ರಣಜಿ ಕ್ರಿಕೆಟ್: ಕರ್ನಾಟಕ-ಮುಂಬಯಿ ಮುಖಾಮುಖೀ
Team Udayavani, Jan 3, 2020, 5:07 AM IST
ಮುಂಬಯಿ: ಶುಕ್ರವಾರದಿಂದ ಆರಂಭವಾಗಲಿರುವ ನೂತನ ವರ್ಷದ ಮೊದಲ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ-ಮುಂಬಯಿ ಎದುರಾಗಲಿವೆ. ಮುಂಬಯಿ ಪಾಲಿಗೆ ಇದು ತವರು ಪಂದ್ಯವಾಗಿದ್ದು, “ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣ’ದಲ್ಲಿ ಈ ಬಹು ನಿರೀಕ್ಷಿತ ಮುಖಾಮುಖೀ ಏರ್ಪಡಲಿದೆ.
ಎರಡೂ ತಂಡಗಳು ಪ್ರಸಕ್ತ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿವೆ. ಅದರಲ್ಲೂ ಮುಂಬಯಿ ಕಳೆದ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲೇ 10 ವಿಕೆಟ್‌ಗ ಆಘಾತಕಾರಿ ಸೋಲನ್ನುಂಡಿತ್ತು. ಇದರಿಂದ ಚೇತರಿಸಿಕೊಂಡು ಬದ್ಧ ಎದುರಾಳಿ ಕರ್ನಾಟಕದ ವಿರುದ್ಧ ಮೇಲುಗೈ ಸಾಧಿಸಲು ಸೂರ್ಯಕುಮಾರ್ ಯಾದವ್ ಪಡೆಗೆ ಸಾಧ್ಯವಾದೀತೇ ಎಂಬುದೊಂದು ಪ್ರಶ್ನೆ.
ಆದರೆ ಬರೋಡ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮುಂಬಯಿ ಭರ್ಜರಿ ಗೆಲುವು ಕಂಡಿತ್ತು. ರೈಲ್ವೇಸ್ ವಿರುದ್ಧ ಶ್ರೇಯಸ್ ಅಯ್ಯರ್, ಶಿವಂ ದುಬೆ ಆಡದೇ ವಿಶ್ರಾಂತಿ ಪಡೆದು ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಭಾರತ ಟಿ20 ಪಂದ್ಯಕ್ಕೆ ಸೇರ್ಪಡೆಯಾಗಿರುವುದರಿಂದ ಕರ್ನಾಟಕದ ವಿರುದ್ಧ ಇವರಿಬ್ಬರೂ ಹೊರಗುಳಿಯುವುದು ಅನಿವಾರ್ಯವಾಗಿದೆ.
ಕರ್ನಾಟಕಕ್ಕೆ ಸವಾಲು
ಪ್ರಸಕ್ತ ರಣಜಿ ಲೀಗ್‌ನಲ್ಲಿ ಕರ್ನಾಟಕ ಯಾವುದರಲ್ಲೂ ಸೋಲನುಭವಿಸಿಲ್ಲ. ಒಂದನ್ನು ಗೆದ್ದು, ಎರಡನ್ನು ಡ್ರಾ ಮಾಡಿಕೊಂಡಿದೆ. ಆದರೆ ಮೈಸೂರಿನಲ್ಲಿ ಸಾಮಾನ್ಯ ತಂಡವಾದ ಹಿಮಾಚಲ ಪ್ರದೇಶ ವಿರುದ್ಧ ಗೆಲ್ಲಲು ಪ್ರಯತ್ನಿಸದೆ ಡ್ರಾಗೆ ಸಮ್ಮತಿ ಸೂಚಿಸಿದ್ದು ಕರ್ನಾಟಕದ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸುವಂತೆ ಮಾಡಿತ್ತು. ಮುಂಬಯಿ ವಿರುದ್ಧ ನಾಯರ್ ಪಡೆ ಇಂಥ ಎಡವಟ್ಟು ಮಾಡದೆ ಬದ್ಧತೆಯನ್ನು ಪ್ರದರ್ಶಿಸಬೇಕಿದೆ.
ರಾಜ್ಯಕ್ಕೆ ಬೇಕಿದೆ ಬ್ಯಾಟಿಂಗ್ ಬಲ
ಅನುಭವಿ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಮಾಯಾಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಆರ್. ಸಮರ್ಥ್ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ. ಇವರಲ್ಲಿ ಪಡಿಕ್ಕಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ನಾಯಕ ಕರುಣ್ ನಾಯರ್ ಕೂಡ ಪರಾÌಗಿಲ್ಲ. ಆದರೆ ಆರಂಭಕಾರ ಡಿ. ನಿಶ್ಚಲ್ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಬೌಲಿಂಗ್‌ನಲ್ಲಿ ಅಭಿಮನ್ಯು ಮಿಥುನ್ ವೇಗದ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ. ವಿ. ಕೌಶಿಕ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ರೋನಿತ್ ಮೋರೆ ವಾಪಸಾಗಿದ್ದಾರೆ.
ತಂಡಗಳು
ಕರ್ನಾಟಕ:
ಕರುಣ್ ನಾಯರ್ (ನಾಯಕ), ದೇವದತ್ತ ಪಡಿಕ್ಕಲ್, ಡಿ. ನಿಶ್ಚಲ್, ಆರ್. ಸಮರ್ಥ್, ಅಭಿಷೇಕ್ ರೆಡ್ಡಿ, ಬಿ.ಆರ್. ಶರತ್, ರೋಹನ್ ಕದಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಅಭಿಮನ್ಯು ಮಿಥುನ್, ವಿ. ಕೌಶಿಕ್, ಪ್ರತೀಕ್ ಜೈನ್, ರೋನಿತ್ ಮೋರೆ, ಶರತ್ ಶ್ರೀನಿವಾಸ್, ಪ್ರವೀಣ್ ದುಬೆ.
ಮುಂಬಯಿ:
ಸೂರ್ಯಕುಮಾರ್ ಯಾದವ್ (ನಾಯಕ), ಆದಿತ್ಯ ತಾರೆ, ಅಜಿಂಕ್ಯ ರಹಾನೆ, ಪೃಥ್ವಿ ಶಾ, ಸಫìರಾಜ್ ಖಾನ್, ಶುಭಂ ರಂಜನೆ, ಆಕಾಶ್ ಪಾರ್ಕರ್, ಸಿದ್ದೇಶ್ ಲಾಡ್, ಶಮ್ಸ್ ಮಲಾನಿ, ವಿನಾಯಕ್ ಭೋಯಿರ್, ಶಶಾಂಕ್ ಅಟ್ಟರ್ಡೆ, ರಾಯ್‌ಸ್ಟನ್ ದಿಯಾಸ್, ತುಷಾರ್ ದೇಶಪಾಂಡೆ, ದೀಪಕ್ ಶೆಟ್ಟಿ, ಏಕನಾಥ್ ಕೇರ್ಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.