Ranji ಟ್ರೋಫಿ ಕ್ರಿಕೆಟ್: ಕರ್ನಾಟಕ ಗೆಲುವಿಗೆ ಮನೀಷ್ ಪಾಂಡೆ ನೆರವು
Team Udayavani, Feb 4, 2024, 11:00 PM IST
ಸೂರತ್: ಅನುಭವಿ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರ ಸಮಯೋಚಿತ ಬ್ಯಾಟಿಂಗ್ ಬಲದಿಂದಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿಯ “ಸಿ’ ಬಣದ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಒಂದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಗೆಲ್ಲಲು 226 ರನ್ ತೆಗೆಯುವ ಸವಾಲು ಪಡೆದ ಕರ್ನಾಟಕ ತಂಡವು ಮೂರನೇ ದಿನ ಪಾಂಡೆ ಅವರ ತಾಳ್ಮೆಯ ಆಟದಿಂದಾಗಿ 9 ವಿಕೆಟಿಗೆ 229 ರನ್ ಪೇರಿಸಿ ಜಯಭೇರಿ ಬಾರಿಸಿತು. 121 ಎಸೆತ ಎದುರಿಸಿದ ಪಾಂಡೆ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 67 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೊದಲು ರೈಲ್ವೇಸ್ ತಂಡವು 8 ವಿಕೆಟಿಗೆ 209 ರನ್ನುಗಳಿಂದ ದಿನದಾಟ ಆರಂಭಿಸಿ 244 ರನ್ನಿಗೆ ಆಲೌಟಾಯಿತು. ರೈಲ್ವೇಸ್ ಕುಸಿತಕ್ಕೆ ಕಾರಣರಾದ ವೈಶಾಖ್ ವಿಜಯಕುಮಾರ್ 67 ರನ್ನಿಗೆ 5 ವಿಕೆಟ್ ಕಿತ್ತರು.
ಈ ಗೆಲುವಿನಿಂದ ಕರ್ನಾಟಕ ತಂಡವು “ಸಿ’ ಬಣದಲ್ಲಿ 21 ಅಂಕಗ ಳೊಂದಿಗೆ ಅಗ್ರಸ್ಥಾನದಲ್ಲಿದ್ದು ನಾಕೌಟ್ ಹಂತಕ್ಕೇರುವ ಸಾಧ್ಯತೆಯನ್ನು ಹೆಚ್ಚಿ ಕೊಂಡಿದೆ. ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಉಳಿದಿದೆ. ಕರ್ನಾಟಕ ಮುಂದಿನೆರಡು ಪಂದ್ಯಗಳಲ್ಲಿ ತಮಿಳು ನಾಡು ಮತ್ತು ಚಂಡೀಗಢ ವಿರುದ್ಧœ ಆಡಬೇಕಾಗಿದೆ.
ಒಂದು ವಿಕೆಟಿಗೆ 70 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಕರ್ನಾಟಕ ತಂಡವು ಆಬಳಿಕ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 99 ರನ್ ತಲಪುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆಬಳಿಕ ಪಾಂಡೆ ಸಹಿತ ಶರತ್ ಶ್ರೀನಿವಾಸ್ (23), ವೈಶಾಖ್ (38) ಅವರ ಉತ್ತಮ ಆಟದಿಂದಾಗಿ ಕರ್ನಾಟಕ ತಂಡ ರೋಚಕ ಗೆಲುವು ಕಾಣುವಂತಾಯಿತು.
ತ್ರಿಪುರಕ್ಕೆ ಜಯ
ಅಹ್ಮದಾಬಾದ್‌ನಲ್ಲಿ ನಡೆದ ಇನ್ನೊಂದು ಪಂದ್ಯದ್ಲಿ ತ್ರಿಪುರ ತಂಡವು ಗುಜರಾತ್ ತಂಡವನ್ನು 156 ರನ್ನು ಗಳಿಂದ ಸೋಲಿಸಿ ಅಚ್ಚರಿಗೊಳಿಸಿತು.
ಸಂಕ್ಷಿಪ್ತ ಸ್ಕೋರು: ರೈಲ್ವೇಸ್ 155 ಮತ್ತು 244; ಕರ್ನಾಟಕ 174 ಮತ್ತು 9 ವಿಕೆಟಿಗೆ 229 (ಮನೀಷ್ ಪಾಂಡೆ 67 ಔಟಾಗದೆ, ವೈಶಾಖ್ ವಿಜಯಕುಮಾರ್ 38, ಆರ್. ಸಮರ್ಥ್ 35, ಕೆವಿ ಅನೀಶ್ 35, ಆಕಾಶ್ ಪಾಂಡೆ 94ಕ್ಕೆ 5).
ಸೌರಾಷ್ಟ್ರಕ್ಕೆ ಗೆಲುವು
ಸೋಲಾಪುರ: ಎಡಗೈ ಸ್ಪಿನ್ನರ್ ಪರ್ತ್ ಭುತ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಸೌರಾಷ್ಟ್ರ ತಂಡವು ರಣಜಿ “ಎ’ ಬಣದ ಪಂದ್ಯದಲ್ಲಿ ಮಹಾರಾಷ್ಟ್ರವನ್ನು 48 ರನ್ನುಗಳಿಂದ ಸೋಲಿಸಿದೆ.
ಗೆಲ್ಲಲು 208 ರನ್ ಗಳಿಸುವ ಗುರಿ ಪಡೆದ ಮಹಾರಾಷ್ಟ್ರ ತಂಡವು ಪರ್ತ್ ಭುತ್ ಅವರ ದಾಳಿಗೆ ಕುಸಿದು 164 ರನ್ನಿಗೆ ಆಲೌಟಾಗಿ ಶರಣಾಯಿತು. 44 ರನ್ನಿಗೆ 7 ವಿಕೆಟ್ ಕಿತ್ತ ಭುತ್ ಅವರು ಮಹಾರಾಷ್ಟ್ರದ ಕುಸಿತಕ್ಕೆ ಕಾರಣರಾದರು. ಭುತ್ ಅವರಿಗೆ ನೆರವು ನೀಡಿದ ಯುವರಾಜ್‌ಸಿನ್Ø ದೊಡಿಯ ಎರಡು ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು: ಸೌರಾಷ್ಟ್ರ 202 ಮತ್ತು 164; ಮಹಾರಾಷ್ಟ್ರ 159 ಮತ್ತು 164 (ತರಣ್‌ಜಿತ್ ಸಿಂಗ್ ದಿಲ್ಲೋನ್ 28, ಪರ್ತ್ ಭುತ್ 44ಕ್ಕೆ 7).
ಮುಂಬಯಿಗೆ ಇನ್ನಿಂಗ್ಸ್ ಗೆಲುವು
ಕೋಲ್ಕತಾ: ಮೋಹಿತ್ ಅವಸ್ಥಿ ಅವರ ಅಮೋಘ ದಾಳಿಯ ನೆರವಿನಿಂದ ಮುಂಬಯಿ ತಂಡವು ರಣಜಿ ಟ್ರೋಫಿಯ “ಬಿ’ ಬಣದ ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಇನ್ನಿಂಗ್ಸ್ ಮತ್ತು ನಾಲ್ಕು ರನ್ನುಗಳಿಂದ ಜಯ ಸಾಧಿಸಿದೆ.
ಫಾಲೋ ಆನ್ ಪಡೆದಿದ್ದ ಬೆಂಗಾಲ್ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅವಸ್ಥಿ ಅವರ ದಾಳಿಗೆ ಕುಸಿದು 209 ರನ್ನಿಗೆ ಆಲೌಟಾಯಿತು. ಅವಸ್ಥಿ 52 ರನ್ನಿಗೆ 7 ವಿಕೆಟ್ ಕಿತ್ತು ಬೆಂಗಾಲ್ ತಂಡದ ಕುಸಿತಕ್ಕೆ ಕಾರಣರಾದರು. ಅವಸ್ಥಿ ಈ ಪಂದ್ಯದಲ್ಲಿ 10 ವಿಕೆಟ್ ಕಿತ್ತು ಸಂಭ್ರಮಿಸಿದ್ದಾರೆ. ಈ ಸಾಧನೆಗಾಗಿ ಅವಸ್ಥಿ ರಣಜಿಯಲ್ಲಿ ಮೂರನೇ ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದರು.
ಬೆಂಗಾಲ್ ಮೊದಲ ಇನ್ನಿಂಗ್ಸ್‌ನಲ್ಲಿ 199 ರನ್ನಿಗೆ ಆಲೌಟಾಗಿತ್ತು. ಅನುಸ್ತುಪ್ ಮಜುಂದಾರ್ 109 ರನ್ ಹೊಡೆದಿದ್ದರು. ಇದರಿಂದಾಗಿ ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್ ಮುನ್ನಡೆ ಗಳಿಸುವಂತಾಯಿತು. ಈ ಮೊದಲು ಮುಂಬಯಿ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 412 ರನ್ ಗಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.