ರಣಜಿ ಟ್ರೋಫಿ ಸೆಮಿಫೈನಲ್: ಬಂಗಾಲ ನೆರವಿಗೆ ಧಾವಿಸಿದ ಮಜುಂದಾರ್
Team Udayavani, Mar 1, 2020, 6:26 AM IST
ಕೋಲ್ಕತಾ: ಕರ್ನಾಟಕದ ಬೌಲಿಂಗ್ ಆಕ್ರಮಣಕ್ಕೆ ಸಿಲುಕಿ ಸಾಮಾನ್ಯ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಆತಿಥೇಯ ಬಂಗಾಲಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅನುಸ್ತೂಪ್ ಮಜುಂದಾರ್ ಅಜೇಯ ಶತಕದ ಮೂಲಕ ನೆರವಾಗಿದ್ದಾರೆ.
“ಈಡನ್ ಗಾರ್ಡನ್ಸ್’ನಲ್ಲಿ ಶನಿವಾರ ಮೊದಲ್ಗೊಂಡ ರಣಜಿ ಸೆಮಿಫೈನಲ್‌ನಲ್ಲಿ ಬಂಗಾಲ 9 ವಿಕೆಟಿಗೆ 275 ರನ್ ಗಳಿಸಿದೆ. ಇದರಲ್ಲಿ ಮಜುಂದಾರ್ ಪಾಲು ಅಜೇಯ 120 ರನ್.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕರ್ನಾಟಕ ಇದರ ಭರಪೂರ ಲಾಭವೆತ್ತಿತು. ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪ್ರಸಿದ್ಧ್ ಕೃಷ್ಣ ಹಾಗೂ ಕೆ. ಗೌತಮ್ ಸೇರಿ ಕೊಂಡು ಆತಿಥೇಯರ ಮೇಲೆ ಘಾತಕವಾಗಿ ಎರಗಿದರು. ಬಂಗಾಲದ 6 ವಿಕೆಟ್ 67 ರನ್ ಆಗುವಷ್ಟರಲ್ಲಿ ಹಾರಿಹೋಯಿತು. ಇದೇ ಬಿರುಸಿನಲ್ಲಿ ಸಾಗಿದ್ದರೆ ಆತಿಥೇಯರನ್ನು 150ರ ಒಳಗೆ ಹಿಡಿದು ನಿಲ್ಲಿಸಬಹುದಿತ್ತು. ಆದರೆ ಅನುಸ್ತೂಪ್ ಇದಕ್ಕೆ ಅವಕಾಶ ಕೊಡಲಿಲ್ಲ.
ಜಬರ್ದಸ್ತ್ ಜತೆಯಾಟ
ರಣಜಿ ಕ್ವಾರ್ಟರ್ ಫೈನಲ್‌ನಲ್ಲಿ ಜೀವನಶ್ರೇಷ್ಠ 157 ರನ್ ಬಾರಿಸಿ ತಂಡವನ್ನು ಮೇಲೆತ್ತಿದ್ದ ಮಜುಮಾªರ್, ಸೆಮಿಫೈನಲ್‌ನಲ್ಲೂ ಆಪತಾºಂಧವನ ಪಾತ್ರ ವಹಿಸಿದರು. ಕೆಳ ಕ್ರಮಾಂಕದ ಆಟಗಾರರಾದ ಶಾಬಾಜ್ ಅಹ್ಮದ್, ಆಕಾಶ್ ದೀಪ್ ಅವರಿಂದ ಉತ್ತಮ ಬೆಂಬಲ ಪಡೆದ ಅವರು ಈಗಾಗಲೇ 173 ಎಸೆತ ನಿಭಾಯಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಅಮೋಘ ಬ್ಯಾಟಿಂಗ್ 18 ಬೌಂಡರಿ ಹಾಗೂ ಒಂದು ಸಿಕ್ಸರನ್ನು ಒಳಗೊಂಡಿದೆ.
ಮಜುಂದಾರ್-ಶಾಬಾಜ್ 7ನೇ ವಿಕೆಟಿಗೆ 72 ರನ್ ಪೇರಿಸಿ ಮೊದಲ ಹಂತದ ರಕ್ಷಣೆ ಒದಗಿಸಿದರು. ಇದರಲ್ಲಿ ಶಾಬಾಜ್ ಗಳಿಕೆ 35 ರನ್. ಬಳಿಕ ಆಕಾಶ್ ದೀಪ್ ನೆರವಿನಿಂದ 8ನೇ ವಿಕೆಟಿಗೆ 103 ರನ್ ಒಟ್ಟುಗೂಡಿಸಿ ಕರ್ನಾಟಕದ ಸಂಪೂರ್ಣ ಮೇಲುಗೈ ಕನಸಿಗೆ ತಣ್ಣೀರೆರಚಿದರು. 72 ಎಸೆತ ನಿಭಾಯಿಸಿದ ಆಕಾಶ್ ದೀಪ್ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ 44 ರನ್ ಹೊಡೆದರು. ದಿನದ ಕೊನೆಯಲ್ಲಿ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ ವಿಕೆಟ್ ಕೀಳುವಲ್ಲಿ ಕರ್ನಾಟಕ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್: ಬಂಗಾಲ-9 ವಿಕೆಟಿಗೆ 275 (ಮಜುಂದಾರ್ ಬ್ಯಾಟಿಂಗ್ 120, ಆಕಾಶ್ ದೀಪ್ 44, ಶಾಬಾಜ್ 35, ಮಿಥುನ್ 65ಕ್ಕೆ 3, ಮೋರೆ 45ಕ್ಕೆ 2, ಪ್ರಸಿದ್ಧ್ ಕೃಷ್ಣ 62ಕ್ಕೆ 2, ಕೆ. ಗೌತಮ್ 88ಕ್ಕೆ 2).
ಬಂತು ಡಿಆರ್‌ಎಸ್!
ಭಾರತದ ದೇಶಿ ಕ್ರಿಕೆಟ್‌ನಲ್ಲಿ ಮೊದಲ ಸಲ ಡಿಆರ್‌ಎಸ್ ನಿಯಮವನ್ನು ಅಳವಡಿಸಿದ್ದು ರಣಜಿ ಸೆಮಿಫೈನಲ್ ಪಂದ್ಯಗಳ ವಿಶೇಷವಾಗಿತ್ತು. ಸ್ವಾರಸ್ಯವೆಂದರೆ, ಕರ್ನಾಟಕ ತನ್ನ ಮೊದಲ ವಿಕೆಟನ್ನು ಡಿಆರ್‌ಎಸ್ ಮೂಲಕ ಉರುಳಿಸಿದ್ದು. ಔಟಾದವರು ಬಂಗಾಲದ ಆರಂಭಕಾರ ಅಭಿಷೇಕ್ ರಾಮನ್ (0). ಈ ವಿಕೆಟ್ ಮಿಥುನ್ ಪಾಲಾಯಿತು.
ಸೌರಾಷ್ಟ್ರಕ್ಕೆ ಕಡಿವಾಣ ಹಾಕಿದ ಗುಜರಾತ್
ರಾಜ್‌ಕೋಟ್: ಗುಜರಾತ್ ಎದುರಿನ ಇನ್ನೊಂದು ರಣಜಿ ಸೆಮಿಫೈನಲ್‌ನಲ್ಲಿ ಆತಿಥೇಯ ಸೌರಾಷ್ಟ್ರ ನಿಧಾನ ಗತಿಯ ಬ್ಯಾಟಿಂಗ್ ನಡೆಸಿ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿದೆ. ಶೆಲ್ಡನ್ ಜಾಕ್ಸನ್ ಅಜೇಯ 69 ರನ್ ಬಾರಿಸಿ ತಂಡದ ನೆರವಿಗೆ ನಿಂತಿದ್ದಾರೆ (132 ಎಸೆತ, 9 ಬೌಂಡರಿ, 2 ಸಿಕ್ಸರ್).
ಸೌರಾಷ್ಟ್ರ ಸರದಿಯ ಅಷ್ಟೂ ಮಂದಿ ಉತ್ತಮ ಬ್ಯಾಟಿಂಗ್ ನಡೆಸಿದರೂ ಇದರಲ್ಲಿ ಬಿರುಸಿರಲಿಲ್ಲ. ಆರಂಭಿಕರಾದ ಹಾರ್ವಿಕ್ ದೇಸಾಯಿ (35), ಕಿಶನ್ ಪರ್ಮಾರ್ (37) ಮೊದಲ ವಿಕೆಟಿಗೆ 62 ರನ್ ಪೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೀಪರ್ ಅವಿ ಬ ರೋಟ್ (27), ವಿಶ್ವರಾಜ್ ಜಡೇಜ (26) ಸಾಮಾನ್ಯ ಪ್ರದರ್ಶನ ನೀಡಿದರು.
ಗುಜರಾತ್ ಪರ ಅರ್ಜಾನ್ 40ಕ್ಕೆ 3, ಅಕ್ಷರ್ ಪಟೇಲ್ 47ಕ್ಕೆ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.