Ranji Trophy: ಉ.ಪ್ರದೇಶ ವಿರುದ್ಧ ಬ್ಯಾಟಿಂಗ್- ಬೌಲಿಂಗ್ ನಲ್ಲಿ ಮಿಂಚಿದ ಶಮಿ ಸಹೋದರ ಕೈಫ್
Team Udayavani, Jan 14, 2024, 5:07 PM IST
ಕಾನ್ಪುರ: ಇತ್ತೀಚೆಗಷ್ಟೇ ದೇಶಿಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಭಾರತೀಯ ಬೌಲರ್ ಮೊಹಮ್ಮದ್ ಶಮಿ ಅವರ ಸಹೋದರ ಮೊಹಮ್ಮದ್ ಕೈಫ್ ಇದೀಗ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದ ಮಿಂಚಿದ್ದಾರೆ. ಬಂಗಾಲ ತಂಡವನ್ನು ಪ್ರತಿನಿಧಿಸುವ ಮೊಹಮ್ಮದ್ ಕೈಫ್ ಉತ್ತರ ಪ್ರದೇಶ ವಿರುದ್ಧ ಆಲ್ ರೌಂಡ್ ಪ್ರದರ್ಶನ ನೀಡಿದ್ದಾರೆ.
ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 60 ರನ್ ಗಳಿಗೆ ಆಲೌಟಾಯಿತು. ಮಾರಕ ಬೌಲಿಂಗ್ ನಡೆಸಿದ ಮೊಹಮ್ಮದ್ ಕೈಫ್ 5.5 ಓವರ್ ಗಳಲ್ಲಿ ಕೇವಲ 14 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು.
ಬ್ಯಾಟಿಂಗ್ ನಡೆಸಿದ ಬಂಗಾಲ ತಂಡಕ್ಕೂ ಕೈಫ್ ನೆರವಾದರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸದ ಕೈಫ್ ಅಜೇಯ 45 ರನ್ ಮಾಡಿದರು. ಇದೇ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಶಮಿ ಸಹೋದರ ಎರಡು ಸಿಕ್ಸರ್ ಸಹಿತ ಅಜೇಯವಾಡಿದರು.
ಸಹೋದರನ ಪ್ರಥಮ ದರ್ಜೆ ಕ್ರಿಕೆಟ್ ಪದಾರ್ಪಣೆ ಬಗ್ಗೆ ಮೊಹಮ್ಮದ್ ಶಮಿ ಕೆಲ ದಿನಗಳ ಹಿಂದೆ ಸಂತಸ ವ್ಯಕ್ತಪಡಿಸಿದ್ದರು. “ದೀರ್ಘ ಹೋರಾಟದ ನಂತರ ನೀನು ಬಂಗಾಳಕ್ಕೆ ರಣಜಿ ಟ್ರೋಫಿ ಕ್ಯಾಪ್ ಅನ್ನು ಪಡೆದುಕೊಂಡಿದ್ದೀರಿ. ಚೀಯರ್ಸ್! ಉತ್ತಮ ಸಾಧನೆ ! ಅಭಿನಂದನೆಗಳು, ನಾನು ನಿಮಗೆ ಉತ್ತಮ ಭವಿಷ್ಯವನ್ನು ಹಾರೈಸುತ್ತೇನೆ! ನಿನ್ನ 100% ನೀಡಿ ಮತ್ತು ಕಠಿಣ ಪರಿಶ್ರಮವನ್ನು ಮುಂದುವರೆಸು” ಎಂದು ಶಮಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.