RCB Unbox: ಕನ್ನಡಿಗರ ನೆಚ್ಚಿನ ತಂಡವಿನ್ನು….ರಾಯಲ್ ಚಾಲೆಂಜರ್ ಬೆಂಗಳೂರು
ಆರ್‌ಸಿಬಿ ಅನ್‌ಬಾಕ್ಸ್‌ನಲ್ಲಿ ಅಧಿಕೃತ ಘೋಷಣೆ ಕನ್ನಡಿಗರ ಬಹುಕಾಲದ ಬೇಡಿಕೆಗೆ ಮನ್ನಣೆ
Team Udayavani, Mar 20, 2024, 12:12 AM IST
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಮಂಗಳ ವಾರ ನಡೆದ ಆರ್‌ಸಿಬಿ ಚಟುವಟಿ ಕೆಗಳ ಅನಾವರಣ (ಅನ್‌ಬಾಕ್ಸ್) ಕಾರ್ಯ ಕ್ರಮದಲ್ಲಿ ರಾಯಲ್ ಚಾಲೆಂಜರ್ ಬ್ಯಾಂಗಳೂರ್ ಹೆಸರನ್ನು “ರಾಯಲ್ ಚಾಲೆಂಜರ್ ಬೆಂಗಳೂರು’ ಎಂದು ಬದಲಾಯಿಸಲಾಯಿತು. ಇದರ ಜತೆಗೆ ವನಿತಾ ಪ್ರೀಮಿಯರ್ ಲೀಗ್ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಆರ್‌ಸಿಬಿ ಪುರುಷರ ತಂಡದಿಂದ ಗಾರ್ಡ್ ಆಫ್ ಆನರ್, ನಾರ್ವೆಯ ಸಂಗೀತ ನಿರ್ಮಾಪಕ ಅಲನ್ ವಾಕರ್, ರ್ಯಾಪರ್ ಬ್ರೋಧ ವಿ., ಗಾಯಕರಾದ ರಘು ದೀಕ್ಷಿತ್, ನೀತಿ ಮೋಹನ್ ಅವರಿಂದ ಮನರಂಜನಾ ಕಾರ್ಯಕ್ರಮ ಗಮನ ಸೆಳೆಯಿತು.
ಕಳೆದ ವಾರದಿಂದಲೂ ಆರ್‌ಸಿಬಿ ಹೆಸರು ಬದಲಾವಣೆಯ ಸುದ್ದಿ ಆಗುತ್ತಲೇ ಇತ್ತು. ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟಿಸಿದ್ದ ವೀಡಿಯೋಗಳಲ್ಲಿ, ಕಾಂತಾರ ನಿರ್ಮಾಪಕ ರಿಷಭ್ ಶೆಟ್ಟಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟರಾಟ ಶಿವರಾಜ್ ಕುಮಾರ್, ಸುದೀಪ್ ಕಾಣಿಸಿಕೊಂಡು ಈ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಕನ್ನಡಿಗರ ಬಹು ದಿನಗಳ ಆಸೆ ನೆರವೇರಿದೆ. ಆರ್‌ಸಿಬಿ ತಂಡದ ಹೆಸರನ್ನು ಈಗ ರಾಯಲ್ ಚಾಲೆಂಜರ್ಸ್ “ಬ್ಯಾಂಗಳೂರ್’ಗೆ ಬದಲಾಗಿ, “ಬೆಂಗಳೂರು’ ಎಂದು ಅಧಿಕೃತವಾಗಿ ಬದಲಾಯಿಸಲಾಯಿತು.
ಮಂಧನಾ ಪಡೆಗೆ ಗೌರವ
ಡಬ್ಲ್ಯುಪಿಎಲ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಮತಿ ಮಂಧನಾ ನಾಯಕತ್ವದ ಆರ್‌ಸಿಬಿ 8 ವಿಕೆಟ್‌ಗಳ ಗೆಲುವನ್ನಾಚರಿಸಿತ್ತು. ಈ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದ ವನಿತಾ ತಂಡ, ಆರ್‌ಸಿಬಿ ಅಭಿಮಾನಿಗಳ 16 ವರ್ಷಗಳ “ಕಪ್’ ಕನಸನ್ನು ಸಾಕಾರಗೊಳಿಸಿತ್ತು. ಈ ಅಪೂರ್ವ ಸಾಧನೆಗೈದಿರುವ ಮಹಿಳಾ ತಂಡಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಪುರುಷರ ತಂಡ ಗಾರ್ಡ್ ಆಫ್ ಆನರ್ ನೀಡಿತು. ನೆರೆದ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಮಂಧನಾ ಪಡೆ ಗೌರವ ಸ್ವೀಕರಿಸಿದ ಈ ಕ್ಷಣ ಅತ್ಯಂತ ರೋಮಾಂಚನಕಾರಿಯಾಗಿತ್ತು.
ನೂತನ ಜೆರ್ಸಿ ಅನಾವರಣ
ಸಮಾರಂಭದಲ್ಲಿ ಆರ್‌ಸಿಬಿಯ ನೂತನ ಜೆರ್ಸಿಯನ್ನು ಅನಾವರಣ ಗೊಳಿಸಲಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಜೆರ್ಸಿ ಬಿಡುಗಡೆಗೊಳಿಸಿದರು. ಹಳೆ ಜೆರ್ಸಿಗಿಂತ ಕೊಂಚ ಭಿನ್ನ ವಿನ್ಯಾಸವನ್ನು ಹೊಂದಿರುವ ಕಡು ನೀಲಿ, ಕೆಂಪು ಬಣ್ಣದ ಹೊಸ ಜೆರ್ಸಿ ಅನಾವರಣಗೊಂಡಿದೆ. ಇದರಲ್ಲಿ ಬಂಗಾರ ವರ್ಣವೂ ಇದೆ.
“ಇದು ಆರ್‌ಸಿಬಿಯ ಹೊಸ ಅಧ್ಯಾಯ’.
– ಕನ್ನಡದಲ್ಲಿ ಹೇಳಿದ ವಿರಾಟ್ ಕೊಹ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.