ರಣಜಿ ಸೆಮಿಫೈನಲ್‌ ವಿನಯ್‌ ಬಳಗಕ್ಕೆ ವಿದರ್ಭ ಸವಾಲು


Team Udayavani, Dec 17, 2017, 6:00 AM IST

Vinay-Kumar-KAr-207.jpg

ಕೋಲ್ಕತಾ: ದೇಶದ ಪ್ರತಿಷ್ಠಿತ ಕ್ರಿಕೆಟ್‌ ಪಂದ್ಯಾವಳಿಯಾದ “ರಣಜಿ ಟ್ರೋಫಿ’ಗೆ ಇನ್ನು ಸೆಮಿಫೈನಲ್‌ ಸುತ್ತಿನ ಸಂಭ್ರಮ. 4 ತಂಡಗಳಲ್ಲಿ ಕರ್ನಾಟಕವೂ ಒಂದಾಗಿರುವುದರಿಂದ ರಾಜ್ಯದ ಕ್ರಿಕೆಟ್‌ ಅಭಿಮಾನಿಗಳು ಈ ಸಮರ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ವಿನಯ್‌ ಪಡೆಯ ಎದುರಾಳಿಯಾಗಿ ಕಣಕ್ಕಿಳಿಯುವ ತಂಡ ವಿದರ್ಭ. ಕೋಲ್ಕತಾದ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ಈ ಮೇಲಾಟ ನಡೆಯಲಿದೆ.

ಇನ್ನೊಂದು ಸೆಮಿಫೈನಲ್‌ ದಿಲ್ಲಿ-ಬಂಗಾಲ ತಂಡಗಳ ನಡುವೆ ಪುಣೆಯಲ್ಲಿ ಸಾಗಲಿದೆ. 2017-18ರ ರಣಜಿ ಟ್ರೋಫಿ ಮುಖಾಮುಖೀಯಲ್ಲಿ ಅಜೇಯ ಅಭಿಯಾನದೊಂದಿಗೆ ನಾಗಾಲೋಟದಲ್ಲಿರುವ ಕರ್ನಾಟಕ ಅಮೋಘ ಸಾಧನೆ ಮೂಲಕ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ನಾಗ್ಪುರದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ “ರಣಜಿ ಕಿಂಗ್‌’ ಮುಂಬಯಿಯನ್ನೇ ಇನ್ನಿಂಗ್ಸ್‌ ಸೋಲಿಗೆ ಗುರಿಪಡಿಸಿದ್ದು ಕರ್ನಾಟಕದ ಮಹಾನ್‌ ಸಾಧನೆಯಾಗಿದೆ. ಇನ್ನೊಂದೆಡೆ ವಿದರ್ಭ ಕೂಡ ಸಶಕ್ತ ತಂಡವಾಗಿ ಗೋಚರಿಸುತ್ತಿದೆ. ಹೀಗಾಗಿ ಈಡನ್‌ ಕಾದಾಟ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.
ಲೀಗ್‌ ಹಂತದ 6 ಪಂದ್ಯಗಳಲ್ಲಿ 4 ಜಯ ಜಯ ಸಾಧಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಉಳಿದೆರಡು ಪಂದ್ಯಗಳು ಡ್ರಾಗೊಂಡರೂ ಮೊದಲ ಇನ್ನಿಂಗ್ಸ್‌ ಮುನ್ನಡೆಗೇನೂ ಅಡ್ಡಿಯಾಗಲಿಲ್ಲ. ಒಟ್ಟು 32 ಅಂಕ ಸಂಪಾದಿಸಿ “ಎ’ ಗುಂಪಿನ ಅಗ್ರಸ್ಥಾನಿಯಾಗಿ ಕರ್ನಾಟಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ವಿದರ್ಭ ಕೂಡ ಲೀಗ್‌ನಲ್ಲಿ ಕರ್ನಾಟಕಕ್ಕೆ ಸಮನಾದ ಸಾಧನೆಯನ್ನೇ ಮಾಡಿದೆ. ಆರರಲ್ಲಿ 4 ಜಯ, 2 ಡ್ರಾ, ಒಟ್ಟು 31 ಅಂಕ ಸಂಪಾದಿಸಿ “ಡಿ’ ಗುಂಪಿನ ಮೊದಲ ಸ್ಥಾನಿಯಾಗಿಯೇ ನಾಕೌಟ್‌ ಪ್ರವೇಶಿಸಿತ್ತು. ಇಲ್ಲಿ ಕೇರಳ ವಿರುದ್ಧ 412 ರನ್ನುಗಳ ಭಾರೀ ಅಂತರದಿಂದ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದೆ.

ಸಂಘಟನಾತ್ಮಕ ಹೋರಾಟದ ಬಲ
ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ವಿನಯ್‌ ಕುಮಾರ್‌ ನೇತೃತ್ವದ ರಾಜ್ಯ ತಂಡ ಸಂಘಟನಾತ್ಮಕ ಹೋರಾಟ ಪ್ರದರ್ಶಿಸುತ್ತ ಬಂದಿದೆ. ತಂಡದ ಯಶಸ್ಸಿಗೆ ಇದೇ ಪ್ರಮುಖ ಕಾರಣ. ಬ್ಯಾಟಿಂಗ್‌ ವಿಭಾಗದಲ್ಲಿ ಮಾಯಾಂಕ್‌ ಅಗರ್ವಾಲ್‌ ಒಂದು ತ್ರಿಶತಕ ಸೇರಿದಂತೆ ಒಟ್ಟು 5 ಶತಕ, 2 ಅರ್ಧ ಶತಕ ಸಿಡಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. 7 ಪಂದ್ಯಗಳಿಂದ ಮಾಯಾಂಕ್‌ ಪೇರಿಸಿದ್ದು ಬರೋಬ್ಬರಿ 1,142 ರನ್‌! ಈ ಮೂಲಕ ಪ್ರಸಕ್ತ ಋತುವಿನ ರಣಜಿ ರನ್‌ ಗಳಿಕೆಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಆರ್‌. ಸಮರ್ಥ್ (643 ರನ್‌), ಕರುಣ್‌ ನಾಯರ್‌ (429 ರನ್‌) ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಟುವರ್ಟ್‌ ಬಿನ್ನಿ, ಪವನ್‌ ದೇಶಪಾಂಡೆ, ಸಿ.ಎಂ. ಗೌತಮ್‌ ಆಪದಾºಂಧವರಾಗುತ್ತಿದ್ದಾರೆ.

ಯುವ ಬ್ಯಾಟ್ಸ್‌ಮನ್‌ ಡಿ. ನಿಶ್ಚಲ್‌ ಕೂಡ ದೊಡ್ಡ ಇನ್ನಿಂಗ್ಸ್‌ ಒಂದನ್ನು ಕಟ್ಟಿದ್ದಾರೆ. ಆದರೆ ಗಾಯಾಳಾಗಿ ಕ್ವಾರ್ಟರ್‌ ಫೈನಲ್‌ನಿಂದ ಹೊರಗುಳಿಯಬೇಕಾಯಿತು. ಸೆಮಿಫೈನಲ್‌ನಲ್ಲಿ ಅವರು ಪವನ್‌ ದೇಶಪಾಂಡೆ ಸ್ಥಾನ ತುಂಬಬಹುದು.

ಬೌಲಿಂಗ್‌ ವಿಭಾಗದಲ್ಲೂ ಕರ್ನಾಟಕ ಘಾತಕ ಪ್ರದರ್ಶನ ನೀಡುತ್ತಿದೆ. ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ ಸರ್ವಾಧಿಕ 34 ವಿಕೆಟ್‌, ವೇಗಿ ವಿನಯ್‌ ಕುಮಾರ್‌ ಹ್ಯಾಟ್ರಿಕ್‌ ಸೇರಿದಂತೆ  22 ವಿಕೆಟ್‌ ಪಡೆದಿದ್ದಾರೆ. ಶ್ರೇಯಸ್‌ ಗೋಪಾಲ್‌ (21 ವಿಕೆಟ್‌), ಅಭಿಮನ್ಯು ಮಿಥುನ್‌ (18 ವಿಕೆಟ್‌) ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ವಿದರ್ಭ ವಿರುದ್ಧವೂ ನೀಡುವ ವಿಶ್ವಾಸ ಕರ್ನಾಟಕದ ಬೌಲಿಂಗ್‌ ಪಡೆಯದ್ದು.

ವಿದರ್ಭ ಬಲಿಷ್ಠ ಎದುರಾಳಿ
ಪ್ರಸಕ್ತ ರಣಜಿ ಋತುವಿನಲ್ಲಿ ವಿದರ್ಭ ಭರ್ಜರಿ ಪ್ರದರ್ಶನ ನೀಡುತ್ತ ಬಂದಿದೆ. ಹೀಗಾಗಿ ರಾಜ್ಯಕ್ಕೆ ಇದು ಕಠಿಣ ಎದುರಾಳಿಯಾಗಲಿದೆ. ವಿದರ್ಭ ಪರ ಫೈಜ್‌ ಫ‌ಜಲ್‌ (831 ರನ್‌), ರಾಮಸ್ವಾಮಿ ಸಂಜಯ್‌ (696 ರನ್‌), ಗಣೇಶ್‌ ಸತೀಶ್‌ (514 ರನ್‌), ವಾಸಿಂ ಜಾಫ‌ರ್‌ (428 ರನ್‌) ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಅದೇ ರೀತಿ ಬೌಲಿಂಗ್‌ನಲ್ಲಿ ಅಕ್ಷಯ್‌ ವಖಾರೆ (29 ವಿಕೆಟ್‌), ಆದಿತ್ಯ ಸರ್ವತೆ (25 ವಿಕೆಟ್‌), ರಜನೀಶ್‌ ಗುರ್ಬಾನಿ (19 ವಿಕೆಟ್‌) ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದಾರೆ.

ರಾಹುಲ್‌, ಪಾಂಡೆ ಅನುಪಸ್ಥಿತಿ
ಕರ್ನಾಟಕ ತಂಡಕ್ಕೆ ಅನುಭವಿ ಆಟಗಾರರಾದ ಕೆ.ಎಲ್‌. ರಾಹುಲ್‌ ಮತ್ತು ಮನಿಷ್‌ ಪಾಂಡೆ ಅನುಪಸ್ಥಿತಿ ಕಾಡಲಿದೆ. ಇವರು ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಏಕದಿನ ಸರಣಿಗೆ ಸ್ಥಾನ ಪಡೆಯಲು ವಿಫ‌ಲವಾಗಿರುವ ವೇಗಿ ಉಮೇಶ್‌ ಯಾದವ್‌ ವಿದರ್ಭ ತಂಡ ಸೇರಿದ್ದಾರೆ. ಆದರೆ ಸದ್ಯ ಫಿಟೆ°ಸ್‌ ಸಮಸ್ಯೆಯಿಂದ ಬೆಂಗಳೂರಿನ ನ್ಯಾಶನಲ್‌ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಹಿನ್ನೆಲೆಯಲ್ಲಿ ಉಮೇಶ್‌ ಆಡುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ.

ಕರ್ನಾಟಕ ತಂಡ: ವಿನಯ್‌ ಕುಮಾರ್‌ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ), ಮಾಯಾಂಕ್‌ ಅಗರ್ವಾಲ್‌, ಆರ್‌. ಸಮರ್ಥ್, ಡಿ. ನಿಶ್ಚಲ್‌, ಸ್ಟುವರ್ಟ್‌ ಬಿನ್ನಿ, ಸಿ.ಎಂ. ಗೌತಮ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಎಸ್‌. ಅರವಿಂದ್‌, ಪವನ್‌ ದೇಶಪಾಂಡೆ, ಜೆ. ಸುಚಿತ್‌, ಕೌನೈನ್‌ ಅಬ್ಟಾಸ್‌, ಶರತ್‌ ಶ್ರೀನಿವಾಸ್‌, ರೋನಿತ್‌ ಮೋರೆ.

ವಿದರ್ಭ ತಂಡ: ಫೈಜ್‌ ಫ‌ಜಲ್‌ (ನಾಯಕ), ಎಸ್‌. ರಾಮಸ್ವಾಮಿ, ವಾಸಿಮ್‌ ಜಾಫ‌ರ್‌, ಗಣೇಶ್‌ ಸತೀಶ್‌, ಕಣ್‌ì ಶರ್ಮ, ಅಪೂರ್ವ್‌ ವಾಂಖೇಡೆ, ಅಕ್ಷಯ್‌ ವಿನೋದ್‌ ವಾಡ್ಕರ್‌, ಆದಿತ್ಯ ಸರ್ವಟೆ, ರಜನೀಶ್‌ ಗುರ್ಬಾನಿ, ಅಕ್ಷಯ್‌ ವಖಾರೆ, ಲಲಿತ್‌ ಯಾದವ್‌, ರವಿ ಜಂಗಿªದ್‌, ಅಕ್ಷಯ್‌ ಕರ್ಣೇವಾರ್‌, ಸಿದ್ದೇಶ್‌ ನೆರಾಲ್‌, ಜಿತೇಶ್‌ ಶರ್ಮ, ರವಿಕುಮಾರ್‌ ಠಾಕೂರ್‌, ಸಿದ್ದೇಶ್‌ ವಾಥ್‌, ಉಮೇಶ್‌ ಯಾದವ್‌, ಶ್ರೀಕಾಂತ್‌ ವಾಘ…, ಸಂತೋಷ್‌ ಶ್ರೀವಾಸ್ತವ, ಶುಭಂ ಕಾಪ್ಸೆ.

ಟಾಪ್ ನ್ಯೂಸ್

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.