Ranji Trophy 2023-24; ಪಂಜಾಬ್‌ ವಿರುದ್ಧ ಗೆಲುವಿನ ನಗು ಚೆಲ್ಲಿದ ಕರ್ನಾಟಕ


Team Udayavani, Jan 9, 2024, 12:47 AM IST

1-assadas

ಹುಬ್ಬಳ್ಳಿ,: ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ 2023-24ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಎಲೈಟ್‌ “ಸಿ’ ವಿಭಾಗದ ಪಂದ್ಯದಲ್ಲಿ ಪಂಜಾಬ್‌ಗ 7 ವಿಕೆಟ್‌ಗಳ ಸೋಲುಣಿಸಿ 6 ಅಂಕ ಸಂಪಾದಿಸಿದೆ.

362 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪಂಜಾಬ್‌, 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 238 ರನ್‌ ಗಳಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿತ್ತು. ಸೋಮವಾರ ಬ್ಯಾಟಿಂಗ್‌ ಮುಂದುವರಿಸಿ 413ಕ್ಕೆ ಆಲೌಟ್‌ ಆಯಿತು. 52 ರನ್ನುಗಳ ಸಣ್ಣ ಗುರಿ ಪಡೆದ ಕರ್ನಾಟಕ ಇದನ್ನು ಸಾಧಿಸುವಾಗ 3 ವಿಕೆಟ್‌ಗಳನ್ನು ಕಳೆದುಕೊಂಡಿತು.
ಕರ್ನಾಟಕದ ಮುಂದಿನ ಎದುರಾಳಿ ಗುಜರಾತ್‌. ಈ ಪಂದ್ಯ ಜ. 12ರಂದು ಅಹ್ಮದಾಬಾದ್‌ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ. ಸೋಮವಾರ ಮುಗಿದ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್‌ 111 ರನ್ನುಗಳಿಂದ ತಮಿಳುನಾಡಿಗೆ ಸೋಲುಣಿಸಿತು.

ಜೋಸ್‌, ಮಾಯಾಂಕ್‌ ಶೂನ್ಯ
ಚೇಸಿಂಗ್‌ ವೇಳೆ ಕರ್ನಾಟದಕ ಆರಂಭ ಆಘಾತಕಾರಿಯಾಗಿತ್ತು. ಮಾಯಾಂಕ್‌ ಅಗರ್ವಾಲ್‌ ಮತ್ತು ನಿಕಿನ್‌ ಜೋಸ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ನಾಯಕ ಅಗ ರ್ವಾಲ್‌ ಅವರಂತೂ ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್‌ ನೀಡಿ ವಾಪಸಾದರು. ಈ ಯಶಸ್ಸು ಬಲತೇಜ್‌ ಸಿಂಗ್‌ ಅವರದಾಯಿತು. ಆರ್‌. ಸಮರ್ಥ್ 21 ರನ್‌ ಮಾಡಿ ಔಟಾದರು. ಎಸ್‌. ಶರತ್‌ (ಔಟಾಗದೆ 21) ಮತ್ತು ಮನೀಷ್‌ ಪಾಂಡೆ (ಔಟಾಗದೆ 10) ಸೇರಿಕೊಂಡು ತಂಡದ ಗೆಲುವನ್ನು ಸಾರಿದರು.

7 ವಿಕೆಟ್‌ಗಳಿಂದ 175 ರನ್‌
3 ವಿಕೆಟಿಗೆ 238 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಪಂಜಾಬ್‌ ಉಳಿದ 7 ವಿಕೆಟ್‌ಗಳಿಂದ 175 ರನ್‌ ಪೇರಿಸಿತು. ಆದರೆ ಯಾರಿಂದಲೂ ಆರಂಭಿಕರಂತೆ ಕ್ರೀಸ್‌ ಆಕ್ರಮಿಸಿಕೊಂಡು ಆಡಲು ಸಾಧ್ಯವಾಗಲಿಲ್ಲ. 3ನೇ ದಿನದಾಟದಲ್ಲಿ ಪ್ರಭ್‌ಸಿಮ್ರಾನ್‌ ಸಿಂಗ್‌ (100) ಮತ್ತು ಅಭಿಷೇಕ್‌ ಶರ್ಮ (91) ಮೊದಲ ವಿಕೆಟಿಗೆ 192 ರನ್‌ ರಾಶಿ ಹಾಕಿ ಕರ್ನಾಟಕವನ್ನು ಕಾಡಿದ್ದರು.

ಸೋಮವಾರದ ಆಟದಲ್ಲಿ ಯಾರೂ ಅರ್ಧ ಶತಕದ ಗಡಿ ತಲುಪಲಿಲ್ಲ. 43 ರನ್‌ ಮಾಡಿದ ಕೀಪರ್‌ ಗೀತಾಂಶ್‌ ಖೇರ ಅವರದೇ ಹೆಚ್ಚಿನ ಗಳಿಕೆ. ಮಾಯಾಂಕ್‌ ಮಾರ್ಕಂಡೆ ಮತ್ತು ಅರ್ಷದೀಪ್‌ ಸಿಂಗ್‌ 36 ರನ್‌ ಗಳಿಸಿದರು. ನಾಯಕ ಮನ್‌ದೀಪ್‌ ಸಿಂಗ್‌ 27, ನೇಹಲ್‌ ವಧೇರ 26, ಬಲತೇಜ್‌ ಸಿಂಗ್‌ ಅಜೇಯ 22 ರನ್‌ ಮಾಡಿದರು.
ತಲಾ 3 ವಿಕೆಟ್‌ ಉರುಳಿಸಿದ ರೋಹಿತ್‌ ಕುಮಾರ್‌ ಮತ್ತು ಶುಭಾಂಗ್‌ ಹೆಗ್ಡೆ ಕರ್ನಾಟಕದ ಯಶಸ್ವಿ ಬೌಲರ್‌ಗಳು. ವಿದ್ವತ್‌ ಕಾವೇರಪ್ಪ 2 ಹಾಗೂ ಆರ್‌. ಸಮರ್ಥ್ ಒಂದು ವಿಕೆಟ್‌ ಕೆಡವಿದರು.
ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌-152 ಮತ್ತು 413 (ಪ್ರಭ್‌ಸಿಮ್ರಾನ್‌ 100, ಅಭಿಷೇಕ್‌ 91, ಗೀತಾಂಶ್‌ 43, ಮಾರ್ಕಂಡೆ 36, ಅರ್ಷದೀಪ್‌ 36, ಮನ್‌ದೀಪ್‌ 27, ವಧೇರ 26, ಬಲತೇಜ್‌ ಅಜೇಯ 22, ಶುಭಾಂಗ್‌ 89ಕ್ಕೆ 3, ರೋಹಿತ್‌ 101ಕ್ಕೆ 3, ವಿದ್ವತ್‌ 59ಕ್ಕೆ 2, ಸಮರ್ಥ್ 17ಕ್ಕೆ 1, ವೈಶಾಖ್‌ 93ಕ್ಕೆ 1). ಕರ್ನಾಟಕ-8 ವಿಕೆಟಿಗೆ 514 ಡಿಕ್ಲೇರ್‌, 3 ವಿಕೆಟಿಗೆ 52 (ಸಮರ್ಥ್ 21, ಶರತ್‌ ಔಟಾಗದೆ 21, ಪ್ರೇರಿತ್‌ ದತ್ತ 10ಕ್ಕೆ 2, ಬಲತೇಜ್‌ 12ಕ್ಕೆ 1).

ಮುಂಬಯಿಗೆ ಇನ್ನಿಂಗ್ಸ್‌ ಜಯ
ಪಾಟ್ನಾ: ಎಲೈಟ್‌ “ಬಿ’ ವಿಭಾಗದ ರಣಜಿ ಪಂದ್ಯದಲ್ಲಿ ಮುಂಬಯಿ ತಂಡ ಆತಿಥೇಯ ಬಿಹಾರಕ್ಕೆ ಇನ್ನಿಂಗ್ಸ್‌ ಹಾಗೂ 51 ರನ್‌ ಅಂತರದ ಸೋಲುಣಿಸಿ 7 ಅಂಕ ಗಳಿಸಿತು. ಬಿಹಾರ ಎರಡೂ ಇನ್ನಿಂಗ್ಸ್‌ಗಳಲ್ಲಿ 100 ರನ್ನಿಗೆ ಆಲೌಟ್‌ ಆದುದೊಂದು ವಿಶೇಷ.
ಮುಂಬಯಿಯ 251 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಜವಾಬು ನೀಡಿದ ಬಿಹಾರ 100 ರನ್ನಿಗೆ ಕುಸಿದು ಫಾಲೋಆನ್‌ಗೆ ಸಿಲುಕಿತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬಿಹಾರದ ಬ್ಯಾಟಿಂಗ್‌ ಸುಧಾರಿಸಲಿಲ್ಲ. ಅದು ಮತ್ತೆ 100 ರನ್ನಿಗೆ ಸರ್ವಪತನ ಕಂಡಿತು.

ಶಿವಂ ದುಬೆ 4, ರಾಯ್‌ಸ್ಟನ್‌ ಡಾಯಸ್‌ 3 ವಿಕೆಟ್‌ ಉರುಳಿಸಿ ಬಿಹಾರವನ್ನು ಕಾಡಿದರು. ಮೋಹಿತ್‌ ಅವಸ್ಥಿ, ತನುಷ್‌ ಕೋಟ್ಯಾನ್‌ ಮತ್ತು ನಾಯಕ ಶಮ್ಸ್‌ ಮುಲಾನಿ ಒಂದೊಂದು ವಿಕೆಟ್‌ ಕಿತ್ತರು. ಬಿಹಾರ ಪರ ಆರಂಭಕಾರ ಶರ್ಮಾನ್‌ ನಿಗ್ರೋಧ್‌ 40, ಕೀಪರ್‌ ಬಿಪಿನ್‌ ಸೌರಭ್‌ 30 ರನ್‌ ಮಾಡಿದರು.
ಮುಂಬಯಿ ತನ್ನ ದ್ವಿತೀಯ ಪಂದ್ಯವನ್ನು ಆಂಧ್ರಪ್ರದೇಶ ವಿರುದ್ಧ ಆಡಲಿದೆ.

ನಾಯಕತ್ವ ಕಳೆದುಕೊಂಡ ಯಶ್‌ ಧುಲ್‌
ಪುದುಚೇರಿ ವಿರುದ್ಧದ ರಣಜಿ ಪಂದ್ಯದಲ್ಲಿ 9 ವಿಕೆಟ್‌ಗಳ ಸೋಲನುಭವಿಸಿದ ಬೆನ್ನಲ್ಲೇ ಯಶ್‌ ಧುಲ್‌ ಅವರನ್ನು ದಿಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಸೀನಿಯರ್‌ ಬ್ಯಾಟರ್‌ ಹಿಮ್ಮತ್‌ ಸಿಂಗ್‌ ಅವರಿಗೆ ಕ್ಯಾಪ್ಟನ್ಸಿ ನೀಡಲಾಗಿದೆ.

ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕರಾಗಿರುವ ಯಶ್‌ ಧುಲ್‌ ಅವರಿಗೆ 2022ರಲ್ಲಿ ದಿಲ್ಲಿ ರಣಜಿ ತಂಡದ ಸಾರಥ್ಯ ವಹಿಸಲಾಗಿತ್ತು. 21 ವರ್ಷದ ಧುಲ್‌ ಈವರೆಗೆ 43.88ರ ಸರಾಸರಿಯಲ್ಲಿ 1,185 ರನ್‌ ಬಾರಿಸಿದ್ದಾರೆ. ಆದರೆ ಪುದುಚೇರಿ ವಿರುದ್ಧ ಗಳಿಸಿದ್ದು 2 ಮತ್ತು 23 ರನ್‌ ಮಾತ್ರ.

“ಯಶ್‌ ಪ್ರತಿಭಾನ್ವಿತ ಆಟಗಾರ ನಿಜ. ಆದರೆ ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಮೇಲಿನ ನಾಯಕತ್ವದ ಹೊರೆಯನ್ನು ಇಳಿಸಲಾಗಿದೆ’ ಎಂಬುದಾಗಿ ಡಿಡಿಸಿಎ ಕಾರ್ಯದರ್ಶಿ ರಾಜನ್‌ ಮನ್‌ಚಂದ ಹೇಳಿದ್ದಾರೆ.

ಟಾಪ್ ನ್ಯೂಸ್

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

1-rwqeqwqw

BCCI ಕಾರ್ಯದರ್ಶಿಯಾಗಿ ರೋಹನ್‌ ಜೇಟ್ಲಿ?

1-frr

Ranji; ಕರ್ನಾಟಕ-ಬೆಂಗಾಲ್‌ ಪಂದ್ಯ ನಾಳೆಯಿಂದ: ತಂಡದಲ್ಲಿ ಶಮಿ ಇಲ್ಲ

IPL 2

IPL; ರಿಯಾದ್‌ನಲ್ಲಿ ಮಹಾ ಹರಾಜು?: 204 ಸ್ಥಾನಗಳಿಗೆ ಪೈಪೋಟಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Court-1

Kasaragod: ಪಟಾಕಿ ದುರಂತ; ಜಾಮೀನು ರದ್ದುಗೊಳಿಸುವಂತೆ ಅರ್ಜಿ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

6-udupi

Udupi: ಯತಿಗಳ ಸಮಾಗಮ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.