ರಣಜಿ ಟ್ರೋಫಿ ಫೈನಲ್‌-2022: ಮಿಂಚಿದ ಜೈಸ್ವಾಲ್‌; ಮುಂಬಯಿ ಎಚ್ಚರಿಕೆ ಆಟ


Team Udayavani, Jun 22, 2022, 11:33 PM IST

ರಣಜಿ ಟ್ರೋಫಿ ಫೈನಲ್‌-2022: ಮಿಂಚಿದ ಜೈಸ್ವಾಲ್‌; ಮುಂಬಯಿ ಎಚ್ಚರಿಕೆ ಆಟ

ಬೆಂಗಳೂರು: ಉತ್ತಮ ಆರಂಭದ ಬಳಿಕ ಮಧ್ಯಪ್ರದೇಶದ ಶಿಸ್ತಿನ ಬೌಲಿಂಗ್‌ ದಾಳಿಗೆ ಸಿಲುಕಿದ ಮುಂಬಯಿ, ರಣಜಿ ಟ್ರೋಫಿ ಫೈನಲ್‌ ಹಣಾಹಣಿಯಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾಗಿದೆ. ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್‌ ಕಳೆದು ಕೊಂಡು 248 ರನ್‌ ಗಳಿಸಿದೆ. ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ಮುಂದು ವರಿಸಿದ ಯಶಸ್ವಿ ಜೈಸ್ವಾಲ್‌ 78 ರನ್‌ ಬಾರಿಸಿದರು.

ಟಾಸ್‌ ಗೆದ್ದ ಮುಂಬಯಿ ನಾಯಕ ಪೃಥ್ವಿ ಶಾ ಮೊದಲು ಬ್ಯಾಟಿಂಗ್‌ ನಡೆಸಲು ಮುಂದಾದರು. “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಪಿಚ್‌ ಸ್ಟ್ರೋಕ್‌ಪ್ಲೇಗೆ ನೆರವು ನೀಡದಿರುವುದು ಅರಿವಿಗೆ ಬಂತು. ಹೀಗಾಗಿ ಪೃಥ್ವಿ ಶಾ-ಯಶಸ್ವಿ ಜೈಸ್ವಾಲ್‌ ಬಹಳ ಎಚ್ಚರಿಕೆಯಿಂದ ರನ್‌ ಪೇರಿಸತೊಸಗಿದರು. 28ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು 87 ರನ್‌ ಒಟ್ಟುಗೂಡಿಸಿದರು. ಈ ಹಂತದಲ್ಲಿ ಸೀಮರ್‌ ಅನುಭವ್‌ ಅಗರ್ವಾಲ್‌ ಮಧ್ಯ ಪ್ರದೇಶಕ್ಕೆ ಮೊದಲ ಯಶಸ್ಸು ತಂದಿತ್ತರು. 47 ರನ್‌ ಮಾಡಿದ ಶಾ ಬೌಲ್ಡ್‌ ಆಗಿ ವಾಪಸಾದರು. 79 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 5 ಫೋರ್‌, ಒಂದು ಸಿಕ್ಸರ್‌ ಒಳಗೊಂಡಿತ್ತು.

ಜೈಸ್ವಾಲ್‌ ಟಾಪ್‌ ಸ್ಕೋರರ್‌
ಯಶಸ್ವಿ ಜೈಸ್ವಾಲ್‌ 60ನೇ ಓವರ್‌ ತನಕ ಮಧ್ಯ ಪ್ರದೇಶ ಬೌಲರ್‌ಗಳ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಇವರು ಸಾಗುತ್ತಿದ್ದ ರೀತಿ ಕಂಡಾಗ ಸತತ 4ನೇ ಶತಕದ ನಿರೀಕ್ಷೆ ಮೂಡಿತ್ತು. ಆದರೆ ಅಗರ್ವಾಲ್‌ ಈ ಬಹು ಮೂಲ್ಯ ವಿಕೆಟ್‌ ಉಡಾಯಿಸುವಲ್ಲಿ ಯಶಸ್ವಿಯಾದರು. ಜೈಸ್ವಾಲ್‌ ಆಟ 78 ರನ್ನಿಗೆ ಮುಗಿಯಿತು. ಎದುರಿಸಿದ್ದು 163 ಎಸೆತ; ಸಿಡಿಸಿದ್ದು 7 ಫೋರ್‌ ಹಾಗೂ ಒಂದು ಸಿಕ್ಸರ್‌.

ಈ ನಡುವೆ ಅರ್ಮಾನ್‌ ಜಾಫ‌ರ್‌ ಮತ್ತು ಸುವೇದ್‌ ಪಾರ್ಕರ್‌ ಅವರಿಂದ ಸಣ್ಣ ಕೊಡುಗೆಯಷ್ಟೇ ಸಂದಾಯ ವಾಯಿತು. ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ್ದ ಜಾಫ‌ರ್‌ 26 ರನ್‌ ಮಾಡಿದರೆ, ಪದಾರ್ಪಣ ಪಂದ್ಯದಲ್ಲೇ ದ್ವಿಶತಕ ಹೊಡೆದಿದ್ದ ಪಾರ್ಕರ್‌ 18 ರನ್‌ ಮಾಡಿ ವಾಪಸಾದರು. ವಿಕೆಟ್‌ ಕೀಪರ್‌ ಹಾರ್ದಿಕ್‌ ತಮೋರೆ ಆಟ 24 ರನ್ನಿಗೆ ಕೊನೆಗೊಂಡಿತು. ನೀಳಕಾಯದ ಸಾರಾಂಶ್‌ ಜೈನ್‌ 2 ವಿಕೆಟ್‌ ಉಡಾಯಿಸಿ ಮುಂಬಯಿಯ ದೊಡ್ಡ ಮೊತ್ತದ ಯೋಜನೆಗೆ ತಡೆ ಯೊಡ್ಡಿದರು. ಜಾಫ‌ರ್‌ ವಿಕೆಟ್‌ ಎಡಗೈ ಸ್ಪಿನ್ನರ್‌ ಕುಮಾರ ಕಾರ್ತಿಕೇಯ ಪಾಲಾಯಿತು.

400 ರನ್‌ ಉತ್ತಮ ಮೊತ್ತ
ಈ ಟ್ರ್ಯಾಕ್‌ ಮೇಲೆ 400 ರನ್‌ ಪೇರಿಸಿದರೆ ಮುನ್ನಡೆ ಗಳಿಸಬಹು ದೆಂಬುದು ಸದ್ಯದ ಲೆಕ್ಕಾಚಾರ. ಕೂಟದ ಸರ್ವಾಧಿಕ ಸ್ಕೋರರ್‌ ಸರ್ಫರಾಜ್ ಖಾನ್‌ 40 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (125 ಎಸೆತ, 3 ಬೌಂಡರಿ). ಇವ ರೊಂದಿಗೆ 12 ರನ್‌ ಮಾಡಿದ ಶಮ್ಸ್‌ ಮುಲಾನಿ ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಮುಂಬಯಿ-5 ವಿಕೆಟಿಗೆ 248 (ಪೃಥ್ವಿ ಶಾ 47, ಯಶಸ್ವಿ ಜೈಸ್ವಾಲ್‌ 78, ಅರ್ಮಾನ್‌ ಜಾಫ‌ರ್‌ 26, ಪಾರ್ಕರ್‌ 18, ತಮೋರೆ 24, ಸರ್ಫರಾಜ್  ಬ್ಯಾಟಿಂಗ್‌ 40, ಮುಲಾನಿ ಬ್ಯಾಟಿಂಗ್‌ 12, ಸಾರಾಂಶ್‌ ಜೈನ್‌ 31ಕ್ಕೆ 2, ಅನುಭವ್‌ ಅಗರ್ವಾಲ್‌ 56ಕ್ಕೆ 2, ಕುಮಾರ ಕಾರ್ತಿಕೇಯ 91ಕ್ಕೆ 1)

ಟಾಪ್ ನ್ಯೂಸ್

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.