4 ಎಸೆತಗಳಲ್ಲಿ 4 ವಿಕೆಟ್ ಕಿತ್ತ ರಶೀದ್ ಖಾನ್
Team Udayavani, Feb 26, 2019, 12:30 AM IST
ಡೆಹ್ರಾಡೂನ್: ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನದೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ. ಸತತ 4 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿಬಂದಿದ್ದಾರೆ.
ರವಿವಾರ ರಾತ್ರಿ ಡೆಹ್ರಾಡೂನ್‌ನಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ರಶೀದ್ ಖಾನ್ ಈ ಸಾಧನೆಗೈದರು. ಇದರೊಂದಿಗೆ 32 ರನ್ನುಗಳ ಗೆಲುವು ಸಾಧಿಸಿದ ಅಫ್ಘಾನಿಸ್ಥಾನ, ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 7 ವಿಕೆಟಿಗೆ 210 ರನ್ ಪೇರಿಸಿದರೆ, ಐರ್ಲೆಂಡ್ 8 ವಿಕೆಟಿಗೆ 178 ರನ್ ಗಳಿಸಿ ಶರಣಾಯಿತು.
ರಶೀದ್ 27ಕ್ಕೆ 5 ವಿಕೆಟ್
ರಶೀದ್ ಖಾನ್ ಸಾಧನೆ 27ಕ್ಕೆ 5 ವಿಕೆಟ್. 16ನೇ ಓವರಿನ ಕೊನೆಯ ಎಸೆತದಲ್ಲಿ ಕೆವಿನ್ ಓ’ಬ್ರಿಯಾನ್ ವಿಕೆಟ್ ಕಿತ್ತ ರಶೀದ್ ಖಾನ್, ಬಳಿಕ ತಮ್ಮ ಮುಂದಿನ ಓವರಿನ ಮೊದಲ 3 ಎಸೆತಗಳಲ್ಲಿ ಜಾರ್ಜ್ ಡಾಕ್ರೆಲ್, ಶೇನ್ ಜೆಟ್‌ಕೇಟ್ ಮತ್ತು ಸಿಮಿ ಸಿಂಗ್ ವಿಕೆಟ್ ಹಾರಿಸಿ ಮೆರೆದರು.
ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಾಖಲಾದ 7ನೇ ಹ್ಯಾಟ್ರಿಕ್ ನಿದರ್ಶನ. ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ಬೇಟೆಯಾಡಿದ ವಿಶ್ವದ ಮೊದಲ ಸ್ಪಿನ್ನರ್.
ಅಫ್ಘಾನಿಸ್ಥಾನ ಪರ ಮೊಹಮ್ಮದ್ ನಬಿ 36 ಎಸೆತಗಳಿಂದ 81 ರನ್ ಬಾರಿಸಿದರು (6 ಬೌಂಡರಿ, 7 ಸಿಕ್ಸರ್). ಐರ್ಲೆಂಡ್ ಸರದಿಯಲ್ಲಿ ಆರಂಭಕಾರ ಕೆವಿನ್ ಓ’ಬ್ರಿಯಾನ್ 74 ರನ್ ಹೊಡೆದರು (47 ಎಸೆತ, 5 ಬೌಂಡರಿ, 3 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ಥಾನ-7 ವಿಕೆಟಿಗೆ 210 (ನಬಿ 81, ಹಜ್ರತುಲ್ಲ 31, ರ್‍ಯಾಂಕಿನ್ 53ಕ್ಕೆ 3). ಐರ್ಲೆಂಡ್-8 ವಿಕೆಟಿಗೆ 178 (ಓ’ಬ್ರಿಯಾನ್ 74, ಬಾಲ್ಬಿರ್ನಿ 47, ರಶೀದ್ 27ಕ್ಕೆ 5, ಜಿಯಾವುರ್ ರೆಹಮಾನ್ 42ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಮೊಹಮ್ಮದ್ ನಬಿ.
ಟಿ20 ಹ್ಯಾಟ್ರಿಕ್ ಸಾಧಕರು
ಬೌಲರ್ ವಿರುದ್ಧ ತಾಣ ವರ್ಷ
ಬ್ರೆಟ್ ಲೀ (ಆ) ಬಾಂಗ್ಲಾದೇಶ ಕೇಪ್‌ಟೌನ್ 2007-08
ಜೇಕಬ್ ಓರಮ್ (ನ್ಯೂ) ಶ್ರೀಲಂಕಾ ಕೊಲಂಬೊ 2009
ಟಿಮ್ ಸೌಥಿ (ನ್ಯೂ) ಪಾಕಿಸ್ಥಾನ ಆಕ್ಲೆಂಡ್ 2010-11
ತಿಸರ ಪೆರೆರ (ಶ್ರೀ) ಭಾರತ ರಾಂಚಿ 2015-16
ಲಸಿತ ಮಾಲಿಂಗ (ಶ್ರೀ) ಬಾಂಗ್ಲಾದೇಶ ಕೊಲಂಬೊ 2016-17
ಫಾಹಿಮ್ ಅಶ್ರಫ್ (ಪಾ) ಶ್ರೀಲಂಕಾ ಅಬುಧಾಬಿ 2017-18
ರಶೀದ್ ಖಾನ್ (ಅ) ಐರ್ಲೆಂಡ್ ಡೆಹ್ರಾಡೂನ್ 2018-19
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.