ರಣಜಿ: ಗುಜರಾತ್‌ಗೆ 100 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ
Team Udayavani, Jan 13, 2017, 3:45 AM IST
ಇಂದೋರ್: ಶ್ರೇಯಸ್ ಅಯ್ಯರ್ ಅವರ ತಾಳ್ಮೆಯ ಅರ್ಧಶತಕದಿಂದಾಗಿ ಹಲವು ಬಾರಿಯ ಚಾಂಪಿಯನ್ ಮುಂಬಯಿ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಫೈನಲ್‌ನಲ್ಲಿ ತನ್ನ ಹೋರಾಟವನ್ನು ಮುಂದುವರಿಸಿದೆ.
ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಗುಜರಾತ್‌ಗೆ ಬಿಟ್ಟುಕೊಟ್ಟ ಬಳಿಕ ಮುಂಬಯಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದ್ದು ಗೆಲುವಿನ ವಿಶ್ವಾಸ ಮೂಡಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಮುಂಬಯಿ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟಿಗೆ 208 ರನ್ ಗಳಿಸಿದೆ. ಈಗಾಗಲೇ 108 ರನ್ ಮುನ್ನಡೆ ಸಾಧಿಸಿರುವ ಮುಂಬಯಿ ನಾಲ್ಕನೇ ದಿನ ಈ ಮುನ್ನಡೆಯನ್ನು ಮುನ್ನೂರಕ್ಕಿಂತ ಹೆಚ್ಚಿನ ಮೊತ್ತಕ್ಕೇರಿಸಿದರೆ ಗೆಲುವಿಗೆ ಪ್ರಯತ್ನಿಸಬಹುದು. ಇನ್ನೆರಡು ದಿನಗಳ ಆಟ ಬಾಕಿ ಉಳಿದಿರುವುದರಿಂದ ಗುಜರಾತ್ ಬಹಳಷ್ಟು ಜಾಗ್ರತೆ ವಹಿಸಿ ಆಡಬೇಕಾಗಿದೆ.
ಆರು ವಿಕೆಟಿಗೆ 291 ರನ್ನಿನಿಂದ ದಿನದಾಟ ಆರಂಭಿಸಿದ ಗುಜರಾತ್ ಹೆಚ್ಚು ಹೊತ್ತು ಆಡಲು ವಿಫಲವಾಯಿತು. ಠಾಕುರ್ ಮತ್ತು ಬಲ್ವಿಂದರ್ ಸಂಧು ದಾಳಿಗೆ ಕುಸಿದ ಗುಜರಾತ್ 37 ರನ್ ಪೇರಿಸುವಷ್ಟರಲ್ಲಿ ಆಲೌಟಾಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 100 ರನ್ ಮುನ್ನಡೆ ಪಡೆಯಿತು.
ಶಾದೂìಲ್ ಠಾಕುರ್ 84 ರನ್ನಿಗೆ 4 ವಿಕೆಟ್ ಪಡೆದರೆ ಬಲ್ವಿಂದರ್ ಸಂಧು ಮತ್ತು ಅಭಿಷೇಕ್ ನಾಯರ್ ತಲಾ ಮೂರು ವಿಕೆಟ್ ಕಿತ್ತರು.
ಮುಂಬಯಿ ಹೋರಾಟ: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮುಂಬಯಿ ಉತ್ತಮ ಹೋರಾಟ ನೀಡುವಲ್ಲಿ ಯಶಸ್ವಿಯಾಯಿತು. ತಂಡದ ಮೊತ್ತ 66 ರನ್ ತಲುಪಿದಾಗ ಆರಂಭಿಕರು ಪೆವಿಲಿಯನ್ ಸೇರಿಕೊಂಡ ಬಳಿಕ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ಅವರಿಬ್ಬರು ಮೂರನೇ ವಿಕೆಟಿಗೆ 127 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಉತ್ತಮವಾಗಿ ಆಡುತ್ತಿದ್ದ ಅಯ್ಯರ್ ಅಂತಿಮ ಅವಧಿಯ ಆಟದ ವೇಳೆ ಔಟಾದರು. 137 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 82 ರನ್ ಹೊಡೆದರು.
ದಿನದಾಟದ ಅಂತ್ಯಕ್ಕೆ ಸೂರ್ಯಕುಮಾರ್ ಯಾದವ್ (45 ಬ್ಯಾಟಿಂಗ್) ಮತ್ತು ನಾಯಕ ಆದಿತ್ಯ ತಾರೆ 13 ರನ್ನಿನಿಂದ ಆಡುತ್ತಿದ್ದಾರೆ. ಅವರಿಬ್ಬರು ನಾಲ್ಕನೇ ದಿನ ಗುಜರಾತ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಮೊತ್ತ ಪೇರಿಸಿದರೆ ಮುಂಬಯಿ ಗೆಲುವಿಗೆ ಪ್ರಯತ್ನಿಸಬಹುದು.
ಸಂಕ್ಷಿಪ್ತ ಸ್ಕೋರು: ಮುಂಬಯಿ 228 ಮತ್ತು 3 ವಿಕೆಟಿಗೆ 208 (ಪೃಥ್ವಿ ಶಾ 44, ಶ್ರೇಯಸ್ ಅಯ್ಯರ್ 82, ಸೂರ್ಯಕುಮಾರ್ ಯಾದವ್ 45 ಬ್ಯಾಟಿಂಗ್, ಚಿಂತನ್ ಗಾಜ 54ಕ್ಕೆ 3); ಗುಜರಾತ್ 328 (ಭಾರ್ಗವ್ ಮೆರಾಯ್ 45, ಪಾರ್ಥಿವ್ ಪಟೇಲ್ 90, ಮನ್‌ಪ್ರೀತ್ ಜುನೇಜ 77, ರುಜುಲ್ ಭಟ್ 25, ರಶ್ ಕಲಾರಿಯ 27, ಶಾದೂìಲ್ ಠಾಕುರ್ 84ಕ್ಕೆ 4, ಬಲ್ವಿಂದರ್ ಸಂಧು 63ಕ್ಕೆ 3, ಅಭಿಷೇಕ್ ನಾಯರ್ 101ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.