ರಣಜಿ ಟ್ರೋಫಿ: ಕಾಶ್ಮೀರ ವಿರುದ್ಧ ಕರುಣ್ ಅಜೇಯ ಶತಕ
Team Udayavani, Feb 25, 2022, 6:54 AM IST
ಚೆನ್ನೈ: ಗುರುವಾರ ಮೊದಲ್ಗೊಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ರಣಜಿ ಪಂದ್ಯದಲ್ಲಿ ತೀವ್ರ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿದ ಕರ್ನಾಟಕವನ್ನು ಕರುಣ್ ನಾಯರ್ ಅಜೇಯ ಶತಕದ ಮೂಲಕ ಮೇಲೆತ್ತಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ 8 ವಿಕೆಟಿಗೆ 268 ರನ್ ಗಳಿಸಿದೆ. ಇದರಲ್ಲಿ ನಾಯರ್ ಕೊಡುಗೆ ಅಜೇಯ 152.
ದೇವದತ್ತ ಪಡಿಕ್ಕಲ್ (8) ಔಟಾದೊಡನೆ 3ನೇ ಓವರ್‌ನಲ್ಲೇ ಬ್ಯಾಟ್ ಹಿಡಿದು ಬಂದ ನಾಯರ್ 267 ಎಸೆತಗಳನ್ನು ನಿಭಾಯಿಸಿ ನಿಂತಿದ್ದಾರೆ. ಆಪತ್ಭಾಂಧವನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿ 21 ಬೌಂಡರಿ, ಒಂದು ಸಿಕ್ಸರ್ ಸಿಡಿಸಿದ್ದಾರೆ. ನಾಯರ್ ಅವರದು ಏಕಾಂಗಿ ಹೋರಾಟವಾಗಿತ್ತು. ಆರಂಭಕಾರ ಆರ್. ಸಮರ್ಥ್ (45) ಮತ್ತು ಕೊನೆಯಲ್ಲಿ ರೋನಿತ್ ಮೋರೆ (23) ಅವರಿಂದ ಮಾತ್ರ ನಾಯರ್‌ಗೆ ಉಪಯುಕ್ತ ಬೆಂಬಲ ಸಿಕ್ಕಿತು. ಸಮರ್ಥ್-ನಾಯರ್ ಜೋಡಿಯ ದ್ವಿತೀಯ ವಿಕೆಟ್ ಜತೆಯಾಟದಲ್ಲಿ 98 ರನ್ ಒಟ್ಟುಗೂಡಿತು.
ಪರಿಣಾಮಕಾರಿ ಬೌಲಿಂಗ್ :
ಕಾಶ್ಮೀರದ ವೇಗಿಗಳಾದ ಉಮ್ರಾನ್ , ಮಜ್ತಬಾ ಯೂಸುಫ್ ಮತ್ತು ಆಫ್ಸ್ಪಿನ್ನರ್ ಪರ್ವೇಜ್ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು. ಮೂವರೂ ತಲಾ 2 ವಿಕೆಟ್‌ಕೆಡವಿದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ ಪ್ರಥಮ
ಇನ್ನಿಂಗ್ಸ್ -8 ವಿಕೆಟಿಗೆ 268 (ಕರುಣ್ ಬ್ಯಾಟಿಂಗ್ 152, ಆರ್. ಸಮರ್ಥ್ 45, ರೋನಿತ್ ಮೋರೆ 23, ಮಲಿಕ್ 35ಕ್ಕೆ 2, ಯೂಸುಫ್ 44ಕ್ಕೆ 2, ರಸೂಲ್ 51ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.