ಪುನಃ ಮಳೆಯಾಟ; ಪೂಜಾರ ಹೋರಾಟ


Team Udayavani, Nov 18, 2017, 12:54 PM IST

18-22.jpg

ಕೋಲ್ಕತಾ: ಶುಕ್ರವಾರವೂ ಕೋಲ್ಕತಾದಲ್ಲಿ ಮಳೆ ಆಟವಾಡಿದೆ. ಇದರಿಂದ ಭಾರತ- ಶ್ರೀಲಂಕಾ ನಡುವಿನ ಟೆಸ್ಟ್‌ ಪಂದ್ಯಕ್ಕೆ ಮತ್ತಷ್ಟು ಅಡಚಣೆಯಾಗಿದೆ. ನಡೆದ ಸೀಮಿತ ಅವಧಿಯ ಆಟದಲ್ಲಿ ಲಂಕಾ ಬೌಲರ್‌ಗಳು ಮೇಲುಗೈ ಸಾಧಿಸಿದರೆ, ಇವರಿಗೆ “ಟೆಸ್ಟ್‌ ಸ್ಪೆಷಲಿಸ್ಟ್‌’ ಚೇತೇಶ್ವರ್‌ ಪೂಜಾರ ಸಡ್ಡು ಹೊಡೆದು ನಿಂತಿದ್ದಾರೆ. 

ಮೊದಲ ದಿನ ಭೋಜನ ವಿರಾಮದ ಬಳಿಕ ಪಂದ್ಯ ಮೊದಲ್ಗೊಂಡು 11.5 ಓವರ್‌ಗಳಿಗೆ ಸೀಮಿತಗೊಂಡರೆ, ಎರಡನೇ ದಿನದಾಟ ಭೋಜನ ವಿರಾಮದೊಳಗೇ ಮುಗಿಯಿತು. ಆಡಲು ಸಾಧ್ಯವಾದದ್ದು ಬರೀ 21 ಓವರ್‌ ಮಾತ್ರ. ಆಗ ಭಾರತ 74 ರನ್ನಿಗೆ 5 ವಿಕೆಟ್‌ ಕಳೆದುಕೊಂಡಿತ್ತು. ಶನಿವಾರವೂ ಕೋಲ್ಕತಾದಲ್ಲಿ ಮಳೆ ಮುಂದು ವರಿಯುವ ಸೂಚನೆ ಇದೆ.

ಮೊದಲ ದಿನ ಸುರಂಗ ಲಕ್ಮಲ್‌ ಭಾರತದ ಬ್ಯಾಟಿಂಗ್‌ ಸರದಿಯನ್ನು ಕಾಡಿದರೆ, ದ್ವಿತೀಯ ದಿನ ಮತ್ತೂಬ್ಬ ಮಧ್ಯಮ ವೇಗಿ ದಸುನ್‌ ಶಣಕ ಕೈಚಳಕ ಪ್ರದರ್ಶಿಸಿದರು. ಅವರು 23 ರನ್‌ ವೆಚ್ಚದಲ್ಲಿ ಎರಡೂ ವಿಕೆಟ್‌ಗಳನ್ನು ಉಡಾಯಿಸಿದರು. ಶಣಕ ಬುಟ್ಟಿಗೆ ಬಿದ್ದವ‌ರೆಂದರೆ ಅಜಿಂಕ್ಯ ರಹಾನೆ ಮತ್ತು ಆರ್‌. ಅಶ್ವಿ‌ನ್‌. ಇಬ್ಬರದೂ 4 ರನ್‌ ಗಳಿಕೆ.

ಪೂಜಾರ ಎಚ್ಚರಿಕೆಯ ಬ್ಯಾಟಿಂಗ್‌
ಇಂಥ ಸ್ಥಿತಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡು, ತಾಳ್ಮೆ ಹಾಗೂ ಎಚ್ಚರಿಕೆಯಿಂದ ಹೇಗೆ ಬ್ಯಾಟಿಂಗ್‌ ನಡೆಸಬೇಕೆಂದು ತೋರಿಸಿಕೊಟ್ಟ ಚೇತೇಶ್ವರ್‌ ಪೂಜಾರ 47 ರನ್‌ ಬಾರಿಸಿ ಅಜೇಯರಾಗಿ ಉಳಿದಿ ದ್ದಾರೆ. ರಕ್ಷಣಾತ್ಮಕ ಆಟದ ರಾಯಭಾರಿಯೇ ಆಗಿರುವ ಪೂಜಾರ ಈಗಾಗಲೇ 102 ಎಸೆತಗಳನ್ನು ನಿಭಾಯಿಸಿದ್ದು, 9 ಬೌಂಡರಿ ಬಾರಿಸಿದ್ದಾರೆ. ಇವರು ಬ್ಯಾಟಿಂಗ್‌ ಹೋರಾಟವನ್ನು ಜಾರಿಯಲ್ಲಿರಿಸಿದ್ದು ಭಾರತದ ಸರದಿಯ ಹೆಚ್ಚುಗಾರಿಕೆ. ಪೂಜಾರ 8 ರನ್ನಿನಿಂದ ಬ್ಯಾಟಿಂಗ್‌ ಮುಂದುವರಿಸಿದ್ದರು. ಇನ್ನು 3 ರನ್‌ ಮಾಡಿದರೆ ಪೂಜಾರ ಪಾಲಿಗೆ ಅದೊಂದು ಸ್ಮರಣೀಯ ಅರ್ಧ ಶತಕವಾಗಲಿದೆ. 

ಲಂಕಾ ಸೀಮರ್‌ಗಳು ಈಡನ್‌ ಅಂಗಳದ ಹಸಿರು ಟ್ರ್ಯಾಕಿನ ಭರಪೂರ ಲಾಭ ಎತ್ತುತ್ತಿರುವಾಗ ಇವರ “ಲೂಸ್‌ ಎಸೆತ’ಗಳಿಗೇ ಹೊಂಚುಹಾಕಿ ನಿಂತ ಪೂಜಾರ ತಾಳ್ಮೆ ಅಮೋಘವೇ ಸೈ. ಇವರೊಂದಿಗೆ 6 ರನ್‌ ಮಾಡಿರುವ ಕೀಪರ್‌ ವೃದ್ಧಿಮಾನ್‌ ಸಾಹಾ ಕ್ರೀಸಿನಲ್ಲಿದ್ದಾರೆ. ಸಾಹಾ 22 ಎಸೆತ ನಿಭಾಯಿಸಿದ್ದು, ಒಂದು ಬೌಂಡರಿ ಹೊಡೆದಿದ್ದಾರೆ.

ಕೆಣಕಿದ ಶಣಕ 
ಕೇವಲ 2ನೇ ಟೆಸ್ಟ್‌ ಆಡುತ್ತಿರುವ ದಸುನ್‌ ಶಣಕ ಭಾರತದ ಬ್ಯಾಟಿಂಗ್‌ ಸರದಿಯನ್ನು ಕೆಣಕತೊಡಗಿದರು. ತನ್ನ 3ನೇ ಓವರಿನಲ್ಲಿ ಅಜಿಂಕ್ಯ ರಹಾನೆ ವಿಕೆಟ್‌ ಕಿತ್ತು ಭಾರತಕ್ಕೆ ಆಘಾತವಿಕ್ಕಿದರು. ರಹಾನೆ ಅವರನ್ನು ಡ್ರೈವ್‌ ಮಾಡಲು ಪ್ರೇರೇಪಿಸಿದಾಗ ಬ್ಯಾಟಿಗೆ ಸವರಿ ಹೋದ ಚೆಂಡು ನೇರವಾಗಿ ಕೀಪರ್‌ ಡಿಕ್ವೆಲ್ಲ ಕೈಸೇರಿತು. ರಹಾನೆ 4 ರನ್ನಿಗಾಗಿ 21 ಎಸೆತ ಎದುರಿಸಿದರು. ಇದರಲ್ಲಿ ಒಂದು ಬೌಂಡರಿ ಇತ್ತು. ರಹಾನೆ ನಿರ್ಗಮಿಸುವಾಗ ಭಾರತದ ಸ್ಕೋರ್‌ಬೋರ್ಡ್‌ 30 ರನ್‌ ತೋರಿಸುತ್ತಿತ್ತು.

ಬಳಿಕ ಪೂಜಾರ-ಅಶ್ವಿ‌ನ್‌ ಸೇರಿಕೊಂಡು ಸುಮಾರು 8 ಓವರ್‌ಗಳ ತನಕ ಲಂಕಾ ದಾಳಿಯನ್ನು ತಡೆದು ನಿಂತರು. ಸ್ಕೋರ್‌ ಅಂತೂ ಇಂತೂ 26 ಓವರ್‌ಗಳಲ್ಲಿ ಐವತ್ತಕ್ಕೆ ಮುಟ್ಟಿತು. ಆಗ ಶಣಕ ಈ ಜೋಡಿಯನ್ನು ಬೇರ್ಪಡಿಸಿದರು. ಪಾಯಿಂಟ್‌ ವಿಭಾಗದಲ್ಲಿದ್ದ ಕರುಣರತ್ನೆ, ಅಶ್ವಿ‌ನ್‌ ಅವರ ಕ್ಯಾಚ್‌ ಪಡೆದರು. ಅಶ್ವಿ‌ನ್‌ ಎದುರಿಸಿದ್ದು 29 ಎಸೆತ, ಹೊಡೆದದ್ದು ಒಂದು ಬೌಂಡರಿ.

ಮೊದಲ ದಿನ ಎಲ್ಲ 6 ಓವರ್‌ ಮೇಡನ್‌ ಮಾಡಿ ಒಂದೂ ರನ್‌ ನೀಡದೆ 3 ವಿಕೆಟ್‌ ಉಡಾಯಿಸಿದ್ದ ಸುರಂಗ ಲಕ್ಮಲ್‌ಗೆ 2ನೇ ದಿನದಾಟದಲ್ಲಿ ಯಾವುದೇ ಯಶಸ್ಸು ಸಿಗಲಿಲ್ಲ. ಆದರೆ ಆತಿಥೇಯರ ಮೇಲೆ ನಿಯಂತ್ರಣ ಹೇರುವುದನ್ನು ನಿಲ್ಲಿಸಲಿಲ್ಲ. 

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ಕೆ.ಎಲ್‌. ರಾಹುಲ್‌    ಸಿ ಡಿಕ್ವೆಲ್ಲ ಬಿ ಲಕ್ಮಲ್‌    0
ಶಿಖರ್‌ ಧವನ್‌    ಬಿ ಲಕ್ಮಲ್‌    8
ಚೇತೇಶ್ವರ್‌ ಪೂಜಾರ    ಬ್ಯಾಟಿಂಗ್‌    47
ವಿರಾಟ್‌ ಕೊಹ್ಲಿ    ಎಲ್‌ಬಿಡಬ್ಲ್ಯು ಲಕ್ಮಲ್‌    0
ಅಜಿಂಕ್ಯ ರಹಾನೆ    ಸಿ ಡಿಕ್ವೆಲ್ಲ ಬಿ ಶಣಕ    4
ಆರ್‌. ಅಶ್ವಿ‌ನ್‌    ಸಿ ಕರುಣರತ್ನೆ ಬಿ ಶಣಕ    4
ವೃದ್ಧಿಮಾನ್‌ ಸಾಹಾ    ಬ್ಯಾಟಿಂಗ್‌    6

ಇತರ        5
ಒಟ್ಟು  (5 ವಿಕೆಟಿಗೆ)        74
ವಿಕೆಟ್‌ ಪತನ: 1-0, 2-13, 3-17, 4-30, 5-50.

ಬೌಲಿಂಗ್‌:
ಸುರಂಗ ಲಕ್ಮಲ್‌        11-9-5-3
ಲಹಿರು ಗಾಮಗೆ        11.5-3-24-0
ದಸುನ್‌ ಶಣಕ        8-2-23-2
ದಿಮುತ್‌ ಕರುಣರತ್ನೆ        2-0-17-0

ಎಕ್ಸ್‌ಟ್ರಾ ಇನ್ನಿಂಗ್ಸ್‌

ಭಾರತ ತವರಿನ ಟೆಸ್ಟ್‌ನಲ್ಲಿ 2010ರ ಬಳಿಕ ಮೊದಲ ಸಲ 50 ರನ್ನಿಗೆ 5 ವಿಕೆಟ್‌ ಕಳೆದುಕೊಂಡಿತು. ಅಂದು ನ್ಯೂಜಿಲ್ಯಾಂಡ್‌ ಎದುರಿನ ಅಹ್ಮದಾಬಾದ್‌ ಟೆಸ್ಟ್‌ನಲ್ಲಿ ಭಾರತ ಈ ಸಂಕಟಕ್ಕೆ ಸಿಲುಕಿತ್ತು.

ಒಟ್ಟಾರೆಯಾಗಿ ಭಾರತ ತವರಿನಲ್ಲಿ 17ನೇ ಸಲ, ಕಳೆದ 30 ವರ್ಷಗಳಲ್ಲಿ 5ನೇ ಸಲ 50 ರನ್ನಿಗೆ ಮೊದಲ 5 ವಿಕೆಟ್‌ ಉದುರಿಸಿಕೊಂಡಿತು.

ಸುರಂಗ ಲಕ್ಮಲ್‌ 46 ಡಾಟ್‌ ಬಾಲ್‌ಗ‌ಳ ಬಳಿಕ ಮೊದಲ ರನ್‌ ನೀಡಿದರು. 2001ರ ಬಳಿಕ ಇದು ಬೌಲರ್‌ ಓರ್ವನ ಅತ್ಯುತ್ತಮ ಮಿತವ್ಯಯ ಸಾಧನೆಯಾಗಿದೆ. ಆಸ್ಟ್ರೇಲಿಯ ವಿರುದ್ಧದ 2015ರ ಕಿಂಗ್‌ಸ್ಟನ್‌ ಪಂದ್ಯದಲ್ಲಿ ವಿಂಡೀಸಿನ ಜೆರೋಮ್‌ ಟಯ್ಲರ್‌ 40 ಡಾಟ್‌ ಬಾಲ್‌ಗ‌ಳ ಬಳಿಕ ಮೊದಲ ರನ್‌ ನೀಡಿದ್ದರು.

ಟಾಪ್ ನ್ಯೂಸ್

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Bumrah meets Kiwi surgeon: Doubts over Champions Trophy?

Team India; ಕಿವೀಸ್‌ ಸರ್ಜನ್‌ ಭೇಟಿಯಾದ ಬುಮ್ರಾ: ಚಾಂಪಿಯನ್ಸ್‌ ಟ್ರೋಫಿಗೆ ಅನುಮಾನ?

SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ

SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

ಹಂಚಿಕಟ್ಟೆ: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

Mulki: Biker seriously injured after being hit by bus

Mulki: ಬಸ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಗಂಭೀರ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.