ರಣಜಿ: ಸಮರ್ಥ್ ಅಜೇಯ ಶತಕ
Team Udayavani, Feb 4, 2020, 10:56 PM IST
ಶಿವಮೊಗ್ಗ: ರಣಜಿ ಎಲೈಟ್ “ಎ’ -“ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಆತಿಥೇಯ ಕರ್ನಾಟಕ ಮೊದಲ ದಿನದ ಗೌರವ ಪಡೆದಿದೆ.
ಶಿವಮೊಗ್ಗದ ಜೆಎನ್‌ಎನ್ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲ್ಗೊಂಡ ಪಂದ್ಯದಲ್ಲಿ ರವಿಕುಮಾರ್ ಸಮರ್ಥ್ ಅಜೇಯ 105 ಹಾಗೂ ಕೆ. ಸಿದ್ಧಾರ್ಥ್ ಅಜೇಯ 62 ರನ್ ಬಾರಿಸಿ ಮೆರೆದರು. ಇವರ ಸಾಹಸದಿಂದ ಕರ್ನಾಟಕ 3 ವಿಕೆಟಿಗೆ 233 ರನ್ ಗಳಿಸಿದೆ.
ರಾಜ್ಯಕ್ಕೆ ಆರಂಭಿಕ ಆಘಾತ
ಕರ್ನಾಟಕ ನಿರೀಕ್ಷಿತ ಆರಂಭ ಕಾಣುವಲ್ಲಿ ವಿಫಲವಾಯಿತು. ಭರವಸೆಯ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೇವಲ 3 ಎಸೆತ ಎದುರಿಸಿದ ಅವರು ರವಿ ಯಾದವ್ ಎಸೆತದಲ್ಲಿ ಹಿಮಾಂಶುಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ನಡೆದರು. ಸ್ಕೋರ್ 35 ರನ್ ಆದಾಗ 9 ರನ್ ಗಳಿಸಿದ್ದ ರೋಹನ್ ಕದಮ್ ವಿಕೆಟ್ ಬಿತ್ತು. ನಾಯಕ ಕರುಣ್ ನಾಯರ್ (22 ರನ್) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಸಮರ್ಥ್-ಸಿದ್ಧಾರ್ಥ್ ರಕ್ಷಣೆ
ಒಂದು ಕಡೆ ಪ್ರವಾಸಿ ಬೌಲರ್‌ಗಳು ಮೇಲುಗೈ ಪಡೆಯುತ್ತಿದ್ದಂತೆ ಆರ್. ಸಮರ್ಥ್ ಹಾಗೂ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಕೆ. ಸಿದ್ಧಾರ್ಥ್ ತಂಡದ ರಕ್ಷಣೆಗೆ ಧಾವಿಸಿದರು. ಮುರಿಯದ 4ನೇ ವಿಕೆಟಿಗೆ ಇವರಿಂದ ಈಗಾಗಲೇ 150 ರನ್ ಒಟ್ಟುಗೂಡಿದೆ. ಸಮರ್ಥ್ ಜವಾಬ್ದಾರಿಯುತ ಆಟವಾಡಿ 278 ಎಸೆತಗಳನ್ನು ನಿಭಾಯಿಸಿದ್ದಾರೆ. ಹೊಡೆದದ್ದು ಕೇವಲ 6 ಬೌಂಡರಿ. ಸಿದ್ಧಾರ್ಥ್ 130 ಎಸೆತ ಎದುರಿಸಿದ್ದು, 7 ಬೌಂಡರಿ ಬಾರಿಸಿದ್ದಾರೆ.
ಮಧ್ಯಪ್ರದೇಶ ಎಕ್ಸ್‌ಟ್ರಾ ರೂಪದಲ್ಲಿ 35 ರನ್ ನೀಡಿ ಕರ್ನಾಟಕಕ್ಕೆ ಪರೋಕ್ಷವಾಗಿ ನೆರವು ಒದಗಿಸಿತು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 3 ವಿಕೆಟಿಗೆ 233 (ಸಮರ್ಥ್ ಬ್ಯಾಟಿಂಗ್ 105, ಸಿದ್ಧಾರ್ಥ್ ಬ್ಯಾಟಿಂಗ್ 62, ನಾಯರ್ 22).
ಜಡೇಜ ದಾಳಿಗೆ ಕುಸಿದ ಮುಂಬಯಿ
ರಾಜ್‌ಕೋಟ್: ಎಡಗೈ ಸ್ಪಿನ್ನರ್ ಧರ್ಮೇಂದ್ರಸಿನ್ಹ ಜಡೇಜ ದಾಳಿಗೆ ಮುಂಬಯಿ ತೀವ್ರ ಕುಸಿತ ಕಂಡಿದೆ. ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ 8 ವಿಕೆಟಿಗೆ 249 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿದೆ. ಜಡೇಜ 90 ರನ್ನಿತ್ತು 5 ವಿಕೆಟ್ ಉಡಾಯಿಸಿದರು.
ಮುಂಬಯಿಯ ಆರಂಭ ಉತ್ತಮ ಮಟ್ಟದಲ್ಲಿತ್ತು. ಜಾಯ್ ಬಿಷ್ಟಾ (43)-ಭೂಪೇನ್ ಲಾಲ್ವಾನಿ (25) 21 ಓವರ್ ನಿಭಾಯಿಸಿ 62 ರನ್ ಜತೆಯಾಟ ನಿಭಾಯಿಸಿದರು. ಆದರೆ 26 ರನ್ ಅಂತರದಲ್ಲಿ 4 ವಿಕೆಟ್ ಉದುರಿ ಹೋಯಿತು.
ತಂಡಕ್ಕೆ ಮರಳಿದ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಔಟಾದದ್ದು ಮುಂಬಯಿಗೆ ಭಾರೀ ಹೊಡೆತವಿಕ್ಕಿತು. 5ನೇ ವಿಕೆಟಿಗೆ ಜತೆಗೂಡಿದ ಸಫìರಾಜ್ ಖಾನ್ ಮತ್ತು ಶಮ್ಸ್ ಮುಲಾನಿ 109 ರನ್ ಜತೆಯಾಟ ನಿಭಾಯಿಸಿ ತಂಡದ ಕುಸಿತಕ್ಕೆ ತಡೆಯಾದರು. 78 ರನ್ ಮಾಡಿದ ಸಫìರಾಜ್ ಅವರದೇ ಸರ್ವಾಧಿಕ ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.