ರಣಜಿ ಫೈನಲ್: ಇನ್ನಿಂಗ್ಸ್ ಮುನ್ನಡೆಗೆ ಮಧ್ಯ ಪ್ರದೇಶ ಹೋರಾಟ
Team Udayavani, Jun 24, 2022, 6:19 AM IST
ಬೆಂಗಳೂರು: ಸರ್ಫರಾಜ್ ಖಾನ್ ಅವರ ಮತ್ತೂಂದು ಆಪತ್ಕಾಲದ ಶತಕ, ಮುಂಬಯಿಯ ಸವಾಲಿನ ಮೊತ್ತ, ಮಧ್ಯ ಪ್ರದೇಶದ ದಿಟ್ಟ ಚೇಸಿಂಗ್‌ನಿಂದಾಗಿ ರಣಜಿ ಟ್ರೋಫಿ ಫೈನಲ್ ಹಣಾಹಣಿ ದ್ವಿತೀಯ ದಿನವೇ ಕೌತುಕವನ್ನು ತೆರೆದಿರಿಸಿದೆ. ಇನ್ನಿಂಗ್ಸ್ ಮುನ್ನಡೆಯ ಪೈಪೋಟಿ ತೀವ್ರಗೊಂಡಿದೆ.
5 ವಿಕೆಟಿಗೆ 248 ರನ್ ಗಳಿಸಿದ್ದ ಮುಂಬಯಿ ಗುರುವಾರದ ಬ್ಯಾಟಿಂಗ್ ಮುಂದುವರಿಸಿ 374ಕ್ಕೆ ಆಲೌಟ್ ಆಯಿತು. ಸರ್ಫರಾಜ್ ಖಾನ್ ಎದುರಾಳಿಯ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿ 134 ರನ್ ಬಾರಿಸಿದರು. ಜವಾಬು ನೀಡ ಲಾರಂಭಿಸಿದ ಮಧ್ಯ ಪ್ರದೇಶ ಒಂದು ವಿಕೆಟಿಗೆ 123 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಸರ್ಫರಾಜ್ 4ನೇ ಶತಕ :
40 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸರ್ಫರಾಜ್ ಖಾನ್ 134ರ ತನಕ ಬೆಳೆದರು. ಇದು 2021-22ರ ರಣಜಿ ಋತುವಿನಲ್ಲಿ ಸರ್ಫರಾಜ್ ಬಾರಿಸಿದ 4ನೇ ಶತಕ. 243 ಎಸೆತ ಎದುರಿಸಿದ ಸರ್ಫರಾಜ್ 13 ಬೌಂಡರಿ, 2 ಸಿಕ್ಸರ್ ಹೊಡೆದರು. ಈ ಸರಣಿಯಲ್ಲಿ 900 ರನ್ ಗಡಿ ದಾಟಿದ ಸಾಧನೆ ಸರ್ಫರಾಜ್ ಅವರದಾಯಿತು. ಅವರು ಕೇವಲ 6 ಪಂದ್ಯಗಳಿಂದ 937 ರನ್ ರಾಶಿ ಹಾಕಿದ್ದಾರೆ. ದ್ವಿತೀಯ ಸರದಿಯಲ್ಲೂ ಮಿಂಚಿದರೆ ಸಾವಿರ ರನ್ ಸಾಧನೆ ಅಸಾಧ್ಯವೇನಲ್ಲ.
ದ್ವಿತೀಯ ದಿನ ಸರ್ಫರಾಜ್ ಹೊರತುಪಡಿಸಿ ಉಳಿದವರ್ಯಾರೂ ಮುಂಬಯಿ ಸರದಿಯನ್ನು ಆಧರಿಸಿ ನಿಲ್ಲಲಿಲ್ಲ. ದಿನದ ದ್ವಿತೀಯ ಎಸೆತದಲ್ಲೇ ಶಮ್ಸ್ ಮುಲಾನಿ (12) ವಿಕೆಟ್ ಬಿತ್ತು. ಆಗಿನ್ನೂ ಮುಂಬಯಿ ಎರಡನೇ ದಿನದ ಖಾತೆ ತೆರೆಯಲಿಲ್ಲ. ಆದರೆ ತನುಷ್ ಕೋಟ್ಯಾನ್, ಧವಳ್ ಕುಲಕರ್ಣಿ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಸಫìರಾಜ್‌ಗೆ ಉತ್ತಮ ಬೆಂಬಲ ನೀಡಿದರು. ಕೋಟ್ಯಾನ್ 39 ಎಸೆತ ನಿಭಾಯಿಸಿ 40 ರನ್ ಒಟ್ಟುಗೂಡಿಸಲು ನೆರವಾದರು. ಕೋಟ್ಯಾನ್ ಗಳಿಕೆ 15 ರನ್.
ಧವಳ್ ಕುಲಕರ್ಣಿ ಗಳಿಸಿದ್ದು ಒಂದೇ ರನ್ನಾದರೂ 36 ಎಸೆತ ಎದುರಿಸಿ ನಿಂತರು. ತುಷಾರ್ ದೇಶಪಾಂಡೆ 20 ಎಸೆತಗಳಿಂದ 6 ರನ್, ಮೋಹಿತ್ ಆವಸ್ಥಿ 11 ಎಸೆತಗಳಿಂದ ಅಜೇಯ 7 ರನ್ ಮಾಡಿದರು. ಸರ್ಫರಾಜ್ ಅಂತಿಮ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು.
ಮಧ್ಯ ಪ್ರದೇಶ ಪರ ಮಧ್ಯಮ ವೇಗಿ ಗೌರವ್ ಯಾದವ್ 4 ವಿಕೆಟ್ ಉರುಳಿಸಿ ಹೆಚ್ಚಿನ ಗೌರವ ಸಂಪಾದಿಸಿದರು. ಮತ್ತೋರ್ವ ಮೀಡಿಯಂ ಪೇಸರ್ ಅನುಭವ್ ಅಗರ್ವಾಲ್ 3, ಆಫ್ಸ್ಪಿನ್ನರ್ ಸಾರಾಂಶ್ ಜೈನ್ 2 ವಿಕೆಟ್ ಉರುಳಿಸಿದರು.
ಮಧ್ಯ ಪ್ರದೇಶ ದಿಟ್ಟ ಉತ್ತರ :
ಮಧ್ಯ ಪ್ರದೇಶ ಈಗಾಗಲೇ 41 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆರಂಭಿಕರಾದ ಯಶ್ ದುಬೆ ಮತ್ತು ಹಿಮಾಂಶು ಮಂತ್ರಿ ಮೊದಲ ವಿಕೆಟಿಗೆ 47 ರನ್ ಒಟ್ಟುಗೂಡಿಸಿದರು. ಈ ಹಂತದಲ್ಲಿ ತುಷಾರ್ ದೇಶಪಾಂಡೆ ಮುಂಬಯಿಗೆ ಮೊದಲ ಹಾಗೂ ದಿನದ ಏಕೈಕ ಯಶಸ್ಸು ತಂದಿತ್ತರು. ಆಕ್ರಮಣಕಾರಿಯಾಗಿ ಆಡುತ್ತಿದ್ದ ಮಂತ್ರಿ 31 ರನ್ ಮಾಡಿ ಲೆಗ್ ಬಿಫೋರ್ ಬಲೆಗೆ ಬಿದ್ದರು (50 ಎಸೆತ, 3 ಬೌಂಡರಿ, 2 ಸಿಕ್ಸರ್). ದುಬೆ 44 ಮತ್ತು ಶುಭಂ ಶರ್ಮ 41 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮುರಿಯದ 2ನೇ ವಿಕೆಟಿಗೆ 76 ರನ್ ಪೇರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಮುಂಬಯಿ-374 (ಸರ್ಫರಾಜ್ 134, ಜೈಸ್ವಾಲ್ 78, ಶಾ 47, ಜಾಫರ್ 26, ತಮೋರೆ 24, ಗೌರವ್ ಯಾದವ್ 106ಕ್ಕೆ 4, ಅನುಭವ್ ಅಗರ್ವಾಲ್ 81ಕ್ಕೆ 3, ಸಾರಾಂಶ್ ಜೈನ್ 46ಕ್ಕೆ 2). ಮಧ್ಯ ಪ್ರದೇಶ-ಒಂದು ವಿಕೆಟಿಗೆ 123 (ದುಬೆ ಬ್ಯಾಟಿಂಗ್ 44, ಶುಭಂ ಶರ್ಮ ಬ್ಯಾಟಿಂಗ್ 41, ಮಂತ್ರಿ 31, ದೇಶಪಾಂಡೆ 31ಕ್ಕೆ 1).
ರಣಜಿ ಫೈನಲ್‌ಗೂ ಡಿಆರ್‌ಎಸ್ ಇಲ್ಲ !
ಬೆಂಗಳೂರು: ಈ ಬಾರಿ ರಣಜಿ ಕೂಟದಲ್ಲಿ ಬಿಸಿಸಿಐ ಡಿಆರ್‌ಎಸ್ ಅಳವಡಿಸಿಲ್ಲ. ಫೈನಲ್ ಪಂದ್ಯದಲ್ಲೂ ಡಿಆರ್‌ಎಸ್ ಕೊರತೆ ಕಾಡಿದೆ. “ನಾವು ಇಬ್ಬರು ಅತ್ಯುತ್ತಮ ಅಂಪಾಯರ್‌ಗಳಾದ ಕೆ.ಎನ್. ಪದ್ಮನಾಭನ್, ವೀರೇಂದರ್ ಶರ್ಮ ಅವರನ್ನು ನೇಮಿಸಿದ್ದೇವೆ. ಅವರ ಸಾಮರ್ಥ್ಯದ ಮೇಲೆ ಪೂರ್ಣ ಭರವಸೆಯಿದೆ’ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಪ್ರತಿಕ್ರಿಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.