒಟ್ಟು 207 ರನ್ ಲೀಡ್ ಹೊಂದಿದೆ.ಬಂಗಾಲ ಮೊದಲ ಇನ್ನಿಂಗ್ಸ್‌ನಲ್ಲಿ 301 ರನ್ ಗಳಿಸಿತ್ತು.
ಜವಾಬು ನೀಡಿದ ಕರ್ನಾಟಕ ಶುಕ್ರವಾರದ ಆಟದಲ್ಲಿ 221ಕ್ಕೆ ಆಲೌಟ್ ಆಯಿತು. ಭರ್ತಿ 50 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಅಭಿನವ್ ಮನೋಹರ್ 55 ರನ್ನಿಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಗೋಪಾಲ್ ಆಟ 28 ರನ್ನಿಗೆ ಮುಗಿಯಿತು. ವಿದ್ಯಾಧರ್ ಪಾಟೀಲ್ ಒಂದಿಷ್ಟು ಹೋರಾಟ ನಡೆಸಿ 33 ರನ್ ಮಾಡಿದರು.
ಬಂಗಾಲ ಪರ ಇಶಾನ್ ಪೊರೆಲ್ 4, ಸೂರಜ್ ಸಿಂಧು ಜೈಸ್ವಾಲ್ 3 ಮತ್ತು ರಿಷವ್ ವಿವೇಕ್ 2 ವಿಕೆಟ್ ಉರುಳಿಸಿದರು.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಬಂಗಾಲ ಭರವಸೆಯ ಬ್ಯಾಟಿಂಗ್ ಪ್ರದರ್ಶಿಸಿದೆ. ಶುವಂ ಡೇ (30)-ಸುದೀಪ್ ಚಟರ್ಜಿ (48) ಮೊದಲ ವಿಕೆಟಿಗೆ 69 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿಯನ್ನು ಅಭಿಲಾಷ್ ಶೆಟ್ಟಿ ಮುರಿದರು. ಮೊದಲ ಸರದಿಯಲ್ಲಿ ಶತಕ ಬಾರಿಸಿ ತಂಡವನ್ನು ಆಧರಿಸಿದ್ದ ಅನುಸ್ತೂಪ್ ಮಜುಮಾªರ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್ ಮಾಡಿ ವಿದ್ಯಾಧರ್ ಪಾಟೀಲ್ ಎಸೆತದಲ್ಲಿ ಬೌಲ್ಡ್ ಆದರು. ಸುದೀಪ್ ಕುಮಾರ್ 25 ಮತ್ತು ಶಾಬಾಜ್ ಅಹ್ಮದ್ 12 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಬಂಗಾಲ-301 ಮತ್ತು 3 ವಿಕೆಟಿಗೆ 127 (ಸುದೀಪ್ ಚಟರ್ಜಿ 48, ಶುವಂ ಡೇ 30, ಸುದೀಪ್ ಕುಮಾರ್ ಬ್ಯಾಟಿಂಗ್ 25, ವಿ. ಕೌಶಿಕ್ 21ಕ್ಕೆ 1, ವಿದ್ಯಾಧರ್ ಪಾಟೀಲ್ 37ಕ್ಕೆ 1, ಅಭಿಲಾಷ್ ಶೆಟ್ಟಿ 44ಕ್ಕೆ 1). ಕರ್ನಾಟಕ-221.
ಇನ್ನಿಂಗ್ಸ್ ಜಯದತ್ತ ಮುಂಬಯಿ
ಮುಂಬಯಿ: ಒಡಿಶಾಕ್ಕೆ ಫಾಲೋಆನ್ ಹೇರಿರುವ ಹಾಲಿ ಚಾಂಪಿಯನ್ ಮುಂಬಯಿ, ಇನ್ನಿಂಗ್ಸ್ ಗೆಲುವಿನತ್ತ ದಾಪುಗಾಲಿಕ್ಕಿದೆ.
ಮುಂಬಯಿ 4ಕ್ಕೆ 602 ರನ್ ಪೇರಿಸಿ ಡಿಕ್ಲೇರ್ ಮಾಡಿದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಒಡಿಶಾ, 2ನೇ ದಿನದಾಟದ ಅಂತ್ಯಕ್ಕೆ 5ಕ್ಕೆ 146 ರನ್ ಗಳಿಸಿತ್ತು. ಶುಕ್ರವಾರದ ಆಟ ಮುಂದುವರಿಸಿ 285ಕ್ಕೆ ಆಲೌಟ್ ಆಯಿತು. ವನ್‌ಡೌನ್ ಆಟಗಾರ ಸಂದೀಪ್ ಪಟ್ನಾಯಕ್ 102 ರನ್ ಬಾರಿಸಿದರೂ ತಂಡ ಫಾಲೋಆನ್‌ನಿಂದ ಪಾರಾಗಲಿಲ್ಲ. ಶಮ್ಸ್ ಮುಲಾನಿ 6, ಹಿಮಾಂಶು ಸಿಂಗ್ 3 ವಿಕೆಟ್ ಉರುಳಿಸಿ ಒಡಿಶಾವನ್ನು ಕಾಡಿದರು. 317 ರನ್ ಹಿನ್ನಡೆಗೆ ಸಿಲುಕಿದ ಒಡಿಶಾ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 126 ರನ್ ಮಾಡಿದೆ. ಇನ್ನೂ 191 ರನ್ ಹಿನ್ನಡೆಯಲ್ಲಿದೆ.
ಸಿ.ಕೆ. ನಾಯ್ಡು: ಚತುರ್ವೇದಿ ಶತಕ
ಬಲಾಂಗಿರ್ (ಒಡಿಶಾ): ಇಲ್ಲಿ ನಡೆಯುತ್ತಿರುವ 23ರ ವಯೋಮಿತಿಯ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ಒಡಿಶಾ ವಿರುದ್ಧ ಕರ್ನಾಟಕ 6 ವಿಕೆಟಿಗೆ 287 ರನ್ ಮಾಡಿದೆ. ಪ್ರಕಾರ್ ಚತುರ್ವೇದಿ 102, ಹರ್ಷಿಲ್ ಧರ್ಮಾಣಿ 77 ರನ್ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ, ಆರಂಭಿಕ ಬ್ಯಾಟರ್ ಮೆಕ್ನೀಲ್ ನೊರೋನ್ಹಾ (8) ಅವರನ್ನು ಬೇಗ ಕಳೆದುಕೊಂಡಿತು. ಮತ್ತೂಬ್ಬ ಆರಂಭಿಕ ಬ್ಯಾಟರ್ ಚತುರ್ವೇದಿ ಕ್ರೀಸ್ ಆಕ್ರಮಿಸಿಕೊಂಡು ಶತಕದ ಕೊಡುಗೆ ನೀಡಿದರು. ಹರ್ಷಿಲ್ ಅರ್ಧ ಶತಕದೊಂದಿಗೆ ಮಿಂಚಿದರು.
ಮೊದಲ ದಿನದ ಅಂತ್ಯಕ್ಕೆ ರಾಜ್‌ವೀರ್ ವಧ್ವ (34), ಮನ್ವಂತ್ ಕುಮಾರ್ (40) ಕ್ರೀಸ್‌ನಲ್ಲಿ ಉಳಿದಿದ್ದರು. ಒಡಿಶಾದ ಅಶುತೋಷ್ ಮರಂಡಿ 65ಕ್ಕೆ 3 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.