ಮುನ್ನಡೆ ಬಳಿಕ ಕುಸಿದ ಮುಂಬಯಿ
Team Udayavani, Dec 1, 2018, 6:00 AM IST
ಮುಂಬಯಿ: ಗುಜರಾತ್ ವಿರುದ್ಧ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮುಂಬಯಿ ತಂಡ 16 ರನ್ನುಗಳ ಮಹತ್ವದ ಮುನ್ನಡೆ ಸಾಧಿಸಿದೆ. ಮುಂಬಯಿಯ 297 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬು ನೀಡಿದ ಗುಜರಾತ್ 3ನೇ ದಿನವಾದ ಶುಕ್ರವಾರ 281ಕ್ಕೆ ಆಲೌಟ್ ಆಯಿತು.
ಮುನ್ನಡೆ ಬಳಿಕ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿದ ಮುಂಬಯಿ ಒಂದು ಹಂತದಲ್ಲಿ 66 ರನ್ನಿಗೆ 6 ವಿಕೆಟ್ ಉದುರಿಸಿಕೊಂಡು ಭಾರೀ ಸಂಕಟಕ್ಕೆ ಸಿಲುಕಿತ್ತು. ಆದರೆ ಆದಿತ್ಯ ತಾರೆ (59), ಶಿವಂ ದುಬೆ (ಬ್ಯಾಟಿಂಗ್ 40) ನೆರವಿನಿಂದ 7 ವಿಕೆಟಿಗೆ 156 ರನ್ ಗಳಿಸಿದೆ. ಮುನ್ನಡೆ 172ಕ್ಕೆ ಏರಿದೆ. ಸಿ.ಟಿ. ಗಜ 4 ವಿಕೆಟ್ ಕಿತ್ತು ಮುಂಬಯಿಗೆ ಬೆದರಿಕೆಯೊಡ್ಡಿದರು.
8ಕ್ಕೆ 232 ರನ್ ಮಾಡಿದಲ್ಲಿಂದ ಗುಜರಾತ್ ದಿನದಾಟ ಮುಂದುವರಿಸಿತ್ತು. 60 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿಕೆಟ್ ಕೀಪರ್ ಧುರ್ವ್ ರಾವಲ್ 99 ರನ್ ತನಕ ಸಾಗಿ ಶತಕ ತಪ್ಪಿಸಿಕೊಂಡರು. ಮುಂಬಯಿ ಪರ ಶಿವಂ ದುಬೆ, ಧವಳ್ ಕುಲಕರ್ಣಿ ಮತ್ತು ರಾಯ್ಸ್ಟನ್ ಡಯಾಸ್ ತಲಾ 3 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.