ಇಂದಿನಿಂದ ರಣಜಿ ಫೈನಲ್‌ ವಿದರ್ಭ ಇತಿಹಾಸವೋ? ದಿಲ್ಲಿಗೆ ಗದ್ದುಗೆಯೋ?


Team Udayavani, Dec 29, 2017, 6:15 AM IST

Ranji-800.jpg

ಇಂದೋರ್‌: 2017-18ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಈ ಬಾರಿಯ ವಿಶೇಷವೆಂದರೆ, ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿದರ್ಭ ತಂಡ ಪ್ರಶಸ್ತಿ ಸುತ್ತಿಗೆ ಆಗಮಿಸಿರುವುದು. ವಿದರ್ಭ ಹಾಗೂ ಅದರ ಇತಿಹಾಸಕ್ಕೆ ಅಡ್ಡಿಯಾಗಿ ನಿಂತಿರುವ ತಂಡ ರಿಷಬ್‌ ಪಂತ್‌ ನೇತೃತ್ವದ ದಿಲ್ಲಿ. ಇತ್ತಂಡಗಳ ನಡುವೆ ಶುಕ್ರವಾರದಿಂದ ಇಲ್ಲಿನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಫೈನಲ್‌ ಹಣಾಹಣಿ ಮೊದಲ್ಗೊಳ್ಳಲಿದೆ.

ಫೈಜ್‌ ಫ‌ಜಲ್‌ ನಾಯಕತ್ವದ ವಿದರ್ಭ ತಂಡದ್ದು ಈ ಬಾರಿ ಕನಸಿನ ಓಟ. ಅದು “ಡಿ’ ಗುಂಪಿನ ಅಗ್ರಸ್ಥಾನಿಯಾಗಿ ಮೊದಲ ಬಾರಿ ರಣಜಿ ಸೆಮಿಫೈನಲ್‌ ಪ್ರವೇಶಿಸಿದ್ದನ್ನು ಮರೆಯುವಂತಿಲ್ಲ. ಅಲ್ಲಿ ಬಲಿಷ್ಠ ಹಾಗೂ ನೆಚ್ಚಿನ ತಂಡವಾದ ಕರ್ನಾಟಕವನ್ನು ಮಣಿಸುವ ಮೂಲಕ ತಾನೆಷ್ಟು ಅಪಾಯಕಾರಿ ತಂಡ ಎಂಬುದನ್ನು ಸಾಬೀತುಪಡಿಸಿತ್ತು. ಈಗ ಪ್ರಥಮ ಬಾರಿ ಫೈನಲ್‌ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ. ವಿದರ್ಭದ ಈ ಅಜೇಯ ಓಟಕ್ಕೆ “ಸಂತಸದ ಮುಕ್ತಾಯ’ ಲಭಿಸೀತೇ ಎಂಬುದು ಕ್ರಿಕೆಟ್‌ ಪ್ರೇಮಿಗಳ ಕೌತುಕ.

ವಿದರ್ಭ ಅಂಡರ್‌ ಡಾಗ್ಸ್‌
ನಾಯಕ ಫೈಜ್‌ ಫ‌ಜಲ್‌ ಹೇಳುವಂತೆ ವಿದರ್ಭ “ಅಂಡರ್‌ ಡಾಗ್ಸ್‌’ ತಂಡ. ಗೆದ್ದರೆ ಬಂಪರ್‌, ಸೋತರೆ ಅವಮಾನವೇನಿಲ್ಲ. ಆದರೆ ಇಲ್ಲಿಯ ತನಕ ಬಂದು ಟ್ರೋಫಿ ಎತ್ತದೆ ಉಳಿಯುವುದರಲ್ಲಿ ಅರ್ಥವಿಲ್ಲ. ಅಂಡರ್‌ ಡಾಗ್ಸ್‌ ಆದರೂ “ಡೋಂಟ್‌ ಕೇರ್‌’ ರೀತಿಯಲ್ಲಿ ಆಡೋಣ ಎಂದು ಆತ್ಮವಿಶ್ವಾಸ ತುಂಬಿದ್ದಾರೆ ಫ‌ಜಲ್‌. ಅವರು ತಂಡದ ಭರವಸೆಯ ಆರಂಭಕಾರ. ಜತೆಗಾರ ಸಂಜಯ್‌ ರಾಮಸ್ವಾಮಿ ಕೂಡ ಕ್ರೀಸ್‌ ಆಕ್ರಮಿಸಿಕೊಳ್ಳಲು ಶಕ್ತರು. ಮುಂಬಯಿಯ ಮಾಜಿ ಆಟಗಾರ, ರಣಜಿಯಲ್ಲಿ ಸರ್ವಾಧಿಕ ರನ್‌ ಪೇರಿಸಿದ ದಾಖಲೆ ಹೊಂದಿರುವ ವಾಸಿಮ್‌ ಜಾಫ‌ರ್‌ ತಂಡದ ಆಧಾರಸ್ತಂಭ. ಕರ್ನಾಟಕವನ್ನು ತೊರೆದು ಹೋಗಿರುವ ಬ್ಯಾಟ್ಸ್‌ಮನ್‌ ಗಣೇಶ್‌ ಸತೀಶ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಎದ್ದು ಕಾಣುವ ಹೆಸರು ಮಧ್ಯಮ ವೇಗಿ ರಜನೀಶ್‌ ಗುರ್ಬಾನಿ ಅವರದು. ಗುರ್ಬಾನಿ ಕರ್ನಾಟಕದ ಮೇಲೆ ಹೇಗೆ ಆಕ್ರಮಣಗೈದರೆಂಬುದು ಗೊತ್ತೇ ಇದೆ. ದಿಲ್ಲಿ ವಿರುದ್ಧವೂ ಗುರ್ಬಾನಿ ಬೌಲಿಂಗ್‌ ಮ್ಯಾಜಿಕ್‌
ಮಾಡಿಯಾರೆಂಬುದು ತಂಡದ ನಿರೀಕ್ಷೆ.

8ನೇ ಪ್ರಶಸ್ತಿ ಮೇಲೆ ದಿಲ್ಲಿ ಕಣ್ಣು
7 ಸಲ ರಣಜಿ ಚಾಂಪಿಯನ್‌ ಆಗಿರುವ ದಿಲ್ಲಿ ತಂಡಕ್ಕೆ ಕಳೆದೊಂದು ದಶಕದಿಂದ ರಣಜಿ ಪ್ರಶಸ್ತಿ ಮರೀಚಿಕೆಯಾಗಿಯೇ ಉಳಿದಿದೆ. ಅದು ಕೊನೆಯ ಸಲ ಫೈನಲ್‌ ಪ್ರವೇಶಿಸಿದ್ದು, ಚಾಂಪಿಯನ್‌ ಆದದ್ದು 2007-08ರಲ್ಲಿ. ಅಂದು ಮುಂಬಯಿಯಲ್ಲಿ ನಡೆದ ಫೈನಲ್‌ನಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದ ದಿಲ್ಲಿ ತಂಡ ಉತ್ತರಪ್ರದೇಶವನ್ನು 9 ವಿಕೆಟ್‌ಗಳಿಂದ ಮಣಿಸಿ ಟ್ರೋಫಿ ಹಿಡಿದಿತ್ತು. ಗಂಭೀರ್‌ ಮೊದಲ ಸರದಿಯಲ್ಲಿ ಸೊನ್ನೆಗೆ ಔಟಾದರೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 130 ರನ್‌ ಬಾರಿಸಿದ್ದರು. ಎಡಗೈ ಆರಂಭಕಾರ ಗಂಭೀರ್‌ ಈ ಸಲವೂ ದಿಲ್ಲಿ ತಂಡದಲ್ಲಿದ್ದಾರೆ, ಆದರೆ ನಾಯಕನಾಗಿ ಅಲ್ಲ. ತಂಡದ ಸಾರಥ್ಯ ಕೀಪರ್‌ ರಿಷಬ್‌ ಪಂತ್‌ ಹೆಗಲೇರಿದೆ.

ಗಂಭೀರ್‌ ಫಾರ್ಮ್ ದಿಲ್ಲಿಗೆ ನಿರ್ಣಾಯಕ. ಮಧ್ಯಪ್ರದೇಶ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 95 ರನ್‌ ಹೊಡೆದದ್ದು, ಬಂಗಾಲ ಎದುರಿನ ಸೆಮಿಫೈನಲ್‌ನಲ್ಲಿ ಸೆಂಚುರಿ ಬಾರಿಸಿದ್ದೆಲ್ಲ ಗಂಭೀರ್‌ ಬ್ಯಾಟಿಂಗ್‌ ಸಾಹಸವನ್ನು ತೆರೆದಿಡುತ್ತದೆ. ಈ ಎಡಗೈ ಆರಂಭಿಕನ ಜತೆಗಾರ ಕುಣಾಲ್‌ ಚಾಂಡೇಲ ಕೂಡ ಪ್ರಚಂಡ ಫಾರ್ಮ್ನಲ್ಲಿದ್ದಾರೆ.

ಸೆಮಿಫೈನಲ್‌ನಲ್ಲಿ ಬಂಗಾಲವನ್ನು ಇನ್ನಿಂಗ್ಸ್‌ ಸೋಲಿಗೆ ತಳ್ಳುವಲ್ಲಿ ಇವರಿಬ್ಬರ 232 ರನ್‌ ಜತೆಯಾಟ ನಿರ್ಣಾಯಕವಾಗಿತ್ತು. ನಿತೀಶ್‌ ರಾಣ, ಹಿಮ್ಮತ್‌ ಸಿಂಗ್‌, ಧ್ರುವ ಶೋರಿ ಬ್ಯಾಟಿಂಗ್‌ ವಿಭಾಗದ ಇತರ ಪ್ರಮುಖರು.
ನವದೀಪ್‌ ಸೈನಿ, ವಿಕಾಸ್‌ ತೋಕಾಸ್‌, ಕುಲ್ವಂತ್‌ ಖೆಜೊÅàಲಿಯ ಬೌಲಿಂಗ್‌ ವಿಭಾಗದ ಹುರಿಯಾಳಾಗಿದ್ದಾರೆ. ಆದರೆ ಗಾತ್ರದಲ್ಲಿ ತುಸು ಚಿಕ್ಕದಾಗಿರುವ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಬ್ಯಾಟ್ಸ್‌ಮನ್‌ಗಳು ಮೆರೆಯುವ ಸಾಧ್ಯತೆ ಹೆಚ್ಚಿದೆ. ಮೊನ್ನೆಯಷ್ಟೇ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಟಿ20 ಪಂದ್ಯದಲ್ಲಿ ರೋಹಿತ್‌ ಶರ್ಮ 35 ಎಸೆತಗಳಿಂದ ಶತಕ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದನ್ನು ಮರೆಯುವಂತಿಲ್ಲ!

ರಣಜಿ ತಂಡಗಳು
ವಿದರ್ಭ: ಫೈಜ್‌ ಫ‌ಜಲ್‌ (ನಾಯಕ), ಸಂಜಯ್‌ ರಾಮಸ್ವಾಮಿ, ವಾಸಿಮ್‌ ಜಾಫ‌ರ್‌, ಗಣೇಶ್‌ ಸತೀಶ್‌, ಅಪೂರ್ವ್‌ ವಾಂಖೇಡೆ, ವಿನೋದ್‌ ವಾಡ್ಕರ್‌ (ವಿ.ಕೀ.), ಆದಿತ್ಯ ಸರ್ವಟೆ, ಅಕ್ಷಯ್‌ ವಖಾರೆ, ಸಿದ್ದೇಶ್‌ ನೆರಾಲ್‌, ರಜನೀಶ್‌ ಗುರ್ಬಾನಿ, ಕಣ್‌ì ಶರ್ಮ, ಶಲಭ್‌ ಶ್ರೀವಾಸ್ತವ, ಸಿದ್ದೇಶ್‌ ವಾತ್‌, ಅಕ್ಷಯ್‌ ಕರ್ಣೆವಾರ್‌, ಸುನಿಕೇತ್‌ ಬಿಂಗೇವಾರ್‌, ರವಿಕುಮಾರ್‌ ಠಾಕೂರ್‌, ಆದಿತ್ಯ ಠಾಕ್ರೆ.

ದಿಲ್ಲಿ: ರಿಷಬ್‌ ಪಂತ್‌ (ನಾಯಕ, ವಿ.ಕೀ.), ಗೌತಮ್‌ ಗಂಭೀರ್‌, ಕುಣಾಲ್‌ ಚಾಂಡೇಲ, ಧ್ರುವ ಶೋರಿ, ನಿತೀಶ್‌ ರಾಣ, ಹಿಮ್ಮತ್‌ ಸಿಂಗ್‌, ಮನನ್‌ ಶರ್ಮ, ವಿಕಾಸ್‌ ಮಿಶ್ರ, ವಿಕಾಸ್‌ ತೋಕಾಸ್‌, ನವದೀಪ್‌ ಸೈನಿ, ಕುಲ್ವಂತ್‌ ಖೆಜೊÅàಲಿಯಾ, ಆಕಾಶ್‌ ಸುದಾನ್‌, ಶಿವಂ ಶರ್ಮ, ಉನ್ಮುಕ್‌¤ ಚಂದ್‌, ಮಿಲಿಂದ್‌ ಕುಮಾರ್‌.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.