ಬೆಂಗಳೂರಿನಲ್ಲಿ ರಣಜಿ ಸುಗ್ಗಿ: ಏಕಕಾಲಕ್ಕೆ 4 ಕ್ವಾರ್ಟರ್ ಫೈನಲ್ಸ್
ಸೆಮಿಫೈನಲ್ಸ್, ಫೈನಲ್ ಕೂಡ ಇಲ್ಲಿಯೇ; ಕರ್ನಾಟಕಕ್ಕೆ ಉತ್ತರ ಪ್ರದೇಶ ಎದುರಾಳಿ
Team Udayavani, Jun 6, 2022, 6:45 AM IST
ಬೆಂಗಳೂರು: ಭಾರತದ ದೇಶಿ ಕ್ರಿಕೆಟಿನ ರಾಜ ಎನಿಸಿರುವ “ರಣಜಿ ಟ್ರೋಫಿ’ ಪಂದ್ಯಾವಳಿ ಐಪಿಎಲ್ ಬ್ರೇಕ್ ಬಳಿಕ ಸೋಮವಾರದಿಂದ ಬೆಂಗಳೂರಿನಲ್ಲಿ ಮುಂದು ವರಿಯಲಿದೆ. ಐಪಿಎಲ್‌ಗೂ ಮೊದಲು ಗ್ರೂಪ್ ಹಂತದ ಲೀಗ್ ಸ್ಪರ್ಧೆಗಳು ಮುಗಿದಿದ್ದವು. ಇನ್ನು ನಾಕೌಟ್ ಪಂದ್ಯ ಗಳ ಸರದಿ. 4 ಕ್ವಾರ್ಟರ್ ಫೈನಲ್ಸ್, 2 ಸೆಮಿಫೈನಲ್ಸ್ ಹಾಗೂ ಫೈನಲ್ ಒಳ ಗೊಂಡ ಏಳೂ ಪಂದ್ಯಗಳು ಬೆಂಗಳೂರಿ ನಲ್ಲಿ ನಡೆಯಲಿರುವುದು ವಿಶೇಷ.
ಮಾರ್ಚ್ 6ಕ್ಕೆ ರಣಜಿ ಟ್ರೋಫಿ ಲೀಗ್ ಹಂತದ ಪಂದ್ಯಗಳೆಲ್ಲ ಮುಗಿದಿದ್ದವು. ಬಳಿಕ ಜಾರ್ಖಂಡ್-ನಾಗಾಲ್ಯಾಂಡ್ ನಡುವೆ 8ನೇ ಸ್ಥಾನಕ್ಕಾಗಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವೊಂದು ನಡೆದಿತ್ತು. ಇದೀಗ ಭರ್ತಿ 3 ತಿಂಗಳ ಬ್ರೇಕ್ ಬಳಿಕ ರಣಜಿ ಟ್ರೋಫಿ ಪಂದ್ಯಾವಳಿ ಮುಂದುವರಿಯುತ್ತಿದೆ. ಆಲೂರಿನ 3 ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಜಸ್ಟ್ ಕ್ರಿಕೆಟ್ ಅಕಾಡೆಮಿ ಗ್ರೌಂಡ್ ಈ ಪಂದ್ಯಗಳ ಆತಿಥ್ಯ ವಹಿಸಲಿದೆ.
ಕರ್ನಾಟಕ-ಯುಪಿ ಮುಖಾಮುಖಿ
ಸೋಮವಾರ ಆರಂಭವಾಗಲಿರುವ 5 ದಿನಗಳ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡದ ಎದುರಾಳಿ ಉತ್ತರಪ್ರದೇಶ. ಅಧಿಕೃತವಾಗಿ ಇದು 3ನೇ ಕ್ವಾರ್ಟರ್ ಫೈನಲ್ ಮುಖಾಮುಖಿ. ಉಳಿದ 3 ಪಂದ್ಯಗಳಲ್ಲಿ ಬಂಗಾಲ-ಜಾರ್ಖಂಡ್, ಮುಂಬಯಿ-ಉತ್ತರಾಖಂಡ . ಮತ್ತು ಪಂಜಾಬ್-ಮಧ್ಯಪ್ರದೇಶ ಎದುರಾಗಲಿವೆ.
ಕರ್ನಾಟಕ “ಸಿ’ ವಿಭಾಗದಲ್ಲಿ ಅಗ್ರ ಸ್ಥಾನ ಅಲಂಕರಿಸಿದ ತಂಡ (16 ಅಂಕ). ಉತ್ತರಪ್ರದೇಶ “ಜಿ’ ವಿಭಾಗದ ಅಗ್ರಸ್ಥಾನಿ. ಆದರೆ ಗಳಿಸಿದ್ದು 13 ಅಂಕ ಮಾತ್ರ. ಎರಡೂ ತಂಡಗಳು ಮೂರರಲ್ಲಿ ಎರಡನ್ನು ಗೆದ್ದು, ಒಂದನ್ನು ಡ್ರಾ ಮಾಡಿಕೊಂಡಿದ್ದವು.
ಕರ್ನಾಟಕ ತಂಡವನ್ನು ಮನೀಷ್ ಪಾಂಡೆ ಮುನ್ನಡೆಸಲಿದ್ದಾರೆ. ಮಾಯಾಂಕ್ ಅಗರ್ವಾಲ್, ಆರ್. ಸಮರ್ಥ್, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಕೆ. ಸಿದ್ಧಾರ್ಥ್ ಬ್ಯಾಟಿಂಗ್ ವಿಭಾಗದ ಪ್ರಮುಖರು. ಕೆ.ಎಲ್. ರಾಹುಲ್ ಟಿ20 ಸರಣಿ ಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆ ಸಲಿರುವುದರಿಂದ ರಣಜಿಯಿಂದ ಬೇರ್ಪಟ್ಟಿದ್ದಾರೆ.
ವೇಗಿ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್‌ಗೆ ತೆರಳುವ ಟೆಸ್ಟ್ ತಂಡದಲ್ಲಿರುವುದರಿಂದ ರೆಸ್ಟ್ ಪಡೆದಿದ್ದಾರೆ. ಅನೀಶ್ವರ್ ಗೌತಮ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಜಗಿªàಶ್ ಸುಚಿತ್ ಪ್ರಮುಖ ಆಲ್‌ರೌಂಡರ್. ಬೌಲಿಂಗ್ ವಿಭಾಗ ರೋನಿತ್ ಮೋರೆ, ವಿದ್ಯಾಧರ ಪಾಟೀಲ್, ವಿಜಯ್ ಕುಮಾರ್ ವೈಶಾಖ್, ವಿ. ಕೌಶಿಕ್ ಅವರನ್ನು ಒಳಗೊಂಡಿದೆ. ಉಡುಪಿ ಮೂಲದ ಬೌಲರ್ ಶುಭಾಂಗ್ ಹೆಗ್ಡೆ, ಮಂಗಳೂರು ವಲಯದ ವಿದ್ವತ್ ಕಾವೇರಪ್ಪ ಕೂಡ ತಂಡದಲ್ಲಿದ್ದಾರೆ. ಆತಿ ಥೇಯ ತಂಡವಾªರಿಂದ ಕರ್ನಾಟಕದ ಮೇಲುಗೈಯನ್ನು ನಿರೀಕ್ಷಿಸಲಾಗಿದೆ.
ಕರಣ್ ಶರ್ಮ ನೇತೃತ್ವದ ಉತ್ತರಪ್ರದೇಶ ಕೂಡ ಸಾಕಷ್ಟು ಬಲಿಷ್ಠ ತಂಡ. ಐಪಿಎಲ್‌ನಲ್ಲಿ ಮಿಂಚಿದ ರಿಂಕು ಸಿಂಗ್, ಅಂಡರ್-19 ವಿಶ್ವಕಪ್ ತಂಡದ ನಾಯಕ ಪ್ರಿಯಂ ಗರ್ಗ್, ಶಿವಂ ಮಾವಿ, ಅಂಕಿತ್ ರಜಪೂತ್, ಮೊಹ್ಸಿನ್ ಖಾನ್, ಯಶ್ ದಯಾಳ್ ಅವರಂಥ ಸ್ಟಾರ್ ಆಟಗಾರರನ್ನು ಹೊಂದಿದೆ.
ಕರ್ನಾಟಕ ತಂಡ: ಮನೀಷ್ ಪಾಂಡೆ (ನಾಯಕ), ಆರ್. ಸಮರ್ಥ್ (ಉಪನಾಯಕ), ಮಾಯಾಂಕ್ ಅಗರ್ವಾಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಕೆ.ವಿ. ಸಿದ್ಧಾರ್ಥ, ಡಿ. ನಿಶ್ಚಲ್, ಎಸ್. ಶರತ್ (ವಿ.ಕೀಪರ್), ಶ್ರೇಯಸ್ ಗೋಪಾಲ್, ಕೆ. ಗೌತಮ್, ಶುಭಾಂಗ್ ಹೆಗ್ಡೆ, ಜೆ. ಸುಚಿತ್, ಕೆ.ಸಿ. ಕಾರಿಯಪ್ಪ, ರೋನಿತ್ ಮೋರೆ, ವಿ. ಕೌಶಿಕ್, ವಿ. ವೈಶಾಖ್, ಎಂ. ವೆಂಕಟೇಶ್, ವಿದ್ವತ್ ಕಾವೇರಪ್ಪ, ಕಿಶನ್ ಎಸ್. ಬೆದರೆ. ಮುಖ್ಯ ತರಬೇತುದಾರ: ಯೆರ್ರೆ ಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.