Ranji ಟ್ರೋಫಿ ಕ್ರಿಕೆಟ್ : ಕರ್ನಾಟಕಕ್ಕೆ ಚಂಡೀಗಢ, ಮುಂಬಯಿಗೆ ಅಸ್ಸಾಂ ಸವಾಲು
Team Udayavani, Feb 16, 2024, 6:00 AM IST
ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಅಂತಿಮ ಸುತ್ತಿನ ಪಂದ್ಯಗಳು ನಾಳೆ ಯಿಂದ ವಿವಿಧ ಸ್ಥಳಗಳಲ್ಲಿ ನಡೆ ಯಲಿವೆ. “ಸಿ’ ಬಣದಲ್ಲಿ 24 ಅಂಕಗ ಳೊಂದಿಗೆ ಅಗ್ರಸ್ಥಾನದಲ್ಲಿರುವ ಕರ್ನಾಟಕ ತಂಡವು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಚಂಡೀಗಢ ತಂಡದ ಸವಾಲನ್ನು ಎದುರಿಸಲಿದೆ.
“ಸಿ’ ಬಣದಲ್ಲಿ ಸದ್ಯ 22 ಅಂಕಗ ಳೊಂದಿಗೆ ದ್ವಿತೀಯ ಸ್ಥಾನದಲ್ಲಿರುವ ತಮಿಳುನಾಡು ತಂಡವು ಪಂಜಾಬ್ ತಂಡವನ್ನು ಎದುರಿಸಲಿದ್ದರೆ 19 ಅಂಕಗಳೊಂದಿಗೆ ಮೂರನೇ ಸ್ಥಾನ ದಲ್ಲಿರುವ ಗುಜರಾತ್ ತಂಡ ಗೋವಾ ತಂಡವನ್ನು ಎದುರಿಸಲಿದೆ. ಪಂಜಾಬ್ ಆಡಿದ ಆರು ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದ್ದರೆ ಚಂಡೀಗಢ ಮತ್ತು ಗೋವಾ ಗೆಲುವು ಕಾಣಲಿಲ್ಲ. ಹೀಗಾಗಿ ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್ ಈ ಮಹತ್ವದ ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಫಲಿತಾಂಶದಲ್ಲಿ ಏನಾ ದರೂ ಬದಲಾವಣೆಯಾದರೆ “ಸಿ’ ಬಣದಿಂದ ಯಾರು ಮುಂದಿನ ಸುತ್ತಿಗೇರು ತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಲಿದೆ.
ಮುಂಬಯಿಗೆ ಅಸ್ಸಾಂ
“ಬಿ’ ಬಣದಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು 30 ಅಂಕ ಪಡೆದಿರುವ ಮುಂಬಯಿ ತಂಡವು ಮುಂದಿನ ಹಂತಕ್ಕೇರಿದೆ. ಅದು ಅಂತಿಮ ಸುತ್ತಿನ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಆಡಲಿದೆ. 25 ಅಂಕ ಹೊಂದಿರುವ ಆಂಧ್ರ ಪ್ರದೇಶ ಕೂಡ ಮುನ್ನಡೆಯುವುದು ಖಚಿತವಾಗಿದೆ. ಆಂಧ್ರ ಅಂತಿಮ ಸುತ್ತಿನ ಪಂದ್ಯದಲ್ಲಿ ಕೇರಳವನ್ನು ಎದುರಿಸಲಿದೆ. ಮೂರನೇ ಸ್ಥಾನದಲ್ಲಿರುವ ಕೇರಳ 14 ಅಂಕ ಹೊಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.