ಕಪಿಲ್ 175 ನೆನಪಿಸಿದ ಕೌರ್ 171 ರನ್
Team Udayavani, Jul 22, 2017, 9:23 AM IST
ನವದೆಹಲಿ: ಬಿರುಗಾಳಿಯಂತೆ ಬ್ಯಾಟ್ ಬೀಸಿ ಭಾರತವನ್ನು ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪ್ರವೇಶಿಸುವಂತೆ ಮಾಡಿದ
ಹರ್ಮನ್‌ಪ್ರೀತ್ ಕೌರ್‌ಗೆ ದೇಶದಾದ್ಯಂತ ಪ್ರಶಂಸೆಗಳ ಸುರಿಮಳೆಯೇ ಹರಿಯುತ್ತಿದೆ.
ಕೌರ್ ಬ್ಯಾಟ್ ಬೀಸಿದ ಪರಿಗೆ ಭಾರತ ಹಿರಿಯರ ತಂಡದ ಕ್ರಿಕೆಟ್ ಕೋಚ್ ರವಿ ಶಾಸ್ತ್ರಿ ದಂಗಾಗಿದ್ದಾರೆ. ಮಾತ್ರವಲ್ಲ ಕೌರ್ ಸಾಧನೆ
ಯನ್ನು ಹಾಡಿ ಹೊಗಳಿದ್ದಾರೆ. ಜತೆಗೆ ಭಾರತಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ದೇವ್ ರವರ ಬ್ಯಾಟಿಂಗ್ ಸನ್ನಿವೇಶವೊಂದಕ್ಕೆ ಕೌರ್ ಬ್ಯಾಟಿಂಗ್ ಹೋಲಿಸಿದ್ದಾರೆ. ಅದು 1983ರ ವಿಶ್ವಕಪ್ ಕ್ರಿಕೆಟ್ ಸಂದರ್ಭ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 17ಕ್ಕೆ 5 ವಿಕೆಟ್ ಕಳೆದುಕೊಂಡಿದ್ದೆವು. ಭಾರೀ ಕುಸಿತಕ್ಕೆ ಒಳಗಾಗಿದ್ದೆವು. ನಂತರ 77ಕ್ಕೆ 6 ವಿಕೆಟ್
ಕಳೆದುಕೊಂಡಿದ್ದೆವು. ಹೀಗಿದ್ದರೂ ನಾವು ಕಪಿಲ್ ದೇವ್ ಅವರ 175 ರನ್ ಬಿರುಗಾಳಿ ಬ್ಯಾಟಿಂಗ್ ಸಾಹಸದಿಂದ 8 ವಿಕೆಟ್‌ಗೆ 266 ರನ್‌ಗಳಿಸಿ ಜಿಂಬಾಬ್ವೆ ಸವಾಲು ಹಾಕಿದ್ದೆವು. ಕಪಿಲ್ 138 ಎಸೆತದಲ್ಲಿ 16 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ್ದರು. ಈ ಪಂದ್ಯದಲ್ಲಿ ನಾವು ಜಿಂಬಾಬ್ವೆಯನ್ನು 235 ರನ್‌ಗೆ ಕಟ್ಟಿ ಹಾಕಿ ಗೆದ್ದೆವು. ನಂತರ ಭಾರತ ವಿಶ್ವಕಪ್ ಜಯಿಸಿತು. ಅಂದು ಕಪಿಲ್ ಆಡಿದಂತೆಯೇ ಗುರುವಾರ ಹರ್ಮನ್ ಹಂತ ಹಂತವಾಗಿ ಇನಿಂಗ್ಸ್ ಕಟ್ಟುತ್ತಾ ಹೋದರು ಎಂದು ಶ್ಲಾಘಿಸಿದರು.
ಆಸೀಸ್ ವಿರುದ್ಧ ಹರ್ಮನ್ 2ನೇ ಸೆಮಿಫೈನಲ್‌ನಲ್ಲಿ 115 ಎಸೆತದಲ್ಲಿ 171 ರನ್ ಸಿಡಿಸಿದ್ದರು. 20 ಬೌಂಡರಿ, 7 ಸಿಕ್ಸರ್ ಎತ್ತಿ
ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಅಭಿನಂದನೆ
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್ ಗೇರಿದ ಭಾರತ ತಂಡದ ಸಾಧನೆಯನ್ನು ಅಭಿನಂದಿಸಿದೆ. ಬಿಸಿಸಿಐ ಮಿಥಾಲಿ ರಾಜ್ ಹಾಗೂ ಎಲ್ಲ ಆಟಗಾರ್ತಿಯರನ್ನೂ ಅಭಿನಂದಿಸುತ್ತದೆ. ಕೂಟದುದ್ದಕ್ಕೂ ಮಿಥಾಲಿ ಪಡೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ. ಫೈನಲ್‌ನಲ್ಲೂ ಅದೇ
ಪ್ರದರ್ಶನವನ್ನು ನೀಡಲಿದೆ ಎನ್ನುವ ವಿಶ್ವಾಸವಿದೆ ಎಂದು ಬಿಸಿಸಿಐ ತಿಳಿಸಿದೆ.
ರನೌಟ್ ತಪ್ಪಿಸಿಕೊಂಡ ಹರ್ಮನ್ ದೀಪ್ತಿಗೇ ಹೇಳಿದ್ದೇನು?
ನವದೆಹಲಿ: ಗುರುವಾರ ಭಾರತ-ಆಸ್ಟ್ರೇಲಿಯಾ ನಡುವೆ ಮಹಿಳಾ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ ಫೈನಲ್‌ಗೇರಿದ್ದು ಈಗ ಇತಿಹಾಸ. ಇಲ್ಲಿ ಭಾರತವನ್ನು ಗೆಲ್ಲಿಸುವ ಆಟವಾಡಿದ ಹರ್ಮನ್
ಪ್ರೀತ್ ಕೌರ್ ಒಂದು ಹಂತದಲ್ಲಿ ಕೆಂಡಾಮಂಡಲ ಸಿಟ್ಟಾಗಿದ್ದರು. ಅದೂ ಸಹ ಆಟಗಾರ್ತಿ ದೀಪ್ತಿ ಶರ್ಮ ವಿರುದ್ಧ. ಏಕೆಂದು ಗೊತ್ತೇ? ಹರ್ಮನ್ ಇನ್ನೇನು ಶತಕ ಗಳಿಸಬೇಕು ಎಂಬ ಹಂತದಲ್ಲಿ ರನೌಟಾಗುವ ಅಪಾಯಕ್ಕೆ ಸಿಕ್ಕಿದ್ದರು. ಅದು ಅವರ ಸಿಟ್ಟಿಗೆ
ಕಾರಣವಾಯಿತು. ಸ್ಟ್ರೈಕ್ ಬದಲಾಯಿಸಲು ದೀಪ್ತಿ ಹಿಂಜರಿದಿದ್ದು ಹರ್ಮನ್ ಔಟಾಗುವ ಪರಿಸ್ಥಿತಿ ತಂದಿಟ್ಟಿತ್ತು.
ಅದೃಷ್ಟವಶಾತ್ ಬಚಾವಾದರು. ಆಗ ಸಿಟ್ಟಾದ ಹರ್ಮನ್, ದೀಪ್ತಿಗೆ ಹೇಳಿದ್ದು ಹೀಗೆ: ನೀನು ಒತ್ತಡ ತೆಗೆದುಕೊಳ್ಳಬೇಡ. ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನನಗೆ ವಿಶ್ವಾಸವಿದೆ. ನೀನು ಸರಿಯಾಗಿ ಸ್ಟ್ರೈಕ್ ಬದಲಾವಣೆ ಮಾಡಿದರಷ್ಟೇ ಸಾಕು ಎಂದರು. ದೀಪ್ತಿ ಈ ಕೆಲಸವನ್ನು ಸೂಕ್ತವಾಗಿ ನಿರ್ವಹಿಸಿದ ತೃಪ್ತಿ ಹರ್ಮನ್‌ಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್ ಬಿಗ್ ಫೈಟ್
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Team India: ಕೆಎಲ್, ಪಾಂಡ್ಯ, ಗಿಲ್ ಅಲ್ಲ.., ಚಾಂಪಿಯನ್ಸ್ ಟ್ರೋಫಿಗೆ ಈತನೇ ಉಪ ನಾಯಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.