ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಸೌರಭ್ ಸ್ಪಿನ್ನಿಗೆ ಕುಸಿದ ಕರ್ನಾಟಕ
Team Udayavani, Jun 6, 2022, 11:17 PM IST
ಬೆಂಗಳೂರು: ಉತ್ತರ ಪ್ರದೇಶ ವಿರುದ್ಧ ಸೋಮವಾರ ಮೊದಲ್ಗೊಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಕುಸಿತದ ಹಾದಿ ಹಿಡಿದಿದೆ.
ಮೊದಲ ದಿನದ 72 ಓವರ್‌ಗಳ ಆಟದಲ್ಲಿ 7 ವಿಕೆಟಿಗೆ ಕೇವಲ 213 ರನ್ ಮಾಡಿದೆ. ಸ್ಪಿನ್ನರ್ ಸೌರಭ್ ಕುಮಾರ್ 4, ಮಧ್ಯಮ ವೇಗಿ ಶಿವಂ ಮಾವಿ 3 ವಿಕೆಟ್ ಕಿತ್ತು ಪಾಂಡೆ ಪಡೆಗೆ ಕಡಿವಾಣ ಹಾಕಿದರು.
ಆಲೂರಿನ ಕೆಎಸ್‌ಸಿಎ ಕ್ರೀಡಾಂ ಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಅಂಗಳ ಒದ್ದೆ ಇದ್ದುದರಿಂದ ಪಂದ್ಯ ವಿಳಂಬವಾಗಿ ಆರಂಭ ವಾಗಿತ್ತು. ಬಳಿಕ ಬೆಳಕಿನ ಅಭಾವ ದಿಂದಾಗಿ ಬೇಗನೇ ಕೊನೆಗೊಂಡಿತು. ಕೆಎಸ್‌ಸಿಎ ಟ್ರ್ಯಾಕ್ ಬೌಲರ್‌ಗಳಿಗೆ ನೆರವಾ ಗುವ ಸಾಧ್ಯತೆ ಇದ್ದುದರಿಂದ ಯುಪಿ ನಾಯಕ ಕರಣ್ ಶರ್ಮ ಅವರ ಬೌಲಿಂಗ್ ನಿರ್ಧಾರ ಭರಪೂರ ಯಶಸ್ಸು ಕಂಡಿತು.
ಆರಂಭಕಾರ ರವಿಕುಮಾರ್ ಸಮರ್ಥ್ ಕರ್ನಾಟಕ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (57). ಮಧ್ಯಮ ಕ್ರಮಾಂಕದ ಆಟಗಾರ ಕೆ. ಸಿದ್ಧಾರ್ಥ್ 37, ಕರುಣ್ ನಾಯರ್ 29, ನಾಯಕ ಮನೀಷ್ ಪಾಂಡೆ 27 ರನ್ ಮಾಡಿದರು. 26 ರನ್ ಮಾಡಿರುವ ಶ್ರೇಯಸ್ ಗೋಪಾಲ್ ಮತ್ತು 12 ರನ್ ಗಳಿಸಿರುವ ವಿಜಯಕುಮಾರ್ ವೈಶಾಖ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೀಪರ್ ಶರತ್ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಪಾಂಡೆ ಮತ್ತು ಶರತ್ ಅವರನ್ನು ಸೌರಭ್ ಸತತ ಎಸೆತಗಳಲ್ಲಿ ಕೆಡವಿದರು.
ಸಮರ್ಥ್ ಹೊರತುಪಡಿಸಿ ಉಳಿದ ವರೆಲ್ಲ ತೀರಾ ನಿಧಾನ ಗತಿಯಲ್ಲಿ ಆಡಿದರು. ಟ್ರ್ಯಾಕ್ ಹೆಚ್ಚಿನ ತಿರುವು ಪಡೆಯುತ್ತಿದ್ದುದೂ ಇದಕ್ಕೊಂದು ಕಾರಣವಾಗಿತ್ತು. ಸಮರ್ಥ್ ಅವರ 57 ರನ್ 81 ಎಸೆತಗಳಿಂದ ಬಂತು. ಸಿಡಿಸಿದ್ದು 10 ಬೌಂಡರಿ. ಆದರೆ ಮಾಯಾಂಕ್ ಅಗರ್ವಾಲ್ 10 ರನ್ನಿಗೆ 41 ಎಸೆತ, ಕರುಣ್ ನಾಯರ್ 29 ರನ್ನಿಗೆ 74 ಎಸೆತ ತೆಗೆದುಕೊಂಡರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ-7 ವಿಕೆಟಿಗೆ 213 (ಸಮರ್ಥ್ 57, ಸಿದ್ಧಾರ್ಥ್ 37, ಪಾಂಡೆ 27, ನಾಯರ್ 29, ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 26, ಸೌರಭ್ ಕುಮಾರ್ 67ಕ್ಕೆ 4, ಶಿವಂ ಮಾವಿ 40ಕ್ಕೆ 3).
ಪಾರ್ಕರ್ ಶತಕ; ಮುಂಬಯಿ ಬೃಹತ್ ಮೊತ್ತ
ಉತ್ತರಾಖಂಡ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬಯಿ 3 ವಿಕೆಟಿಗೆ 304 ರನ್ನುಗಳ ಬೃಹತ್ ಸ್ಕೋರ್ ದಾಖಲಿಸಿದೆ. ಸುವೇದ್ ಪಾರ್ಕರ್ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದರು.
ನಾಯಕ ಪೃಥ್ವಿ ಶಾ (21), ಯಶಸ್ವಿ ಜೈಸ್ವಾಲ್ (35) ಮತ್ತು ಅರ್ಮಾನ್ ಜಾಫರ್ (60) ಪೆವಿಲಿಯನ್ ಸೇರಿಕೊಂಡ ಬಳಿಕ ಸುವೇದ್ ಪಾರ್ಕರ್ ಮತ್ತು ಸರ್ಫರಾಜ್ ಖಾನ್ ಉತ್ತರಾಖಂಡ ಬೌಲರ್‌ಗಳಿಗೆ ಒಗಟಾಗಿಯೇ ಉಳಿದರು. ಪಾರ್ಕರ್ 218 ಎಸೆತಗಳಿಂದ 104 ರನ್ ಮಾಡಿ ಆಡುತ್ತಿದ್ದಾರೆ (8 ಬೌಂಡರಿ, 2 ಸಿಕ್ಸರ್). ಇವರೊಂದಿಗೆ 69 ರನ್ ಮಾಡಿರುವ ಸರ್ಫರಾಜ್ ಖಾನ್ ಕ್ರೀಸ್‌ನಲ್ಲಿದ್ದಾರೆ (104 ಎಸೆತ, 8 ಬೌಂಡರಿ, 1 ಸಿಕ್ಸರ್). ಈ ಜೋಡಿ 204 ಎಸೆತಗಳಿಂದ 128 ರನ್ ಒಟ್ಟುಗೂಡಿಸಿದೆ. ಉರುಳಿದ ಮೂರೂ ವಿಕೆಟ್ ದೀಪಕ್ ಧಪೋಲ ಪಾಲಾಗಿದೆ.
21 ವರ್ಷದ ಬಲಗೈ ಬ್ಯಾಟರ್, ಭಾರತದ ಅಂಡರ್-19 ತಂಡದಲ್ಲಿ ಆಡಿದ ಸುವೇದ್ ಪಾರ್ಕರ್ ಕೋಚ್ ಅಮೋಲ್ ಮಜುಮಾªರ್ ಗರಡಿಯಲ್ಲಿ ಬೆಳೆದ ಆಟಗಾರ. ಮಜುಮಾªರ್ ಕೂಡ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿದ್ದರು.
ಸುದೀಪ್ ಸೆಂಚುರಿ; ಬಂಗಾಲ ಒಂದಕ್ಕೆ 301
ಜಾರ್ಖಂಡ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಲ ಒಂದೇ ವಿಕೆಟಿಗೆ 301 ರನ್ ಪೇರಿಸಿದೆ. ಸುದೀಪ್ ಕುಮಾರ್ ಘರಾಮಿ 106 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಯಕ ಅಭಿಮನ್ಯು ಈಶ್ವರನ್ 65 ರನ್ ಮಾಡಿದರೆ, ಇವರ ಜತೆಗಾರ ಅಭಿಷೇಕ್ ರಮಣ್ 41 ರನ್ ಗಳಿಸಿದ ವೇಳೆ ಗಾಯಾಳಾದರು. ಅನುಸ್ತೂಪ್ ಮಜುಮಾªರ್ 85 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
219ಕ್ಕೆ ಕುಸಿದ ಪಂಜಾಬ್: ಮಧ್ಯಪ್ರದೇಶ ವಿರುದ್ಧದ ಮುಖಾಮುಖಿಯಲ್ಲಿ ಪಂಜಾಬ್ 219 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದಿದೆ. ನಾಯಕ ಅಭಿಷೇಕ್ ಶರ್ಮ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ ತಲಾ 47 ರನ್, ಸನ್ವೀರ್ ಸಿಂಗ್ 41 ರನ್ ಮಾಡಿದರು. ಮಧ್ಯಪ್ರದೇಶ ವಿಕೆಟ್ ನಷ್ಟವಿಲ್ಲದೆ 5 ರನ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.