Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್ ಶತಕ
Team Udayavani, Nov 15, 2024, 1:05 AM IST
ಲಕ್ನೋ: ಆತಿಥೇಯ ಉತ್ತರಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ 89 ರನ್ನಿಗೆ ಆಲೌಟಾದ ಬೆನ್ನಲ್ಲೇ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 275 ರನ್ನಿಗೆ ಇನ್ನಿಂಗ್ಸ್ ಮುಗಿಸಿದೆ. ಕೆ. ಶ್ರೀಜಿತ್ ಶತಕ (110), ಯಶೋವರ್ಧನ್ ಪರಂತಪ್ (55) ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ 186 ರನ್ ಇನ್ನಿಂಗ್ಸ್ ಮುನ್ನಡೆ ಗಳಿಸಲು ಸಾಧ್ಯವಾಯಿತು.
ಎರಡನೇ ದಿನದಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಉತ್ತರ ಪ್ರದೇಶ ಒಂದು ವಿಕೆಟಿಗೆ 78 ರನ್ ಗಳಿಸಿದೆ. ಅದು ಇನ್ನೂ 108 ರನ್ ಹಿನ್ನಡೆಯಲ್ಲಿದೆ.
ಕರ್ನಾಟಕ ತಂಡಕ್ಕೆ ಶ್ರೀಜಿತ್, ಪರಂತಪ್ ಆಧಾರವಾಗಿದ್ದರಿಂದ ತಂಡ ಉತ್ತಮ ಮೊತ್ತ ಪೇರಿಸುವಂತಾಯಿತು. ವೇಗಿ ವಿದ್ಯಾಧರ ಪಾಟೀಲ್ ಕೆಳಕ್ರಮಾಂಕದಲ್ಲಿ 38 ರನ್ ಗಳಿಸಿದರು. ಬೆಂಗಳೂರಿನಲ್ಲಿ ಬಂಗಾಲ ವಿರುದ್ಧದ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಮಾಡಿರುವ ಅವರು ಆಲ್‌ರೌಂಡರ್ ರೀತಿಯಲ್ಲಿ ಪ್ರಗತಿಯಾಗುತ್ತಿರುವುದರ ಲಕ್ಷಣ ತೋರಿದ್ದಾರೆ. ಉತ್ತರಪ್ರದೇಶದ ಶಿವಂ ಮಾವಿ, ಆಖೀಬ್ ಖಾನ್ ತಲಾ 3 ವಿಕೆಟ್ ಪಡೆದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟಿಗೆ 78 ರನ್ ಗಳಿಸಿರುವ ಉತ್ತರ ಪ್ರದೇಶವನ್ನು ಶುಕ್ರವಾರ ಬೇಗನೆ ಆಲೌಟ್ ಮಾಡುವುದು ಮುಖ್ಯ. ಇದರಲ್ಲಿ ರಾಜ್ಯ ಯಶಸ್ವಿಯಾದರೆ ಗೆಲ್ಲುವುದೇನು ಕಷ್ಟವಲ್ಲ. ಆಗ ಕ್ವಾರ್ಟರ್ ಫೈನಲ್ ಆಸೆ ಜೀವಂತವಾಗಿ ಉಳಿಯಲಿದೆ.
ಸಂಕ್ಷಿಪ್ತ ಸ್ಕೋರ್: ಉತ್ತರಪ್ರದೇಶ 89 ಮತ್ತು ಒಂದು ವಿಕೆಟಿಗೆ 78; ಕರ್ನಾಟಕ ಮೊದಲ ಇನ್ನಿಂಗ್ಸ್ 275 (ಕೆ. ಶ್ರೀಜಿತ್ 110, ಪರಂತಪ್ 55, ಮಾವಿ 96ಕ್ಕೆ 3, ಆಖೀಬ್ 53ಕ್ಕೆ 3).
ಅರುಣಾಚಲ-ಗೋವಾ ಪಂದ್ಯ
ದಾಖಲೆಗಳ ಸುರಿಮಳೆ
ಪೋವೊìರಿಮ್ (ಗೋವಾ): ರಣಜಿ ಪ್ಲೇಟ್ ಹಂತದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಗೋವಾ ಕೇವಲ 2 ವಿಕೆಟ್ ನಷ್ಟಕ್ಕೆ 727 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ಸ್ನೇಹಲ್ ಕೌಥಂಕರ್ 205 ಎಸೆತಗಳಲ್ಲಿ ತ್ರಿಶತಕ (ಅಜೇಯ 314) ಬಾರಿಸಿದರು. ಇದು ರಣಜಿ ಇತಿಹಾಸದಲ್ಲೇ 2ನೇ ವೇಗದ ತ್ರಿಶತಕ. ಕಶ್ಯಪ್ ಬೇಕಲ್ 269 ಎಸೆತಗಳಲ್ಲಿ ತ್ರಿಶತಕ ಬಾರಿಸಿದರು. ಇದು ರಣಜಿಯಲ್ಲಿ 3ನೇ ವೇಗದ ತ್ರಿಶತಕ.
ಹೈದರಾಬಾದ್‌ನ ತನ್ಮಯ್ ಅಗರ್ವಾಲ್ 147 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದು ದಾಖಲೆ.ಕೌಥಂಕರ್-ಕಶ್ಯಪ್ 3ನೇ ವಿಕೆಟಿಗೆ 606 ರನ್ ಜತೆಯಾಟವಾಡಿದರು. ಇದು ರಣಜಿ ಇತಿಹಾಸದಲ್ಲಿ ಗರಿಷ್ಠ ರನ್ ಜತೆಯಾಟ. 2017ರಲ್ಲಿ ಮಹಾರಾಷ್ಟ್ರದ ಸ್ವಪ್ನಿಲ್ ಸುಗಳೆ, ಅಂಕಿತ್ ಬವಾನೆ 594 ರನ್ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು.
ಮುಂಬಯಿಗೆ ಮೊದಲ ಇನ್ನಿಂಗ್ಸ್ ಮುನ್ನಡೆ
ಹೊಸದಿಲ್ಲಿ: ಸರ್ವೀಸಸ್ ತಂಡದೆದುರಿನ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬಯಿ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದೆ.
ಸರ್ವೀಸಸ್ ತಂಡದ 240 ರನ್ನಿಗೆ ಉತ್ತರ ವಾಗಿ ಬ್ಯಾಟಿಂಗ್ ನಡೆಸಿದ ಮುಂಬಯಿ ತಂಡವು ಆರಂಭಿಕ ಆಯುಷ್ ಮಾತ್ರೆ ಅವರ ಆಕರ್ಷಕ ಶತಕದಿಂದಾಗಿ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 253 ರನ್ ಗಳಿಸಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ 13 ರನ್ ಮುನ್ನಡೆ ಸಾಧಿಸಿತು.
ಈ ಮೊದಲು ಆರು ವಿಕೆಟಿಗೆ 192 ರನ್ನುಗಳಿಂದ ದಿನದಾಟ ಆರಂಭಿಸಿದ ಸರ್ವೀಸಸ್ ತಂಡವು 240 ರನ್ ಗಳಿಸಿ ಆಲೌಟಾಯಿತು. ಶಾರ್ದೂಲ್ ಠಾಕುರ್ 46 ರನ್ನಿಗೆ ನಾಲ್ಕು ವಿಕೆಟ್ ಪಡೆದರು.
ಆಯುಷ್ ಮಾತ್ರೆ ಅವರ ಶತಕ ಮುಂಬಯಿ ತಂಡದ ಆಕರ್ಷಣೆಯಾಗಿತ್ತು. ಅವರು ಶ್ರೇಯಸ್ ಅಯ್ಯರ್ ಜತೆ ನಾಲ್ಕನೇ ವಿಕೆಟಿಗೆ 109 ರನ್ನುಗಳ ಜತೆಯಾಟ ನಡೆಸಿ ಕುಸಿದ ತಂಡವನ್ನು ಆಧರಿಸಿದ್ದರು. ಅಯ್ಯರ್ 47 ರನ್ ಗಳಿಸಿ ಔಟಾದರೆ ಮಾತ್ರೆ 116 ರನ್ ಗಳಿಸಿ ನಾರಂಗ್‌ಗೆ ವಿಕೆಟ್ ಒಪ್ಪಿಸಿದರು. 149 ಎಸೆತ ಎದುರಿಸಿದ ಅವರು 12 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರು: ಸರ್ವೀಸಸ್ 240 (ಶುಭಂ ರೋಹಿಲ್ಲ 56, ಮೋಹಿತ್ ಅಹÉವತ್ 76, ಶಾದೂìಲ್ ಠಾಕುರ್ 46ಕ್ಕೆ 4, ಮೋಹಿತ್ ಅವಸ್ಥಿ 44ಕ್ಕೆ 2); ಮುಂಬಯಿ 8 ವಿಕೆಟಿಗೆ 253 (ಆಯುಷ್ ಮೊತ್ರೆ 116, ಶ್ರೇಯಸ್ ಅಯ್ಯರ್ 47, ಪುಲ್ಕಿಟ್ ನಾರಂಗ್ 47ಕ್ಕೆ 3).
ಬರೋಡಕ್ಕೆ ಇನ್ನಿಂಗ್ಸ್ ಗೆಲುವು
ವಡೋದರದಲ್ಲಿ ಸಾಗಿದ ಇನ್ನೊಂದು ಪಂದ್ಯದಲ್ಲಿ ಬರೋಡ ತಂಡವು ಮೇಘಾ ಲಯ ವಿರುದ್ಧ ಇನ್ನಿಂಗ್ಸ್ ಮತ್ತು 261 ರನ್ನುಗಳಿಂದ ಗೆದ್ದುಕೊಂಡಿದೆ. ಮೇಘಾಲಯ ಮೊದಲ ಇನ್ನಿಂಗ್ಸ್‌ನಲ್ಲಿ 103 ರನ್ ಗಳಿಸಿದ್ದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕೇವಲ 78 ರನ್ನಿಗೆ ಆಲೌಟಾಗಿ ಇನ್ನಿಂಗ್ಸ್ ಸೋಲು ಅನುಭವಿಸಿತು. ಈ ಮೊದಲು ಬರೋಡ ಮೊದಲ ಇನ್ನಿಂಗ್ಸ್ ನಲ್ಲಿ 442 ರನ್ ಗಳಿಸಿತ್ತು.
ವೇಗಿ ಶಮಿಗೆ 4 ವಿಕೆಟ್: ಆಸೀಸ್ ಪ್ರವಾಸಕ್ಕೆ ಸಜ್ಜು?
ಇಂದೋರ್: ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ವೇಗಿ ಮೊಹಮ್ಮದ್ ಶಮಿ ಮಧ್ಯಪ್ರದೇಶದ ವಿರುದ್ಧ ರಣಜಿ ಪಂದ್ಯದಲ್ಲಿ 4 ವಿಕೆಟ್ ಪಡೆದರು. ಈ ಮೂಲಕ ತಾವು ಫಿಟ್ ಆಗಿರುವ ಸಂದೇಶವನ್ನು ಬಿಸಿಸಿಐಗೆ ರವಾನಿಸಿದ್ದಾರೆ. ಅವರನ್ನು ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ಸಂಸ್ಥೆ ಆಯ್ಕೆ ಮಾಡಲಿದೆಯಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಪ.ಬಂಗಾಲ 228 ರನ್ ಗಳಿಸಿದ್ದರೆ, ಮಧ್ಯಪ್ರದೇಶ 167 ರನ್ನಿಗೆ ಆಲೌಟಾಗಿದೆ. ಬಂಗಾಲ ಎರಡನೇ ಇನ್ನಿಂಗ್ಸ್‌ನಲ್ಲಿ 170 ರನ್ನಗೆ 5 ವಿಕೆಟ್ ಕಳೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.