ರಾವಲ್ಪಿಂಡಿ: ಅಂತಿಮ ದಿನದಾಟದಲ್ಲಿ 3 ಶತಕ
Team Udayavani, Dec 16, 2019, 1:26 AM IST
ರಾವಲ್ಪಿಂಡಿ: ಮೊದಲ 4 ದಿನ ಮಳೆಯಿಂದ ನೀರಸವಾಗಿದ್ದ ರಾವಲ್ಪಿಂಡಿ ಟೆಸ್ಟ್ ಪಂದ್ಯ ಅಂತಿಮ ದಿನವಾದ ರವಿವಾರ 3 ಶತಕಗಳೊಂದಿಗೆ ಕಾವೇರಿಸಿಕೊಂಡಿತು. ನಿರೀಕ್ಷೆಯಂತೆ ಡ್ರಾದಲ್ಲಿ ಅಂತ್ಯ ಕಂಡಿತು.
ಮೊದಲು ಶ್ರೀಲಂಕಾದ ಧನಂಜಯ ಡಿ ಸಿಲ್ವ, ಬಳಿಕ ಆತಿಥೇಯ ತಂಡದ ಅಬಿದ್ ಅಲಿ ಮತ್ತು ಬಾಬರ್ ಆಜಂ ಶತಕ ಬಾರಿಸಿ ರಂಜಿಸಿದರು. ಲಂಕಾ 6 ವಿಕೆಟಿಗೆ 308 ರನ್ ಮಾಡಿ ಡಿಕ್ಲೇರ್ ಮಾಡಿದರೆ, ಪಾಕ್ 2 ವಿಕೆಟಿಗೆ 252 ರನ್ ಪೇರಿಸಿತು.
4 ದಿನಗಳಿಂದ ನಾಟೌಟ್ ಆಗಿ ಉಳಿದಿದ್ದ ಧನಂಜಯ ಡಿ ಸಿಲ್ವ ಅಜೇಯ 102 ರನ್ ಬಾರಿಸಿದರು (166 ಎಸೆತ, 15 ಬೌಂಡರಿ). ಇವರ ಶತಕ ಪೂರ್ತಿಗೊಂಡ ಬಳಿಕ ಲಂಕಾ ಕಪ್ತಾನ ಕರುಣರತ್ನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು.
ಪದಾರ್ಪಣೆಯಲ್ಲೇ ಶತಕ
ಬ್ಯಾಟಿಂಗ್ ಆರಂಭಿಸಿದ ಪಾಕ್ ಶಾನ್ ಮಸೂದ್ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಆದರೆ ಚೊಚ್ಚಲ ಟೆಸ್ಟ್ ಆಡುತ್ತಿದ್ದ ಮತ್ತೋರ್ವ ಆರಂಭಕಾರ ಅಬಿದ್ ಅಲಿ ಅಜೇಯ 109 ಬಾರಿಸಿ ಮಿಂಚಿದರು (201 ಎಸೆತ, 11 ಬೌಂಡರಿ). ಅಲಿ ಪದಾರ್ಪಣ ಟೆಸ್ಟ್ ಹಾಗೂ ಏಕದಿನ ಪಂದ್ಯಗಳೆರಡರಲ್ಲೂ ಶತಕ ಹೊಡೆದ ವಿಶ್ವದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾದರು.
ಆಸ್ಟ್ರೇಲಿಯ ವಿರುದ್ಧ ಇದೇ ವರ್ಷ ದುಬಾೖಯಲ್ಲಿ ಆಡಿದ ತಮ್ಮ ಮೊದಲ ಏಕದಿನ ಪಂದ್ಯದಲ್ಲೂ ಅಬಿದ್ ಅಲಿ ಶತಕ ಬಾರಿಸಿದ್ದರು. ಅವರು ಚೊಚ್ಚಲ ಟೆಸ್ಟ್‌ನಲ್ಲೇ ಮೂರಂಕೆಯ ಸ್ಕೋರ್ ದಾಖಲಿಸಿದ ಪಾಕಿಸ್ಥಾನದ 11ನೇ ಕ್ರಿಕೆಟಿಗ.
ಬಾಬರ್ ಆಜಂ ಗಳಿಕೆ ಅಜೇಯ 102 ರನ್ (128 ಎಸೆತ, 14 ಬೌಂಡರಿ). ಅಬಿದ್-ಆಜಂ ಮುರಿಯದ 3ನೇ ವಿಕೆಟಿಗೆ 162 ರನ್ ಪೇರಿಸಿದರು. ನಾಯಕ ಅಜರ್ ಅಲಿ 36 ರನ್ ಮಾಡಿ ಔಟಾದರು.
ಅಂತಿಮ ದಿನ ಉಚಿತ ವೀಕ್ಷಣೆಗೆ ಅವಕಾಶ ನೀಡಿದ್ದರಿಂದ 12 ಸಾವಿರ ವೀಕ್ಷಕರು ಸ್ಟೇಡಿಯಂನಲ್ಲಿ ನೆರೆದಿದ್ದರು. 2ನೇ ಹಾಗೂ ಅಂತಿಮ ಟೆಸ್ಟ್ ಡಿ. 19ರಿಂದ ಕರಾಚಿಯಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-6 ವಿಕೆಟಿಗೆ 308 ಡಿಕ್ಲೇರ್. ಪಾಕಿಸ್ಥಾನ-2 ವಿಕೆಟಿಗೆ 252.
ಪಂದ್ಯಶ್ರೇಷ್ಠ: ಅಬಿದ್ ಅಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.