Ranji; ಕರ್ನಾಟಕ-ಬೆಂಗಾಲ್ ಪಂದ್ಯ ನಾಳೆಯಿಂದ: ತಂಡದಲ್ಲಿ ಶಮಿ ಇಲ್ಲ
Team Udayavani, Nov 5, 2024, 6:48 AM IST
ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಕರ್ನಾಟಕ ಮತ್ತು ಮಧ್ಯಪ್ರದೇಶ ವಿರುದ್ಧದ ಪಂದ್ಯಕ್ಕಾಗಿ ಬೆಂಗಾಲ್ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಖ್ಯಾತ ವೇಗಿ ಮೊಹಮ್ಮದ್ ಶಮಿ ಅವರ ಹೆಸರು ಇಲ್ಲದ ಕಾರಣ ಅವರು ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳುವುದು ಇನ್ನಷ್ಟು ತಡವಾಗಲಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಬುಧವಾರದಿಂದ ಆರಂಭವಾ ಗುವ ರಣಜಿ ಟ್ರೋಫಿ ಪಂದ್ಯದಲ್ಲಿ ಬೆಂಗಾಲ್ ತಂಡವು ಕರ್ನಾಟಕ ತಂಡವನ್ನು ಎದುರಿಸಲಿದೆ. ಆಬ ಳಿಕ ಬೆಂಗಾಲ್ ನ. 13ರಿಂದ ಮಧ್ಯಪ್ರದೇಶವನ್ನು ಎದುರಿಸಲು ಇಂದೋರ್ಗೆ ಪ್ರಯಾಣಿಸಲಿದೆ.
ರಣಜಿ ತಂಡಕ್ಕೆ ಮರಳುವ ಉದ್ದೇಶದಿಂದ ಶಮಿ ಕೆಲವು ದಿನಗಳಿಂದ ನೆಟ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದರು. ಬೌಲಿಂಗ್ ಕೋಚ್ ಮಾರ್ನೆ ಮೊರ್ಕೆಲ್ ಮಾರ್ಗ ದರ್ಶನ ನೀಡಿದ್ದರು. ಪೂರ್ಣ ಪ್ರಮಾಣದಲ್ಲಿ ರನ್ ಅಪ್ ಮಾಡದಿದ್ದರೂ ಶೇಕಡಾ ನೂರರಷ್ಟು ಅಭ್ಯಾಸ ನಡೆಸಿದ ತೃಪ್ತಿ ಅವರಿಗಿತ್ತು. ದೇಹಕ್ಕೆ ಹೆಚ್ಚಿನ ಒತ್ತಡ ಬೀಳುವುದು ಬೇಡ ಎಂಬ ಕಾರಣಕ್ಕಾಗಿ ರನ್ ಅಪ್ ಅನ್ನು ಕಡಿತ ಮಾಡಿದ್ದರು.
ಶಮಿ ಅವರಲ್ಲದೇ ಬೆಂಗಾಲ್ ತಂಡವು ಅಭಿಮನ್ಯು ಈಶ್ವರನ್, ಅಭಿಷೇಕ್ ಪೊರೆಲ್ ಮತ್ತು ವೇಗಿ ಮುಕೇಶ್ ಕುಮಾರ್ ಅವರ ಸೇವೆಯಿಂದ ವಂಚಿತವಾಗಿದೆ. ಈ ಮೂವರು ಆಸ್ಟ್ರೇಲಿಯದಲ್ಲಿ ಭಾರತ “ಎ’ ಪರ ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.