![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 6, 2024, 12:45 AM IST
ನಾಗ್ಪುರ: ಆತಿಥೇಯ ವಿದರ್ಭ ಮತ್ತು ಮಧ್ಯ ಪ್ರದೇಶ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಗೆಲುವಿಗೆ ಎರಡೂ ತಂಡಗಳ ಪೈಪೋಟಿ ತೀವ್ರಗೊಂಡಿದೆ. ಮುಂಬಯಿ ಯನ್ನು ಎದುರಿಸಲಿರುವ ಅದೃಷ್ಟ ಯಾರಿಗಿದೆ ಎಂಬುದು ಬುಧವಾರ ಇತ್ಯರ್ಥವಾಗಲಿದೆ.
ಗೆಲುವಿಗೆ 321 ರನ್ ಗುರಿ ಪಡೆದಿರುವ ಮಧ್ಯ ಪ್ರದೇಶ 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದೆ. ಇನ್ನೂ 93 ರನ್ ಅಗತ್ಯವಿದೆ. ಆದರೆ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳೆಲ್ಲ ಪೆವಿಲಿಯನ್ ಸೇರಿರುವ ಕಾರಣ ಮಧ್ಯ ಪ್ರದೇಶದ ಹಾದಿ ಕಠಿನ ಎಂದೇ ಹೇಳಬೇಕಾಗುತ್ತದೆ.
ದುಬೆ ವಿಕೆಟ್ ಟರ್ನಿಂಗ್ ಪಾಯಿಂಟ್
ಆರಂಭಕಾರ ಯಶ್ ದುಬೆ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಮಧ್ಯ ಪ್ರದೇಶದ ಗೆಲುವಿನ ಆಸೆಗೆ ನೀರೆರೆಯುತ್ತಲೇ ಇದ್ದರು. ಆದರೆ ದಿನದಾಟದ ಮುಕ್ತಾಯಕ್ಕೆ ಒಂದು ಓವರ್ ಉಳಿದಿರುವಾಗ ಆದಿತ್ಯ ಸರ್ವಟೆ ಈ ಬಹುಮೂಲ್ಯ ವಿಕೆಟ್ ಉಡಾಯಿಸುವುದರೊಂದಿಗೆ ವಿದರ್ಭದ ಕೈ ಮೇಲಾಗಿದೆ. ಅಲ್ಲದೇ ಮಧ್ಯ ಪ್ರದೇಶದ ಕೆಳ ಕ್ರಮಾಂಕದ ಆಟಗಾರರ್ಯಾರೂ ಬ್ಯಾಟಿಂಗ್‌ನಲ್ಲಿ ಹಿಡಿತ ಹೊಂದಿರುವವರಲ್ಲ. ಪ್ರಥಮ ಇನ್ನಿಂಗ್ಸ್ ನಲ್ಲಿ ಕೊನೆಯ ನಾಲ್ವರು ಆಟಗಾರರು ಒಟ್ಟು ಸೇರಿ ಗಳಿಸಿದ್ದು 25 ರನ್ ಮಾತ್ರ. ಹೀಗಾಗಿ ವಿದರ್ಭಕ್ಕೆ ಫೈನಲ್ ಅವಕಾಶ ಜಾಸ್ತಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಯಶ್ ದುಬೆ 212 ಎಸೆತಗಳನ್ನು ಎದುರಿಸಿ 94 ರನ್ ಕೊಡುಗೆ ಸಲ್ಲಿಸಿದರು (10 ಬೌಂಡರಿ). ವನ್‌ಡೌನ್ ಬ್ಯಾಟರ್ ಹರ್ಷ ಗಾವಿÛ ಗಳಿಕೆ 67 ರನ್ (80 ಎಸೆತ, 11 ಬೌಂಡರಿ). ದುಬೆ-ಗಾವಿÛ ದ್ವಿತೀಯ ವಿಕೆಟಿಗೆ 106 ರನ್ ಪೇರಿಸುವ ಮೂಲಕ ಮಧ್ಯ ಪ್ರದೇಶದ ಗೆಲುವಿನ ಅವಕಾಶವನ್ನು ತೆರೆದಿರಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಯಶ್ ಠಾಕೂರ್ ವಿದರ್ಭಕ್ಕೆ ದೊಡ್ಡ ಯಶಸ್ಸು ತಂದಿತ್ತರು; ತಂಡವನ್ನು ಹಳಿಗೆ ತಂದು ನಿಲ್ಲಿಸಿದರು. 100 ರನ್ ಅಂತರದಲ್ಲಿ ಮಧ್ಯ ಪ್ರದೇಶದ 5 ವಿಕೆಟ್ ಉರುಳಿತು.
ಸಾಗರ್ ಸೋಲಂಕಿ (12), ನಾಯಕ ಶುಭಂ ಶರ್ಮ (6), ವೆಂಕಟೇಶ್ ಅಯ್ಯರ್ (19) ವಿಫಲರಾದರು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಹಿಮಾಂಶು ಮಂತ್ರಿ ಎಂಟೇ ರನ್ನಿಗೆ ಆಟ ಮುಗಿಸಿದರು. ಸಾರಾಂಶ್ ಜೈನ್ 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ವಿದರ್ಭ ಪರ ಅಕ್ಷಯ್ ವಖಾರೆ 3, ಆದಿತ್ಯ ಸರ್ವಟೆ 2 ಹಾಗೂ ಯಶ್ ಠಾಕೂರ್ ಒಂದು ವಿಕೆಟ್ ಉರುಳಿಸಿದರು.
ಯಶ್ ರಾಥೋಡ್ ಶತಕ
ಇದಕ್ಕೂ ಮುನ್ನ 6ಕ್ಕೆ 343 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ವಿದರ್ಭ, 402ರ ತನಕ ಸಾಗಿತು. ಯಶ್ ರಾಥೋಡ್ ಅವರ ಶತಕ ವಿದರ್ಭ ಸರದಿಯ ಆಕರ್ಷಣೆ ಆಗಿತ್ತು. ರಾಥೋಡ್ 97 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಭರ್ತಿ 200 ಎಸೆತಗಳನ್ನು ಎದುರಿಸಿದ ರಾಥೋಡ್ 141 ರನ್ ಹೊಡೆದರು (18 ಬೌಂಡರಿ, 2 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ವಿದರ್ಭ 170 ಮತ್ತು 402 (ಯಶ್ ರಾಥೋಡ್ 141, ಅಮನ್ ಮೋಖಡೆ 59, ಅಕ್ಷಯ್ ವಾಡ್ಕರ್ 77, ಧ್ರುವ ಶೋರಿ 40, ಅನುಭವ್ ಅಗರ್ವಾಲ್ 92ಕ್ಕೆ 5, ಕುಲ್ವಂತ್ ಖೆಜೊÅàಲಿಯ 64ಕ್ಕೆ 2, ಕುಮಾರ ಕಾರ್ತಿಕೇಯ 76ಕ್ಕೆ 2). ಮಧ್ಯ ಪ್ರದೇಶ-252 ಮತ್ತು 6 ವಿಕೆಟಿಗೆ 228 (ಯಶ್ ದುಬೆ 97, ಹರ್ಷ ಗಾವಿÛ 67, ವೆಂಕಟೇಶ್ ಅಯ್ಯರ್ 19, ಅಕ್ಷಯ್ ವಖಾರೆ 38ಕ್ಕೆ 3, ಆದಿತ್ಯ ಸರ್ವಟೆ 51ಕ್ಕೆ 2, ಯಶ್ ಠಾಕೂರ್ 48ಕ್ಕೆ 1).
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.