ಮಿಥಾಲಿ ಬ್ಯಾಟಿಂಗ್ ಯಶಸ್ಸಿನ ಹಿಂದೆ ಪುಸ್ತಕ!
Team Udayavani, Jun 26, 2017, 3:45 AM IST
ಲಂಡನ್: ಇಂಗ್ಲೆಂಡ್ನಲ್ಲಿ ಮಹಿಳಾ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಎರಡೆರಡು ವಿಶ್ವದಾಖಲೆ ನಿರ್ಮಿಸಿದ್ದೂ ಎಲ್ಲರಿಗೂ ಗೊತ್ತಿದೆ. ಆದರೆ ಆಕೆ ಸದಾ ಶಾಂತವಾಗಿರುವ ಹಿಂದಿನ ರಹಸ್ಯವೇನೆಂದು ಯಾರಿಗಾದರೂ ಗೊತ್ತಿದೆಯಾ?
ಸದ್ಯ ಟ್ವೀಟರ್ನಲ್ಲಿದು ಚರ್ಚೆಯ ವಸ್ತು. ಬ್ಯಾಟಿಂಗ್ ವೇಳೆ, ಅದಕ್ಕೂ ಮುನ್ನ ಮನಸ್ಸನ್ನು ಶಾಂತವಾಗಿ, ಸ್ಥಿರವಾಗಿಟ್ಟುಕೊಳ್ಳಲು ಮಿಥಾಲಿ ಪುಸ್ತಕ ಓದುತ್ತಾರಂತೆ. ಅಂದರೆ ತಮ್ಮ ಪಾಳಿ ಬರುವವರೆಗೆ ಅವರು ಎಲ್ಲವನ್ನೂ ಮರೆತು ಪುಸ್ತಕ ಓದುತ್ತಾ ಕೂತಿರುತ್ತಾರೆ. ಬಂದ ತಕ್ಷಣ ಪುಸ್ತಕ ಮಡಚಿಟ್ಟು ಬ್ಯಾಟಿಂಗ್ಗೆ ಹೊರಡುತ್ತಾರೆ!
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಭಾರತ ತಂಡ ರೋಚಕವಾಗಿ ಗೆದ್ದಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 281 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಗಳಿಸಲು ತಮ್ಮ ಪಾಲಿನ 71 ರನ್ಗಳ ಕಾಣಿಕೆ ನೀಡಿದ್ದ ಮಿಥಾಲಿ ತಮ್ಮ ಬ್ಯಾಟಿಂಗ್ ಸರದಿ ಬರುವವರೆಗೆ ಪುಸ್ತಕ ಓದುತ್ತಾ ಕೂತಿದ್ದರು. ಇದನ್ನು ಒಬ್ಬರು ಪತ್ತೆ ಹಚ್ಚಿ ಟ್ವೀಟರ್ನಲ್ಲಿ ಹಾಕಿದ್ದಾರೆ. ಆಗಲೇ ಎಲ್ಲರಿಗೂ ಮಿಥಾಲಿ ರಹಸ್ಯ ಗೊತ್ತಾಗಿದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.