ರಾವಲ್ಪಿಂಡಿ ಟೆಸ್ಟ್: 4ನೇ ದಿನದಾಟ ರದ್ದು
Team Udayavani, Dec 14, 2019, 10:58 PM IST
ರಾವಲ್ಪಿಂಡಿ: ಮತ್ತೆ ಸುರಿದ ಭಾರೀ ಮಳೆಯಿಂದ ಪಾಕಿಸ್ಥಾನ-ಶ್ರೀಲಂಕಾ ನಡುವಿನ ರಾವಲ್ಪಿಂಡಿ ಟೆಸ್ಟ್ ಪಂದ್ಯದ 4ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರೊಂದಿಗೆ ಈ ಪಂದ್ಯ ಡ್ರಾ ಅಲ್ಲದೇ ಬೇರೆ ಯಾವುದೇ ಫಲಿತಾಂಶ ದಾಖಲಿಸುವ ಸಾಧ್ಯತೆ ಇಲ್ಲವಾಗಿದೆ.
ದಶಕದ ಬಳಿಕ ಪಾಕಿಸ್ಥಾನದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ ಎಂಬ ಖುಷಿಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ, ಪಿಸಿಬಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.
ಈ ವರೆಗಿನ 4 ದಿನಗಳ ಆಟದಲ್ಲಿ ಒಂದು ಇನ್ನಿಂಗ್ಸ್ ಕೂಡ ಪೂರ್ತಿಯಾಗಿಲ್ಲ. ಕೇವಲ 91.5 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದೆ. ಮೊದಲು ಬ್ಯಾಟಿಂಗ್ ನಡೆಸುತ್ತಿದ್ದ ಶ್ರೀಲಂಕಾ 6 ವಿಕೆಟಿಗೆ 282 ರನ್ ಮಾಡಿದೆ. ಧನಂಜಯ ಡಿ ಸಿಲ್ವ 87, ದಿಲುÅವಾನ್ ಪೆರೆರ 6 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಾಕಿಸ್ಥಾನ ಪರ 16ರ ಹರೆಯದ ಪೇಸ್ ಬೌಲರ್ ನಸೀಮ್ ಶಾ ಮತ್ತು ಶಹೀನ್ ಅಫ್ರಿದಿ ತಲಾ 2 ವಿಕೆಟ್ ಉರುಳಿಸಿದ್ದಾರೆ.ಮೊದಲ ದಿನ ಮಾತ್ರ ಹವಾಮಾನ ಒಂದಿಷ್ಟು ಅನುಕೂಲಕರವಾಗಿತ್ತು. 68.1 ಓವರ್‌ಗಳ ಆಟ ನಡೆಯಿತು. ಆದರೆ 2ನೇ ದಿನ 18.2 ಓವರ್, 3ನೇ ದಿನ 5.2 ಓವರ್‌ಗಳ ಆಟವಷ್ಟೇ ಸಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.