Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Team Udayavani, Dec 18, 2024, 11:35 AM IST
ನವದೆಹಲಿ: ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಬುಧವಾರ (ಡಿ.18 ರಂದು) ನಿವೃತ್ತಿ ಘೋಷಿಸಿದ್ದಾರೆ.
ಗಾಬಾದಲ್ಲಿ ನಡೆದ ಭಾರತ – ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಈ ಸುದ್ದಿಯ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಅವರು ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಜತೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೂತಿದ್ದ ಅಶ್ವಿನ್ ಅವರು ಒಂದು ಅಪ್ಪುಗೆ ಕೊಟ್ಟಿದ್ದರು. ಈ ವೇಳೆಯೇ ಅವರು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.
ನಿವೃತ್ತಿ ಬಗ್ಗೆ ಅಶ್ವಿನ್ ಹೇಳಿದ್ದೇನು?:
ನನ್ನಲ್ಲಿ ಸ್ವಲ್ಪ ಪಂಚ್ ಉಳಿದಿದೆ ಅದನ್ನು… ‘ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಸ್ವರೂಪಗಳಲ್ಲಿ ಭಾರತೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ವರ್ಷ.ಕ್ರಿಕೆಟಿಗನಾಗಿ ನನ್ನಲ್ಲಿ ಸ್ವಲ್ಪ ಪಂಚ್ ಉಳಿದಿದೆ ಎಂದು ನಾನು ಭಾವಿಸುತ್ತೇನೆ, ಆದರೆ ನಾನು ಅದನ್ನು ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ಪ್ರದರ್ಶಿಸಲು ಬಯಸುತ್ತೇನೆ. ನಾನು ಬಹಳಷ್ಟು ಸಂಭ್ರಮವನ್ನು ಹೊಂದಿದ್ದೇನೆ. ರೋಹಿತ್ ಶರ್ಮ ಮತ್ತು ತಂಡದ ಅನೇಕ ಸಹ ಆಟಗಾರರೊಂದಿಗೆ ಸಾಕಷ್ಟು ಸವಿ ನೆನಪುಗಳನ್ನು ಹೊಂದಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಅನೇಕ ಆಟಗಾರರು ನಿವೃತ್ತಿ ಹೊಂದಿದ್ದಾರೆ, ಅವರೊಂದಿಗೂ ಅನೇಕ ನೆನಪುಗಳಿವೆ. ನಾನು ಈ ಮಟ್ಟದಲ್ಲಿ ಆಡಿರುವುದಕ್ಕೆ ಖಂಡಿತವಾಗಿಯೂ ಅನೇಕರಿಗೆ ಧನ್ಯವಾದಗಳನ್ನು ಹೇಳಬೇಕಾಗಿದೆ. ಮುಖ್ಯವಾಗಿ ಬಿಸಿಸಿಐ ಮತ್ತು ನನ್ನನೊಂದಿಗೆ ಆಡಿದ ತಂಡದ ಆಟಗಾರರಿಗೆ ಧನ್ಯವಾದ ಹೇಳದಿದ್ದರೆ ನಾನು ಕರ್ತವ್ಯ ಮರೆತಂತಾಗುತ್ತದೆ’ ಎಂದರು.
ರೋಹಿತ್ ಶರ್ಮ ಸ್ವಾಗತ:
ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದ ನಾಯಕ ರೋಹಿತ್ ಶರ್ಮ “ನಾವು ತಂಡದ ಸಹ ಆಟಗಾರರಾಗಿ ಅಶ್ವಿನ್ ಅವರ ನಿರ್ಧಾರ ಗೌರವಿಸಬೇಕು. ಅವರಿಗೆ ಏನು ಮಾಡಬೇಕೆಂದು ತುಂಬಾ ಖಚಿತವಾಗಿತ್ತು. ತಂಡವು ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದೆ. ನಮ್ಮ ಆಲೋಚನೆಗಳನ್ನು ನೆನಪಿಸಿಕೊಳ್ಳಲು ತಂಡವಾಗಿ ನಮಗೆ ಅಂತರವಿದೆ. ಮುಂದೆ ಹೇಗೆ ಮುಂದುವರಿಯುವುದು ಎಂದು ನಾವು ಯೋಚಿಸಬಹುದು. ಅವರು ಈ ನಿರ್ಧಾರದ ಬಗ್ಗೆ ತುಂಬಾ ಖಚಿತವಾಗಿದ್ದರು. ಎಂದರು.
38 ವರ್ಷದ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಆಟಗಾರನಾಗಿದ್ದಾರೆ.
ನವೆಂಬರ್ 6, 2011 ರಂದು ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2010 ಜೂ.5 ರಂದು ಶ್ರೀಲಂಕಾ ವಿರುದ್ದ ಏಕದಿನ ಪಂದ್ಯಕ್ಕೆ ಎಂಟ್ರಿ ಆಗಿದ್ದರು. ಜೂನ್ 12, 2010 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ T20ಗೆ ಪಾದಾರ್ಪಣೆ ಮಾಡಿದ್ದರು.
ಭಾರತದ ಪರ 116 ಏಕದಿನ ಮತ್ತು 65 T20I ಪಂದ್ಯಗಳನ್ನು ಆಡಿದ್ದು, ಎಲ್ಲಾ ಮಾದರಿಯಲ್ಲಿ ಅಶ್ವಿನ್ ಒಟ್ಟು 775 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು 37 ಬಾರಿ ಐದು ವಿಕೆಟ್ ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ.
116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್ ಪಡೆದಿದ್ದಾರೆ. 65 ಟಿ-20 ಪಂದ್ಯದಲ್ಲಿ 72 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಒಟ್ಟು 537 ವಿಕೆಟ್ ಗಳನ್ನು ಪಡೆದಿದ್ದಾರೆ. 6 ಶತಕವನ್ನು ಅಶ್ವಿನ್ ಸಿಡಿಸಿದ್ದು, 14 ಅರ್ಧಶತಕಗಳನ್ನು ಒಳಗೊಂಡಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ 3503 ರನ್ ಗಳಿಸಿ ಹಲವು ಪಂದ್ಯಗಳ ಗೆಲುವಿಗೆ ರೂವಾರಿ ಆಗಿದ್ದಾರೆ.
ಅಶ್ವಿನ್ 2024 ರಲ್ಲಿ ಭಾರತಕ್ಕಾಗಿ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 47 ವಿಕಟ್ ಪಡೆದಿದ್ದಾರೆ.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕ್ರಿಕೆಟ್ ವೃತ್ತಿ ಜೀವನವನ್ನು ಮುಂದುವರೆಸಲಿದ್ದಾರೆ.
2016 ರಲ್ಲಿ ಮೆನ್ಸ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ: ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಅಶ್ವಿನ್ 2016 ರಲ್ಲಿ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಮತ್ತು ವರ್ಷದ ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
Head Coach: ವೆಸ್ಟ್ ಇಂಡೀಸ್ ಎಲ್ಲ ಮಾದರಿಗೂ ಡ್ಯಾರನ್ ಸಮ್ಮಿ ಕೋಚ್
MUST WATCH
ಹೊಸ ಸೇರ್ಪಡೆ
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.