ರಣಜಿ: ಮುಂಬಯಿ ಫೈನಲ್ ಪ್ರವೇಶ
Team Udayavani, Jan 6, 2017, 3:45 AM IST
ರಾಜ್‌ಕೋಟ್: ಪಾದಾರ್ಪಣಾ ಪಂದ್ಯದಲ್ಲೇ ಶತಕ ಬಾರಿಸಿದ 17ರ ಹರೆಯದ ಆರಂಭಕಾರ ಪೃಥ್ವಿ ಶಾ ಸಾಹಸದಿಂದ ತಮಿಳುನಾಡನ್ನು 6 ವಿಕೆಟ್‌ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ಮುಂಬಯಿ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಇರಿಸಿದೆ. ಇದು ಮುಂಬಯಿ ಕಾಣುತ್ತಿರುವ 46ನೇ ರಣಜಿ ಪ್ರಶಸ್ತಿ ಕಾಳಗ.
ಜ. 10ರಿಂದ ಇಂದೋರ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಮುಂಬಯಿ-ಗುಜರಾತ್ ಮುಖಾಮುಖೀ ಆಗಲಿವೆ. ಗುಜರಾತ್ ಇನ್ನಿಂಗ್ಸ್ ಹಿನ್ನಡೆ ಹೊರತಾಗಿಯೂ ಝಾರ್ಖಂಡ್ ವಿರುದ್ಧ 123 ರನ್ನುಗಳ ಜಯ ಸಾಧಿಸಿತ್ತು.
ಸೆಮಿಫೈನಲ್ ಗೆಲುವಿಗಾಗಿ 251 ರನ್ನುಗಳ ಸಾಮಾನ್ಯ ಗುರಿ ಪಡೆದಿದ್ದ ಆದಿತ್ಯ ತಾರೆ ನಾಯಕತ್ವದ ಮುಂಬಯಿ, ಅಂತಿಮ ದಿನವಾದ ಗುರುವಾರ 4 ವಿಕೆಟ್ ನಷ್ಟದಲ್ಲಿ ಇದನ್ನು ಸಾಧಿಸಿತು. ಆರಂಭಕಾರ ಪೃಥ್ವಿ ಶಾ 120 ರನ್ನುಗಳ ಕೊಡುಗೆ ಸಲ್ಲಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 175 ಎಸೆತಗಳನ್ನು ನಿಭಾಯಿಸಿದ ಶಾ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು.
ಪೃಥ್ವಿ ಶಾ 2 ದಶಕಗಳ ಬಳಿಕ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಮುಂಬಯಿಯ ಮೊದಲ ಆಟಗಾರ. 1993-94ರಲ್ಲಿ ಅಮೋಲ್ ಮುಜುಮಾªರ್ ಈ ಸಾಧನೆ ಮಾಡಿದ್ದರು.
ಆರಂಭಕಾರ ಪ್ರಫುಲ್ ವಾಘೇಲ (36), ಶ್ರೇಯಸ್ ಅಯ್ಯರ್ (40) ಮತ್ತು ಸೂರ್ಯಕುಮಾರ್ ಯಾದವ್ (34) ಮುಂಬಯಿ ಸರದಿಯಲ್ಲಿ ಮಿಂಚಿದ ಇತರ ಬ್ಯಾಟ್ಸ್‌ಮನ್‌ಗಳು.
ಮುಂಬಯಿ ವಿಕೆಟ್ ನಷ್ಟವಿಲ್ಲದೆ 5 ರನ್ ಮಾಡಿದಲ್ಲಿಂದ ಅಂತಿಮ ದಿನದಾಟ ಮುಂದುವರಿಸಿತ್ತು. ಶಾ-ವಾಘೇಲ ಮೊದಲ ವಿಕೆಟಿಗೆ 90 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು.
ಮೊದಲ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಿದ್ದರಿಂದ, ಸ್ಪಷ್ಟ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ತಮಿಳುನಾಡು ತನ್ನ ದ್ವಿತೀಯ ಸರದಿಯನ್ನು ಬಹಳ ಬೇಗ ಡಿಕ್ಲೇರ್ ಮಾಡಿತ್ತು. ಆದರೆ ಅಭಿನವ್ ಮುಕುಂದ್ ಬಳಗದ ಈ ಯೋಜನೆ ಫಲ ಕೊಡಲಿಲ್ಲ.
ಸಂಕ್ಷಿಪ್ತ ಸ್ಕೋರ್: ತಮಿಳುನಾಡು-305 ಮತ್ತು 6 ವಿಕೆಟಿಗೆ 356 ಡಿಕ್ಲೇರ್. ಮುಂಬಯಿ-411 ಮತ್ತು 4 ವಿಕೆಟಿಗೆ 251 (ಶಾ 120, ಅಯ್ಯರ್ 40, ವಾಘೇಲ 36, ಯಾದವ್ 34, ಔಶಿಕ್ ಶ್ರೀನಿವಾಸ್ 73ಕ್ಕೆ 2). ಪಂದ್ಯಶ್ರೇಷ್ಠ: ಪೃಥ್ವಿ ಶಾ.
ರಣಜಿ ಫೈನಲ್ (ಜ. 10-14)
ಮುಂಬಯಿ-ಗುಜರಾತ್
ಸ್ಥಳ: ಇಂದೋರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.