ನಾಯಕತ್ವ ವಹಿಸಲು ಸಿದ್ಧ: ರೋಹಿತ್!
Team Udayavani, Sep 30, 2018, 6:55 AM IST
ದುಬೈ: ಏಷ್ಯಾಕಪ್ ಕ್ರಿಕೆಟ್ ಗೆದ್ದ ಖುಷಿಯಲ್ಲಿರುವ ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮ ಹಲವು ವಿಡಂಬನಾತ್ಮಕ ಹೇಳಿಕೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.
ಗೆದ್ದ ನಂತರ ಧೋನಿಯನ್ನು ಕಂಠಪೂರ್ತಿ ಹೊಗಳಿರುವ ಅವರು ಹಾಲಿ ನಾಯಕ ಕೊಹ್ಲಿಯ ಬಗ್ಗೆ ಹೆಚ್ಚೇನು ಹೇಳಿಲ್ಲ. ಅದೂ ಅಲ್ಲದೇ ಪರಿಸ್ಥಿತಿ ಒದಗಿಬಂದರೆ ಪೂರ್ಣಪ್ರಮಾಣದಲ್ಲಿ ತಾನು ನಾಯಕತ್ವ ವಹಿಸಲು ಸಿದ್ಧ ಎಂದೂ ಹೇಳಿಕೊಂಡಿದ್ದಾರೆ. ಕೊಹ್ಲಿ ಪೂರ್ಣಕಾಲಿಕ ನಾಯಕರಾಗಿರುವಾಗಲೇ ರೋಹಿತ್ ನೀಡಿರುವ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.
ಅಷ್ಟು ಮಾತ್ರವಲ್ಲ ತಂಡದಲ್ಲಿ ಆಟಗಾರರನ್ನು ಕುರಿತ ನಿಲುವುಗಳ ಬಗ್ಗೆಯೂ ಕೊಹ್ಲಿಗಿಂತ ಭಿನ್ನ ನಿಲುವನ್ನು ತಳೆದಿದ್ದಾರೆ. ಆಟಗಾರರಿಗೆ ಎರಡು ಪಂದ್ಯ ಆಡಲು ಅವಕಾಶ ನೀಡಿ ಅವರನ್ನು ತೆಗೆದುಹಾಕುವುದು ಸರಿಯಲ್ಲ. ಅದರಿಂದ ಅವರ ಪ್ರದರ್ಶನ ತಿಳಿಯಲು ಸಾಧ್ಯವಿಲ್ಲ. ಆದ್ದರಿಂದಲೇ ತಾನು ಅಂಬಾಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್‌ಗೆ ಇಡೀ ಸರಣಿ ಆಡುವ ಅವಕಾಶ ನೀಡುತ್ತೇನೆಂದು ಮೊದಲೇ ಭರವಸೆ ನೀಡಿದ್ದೆ. ಒಂದೆರಡು ಪಂದ್ಯದ ನಂತರ ಅವಕಾಶ ತಪ್ಪಬಹುದು ಎಂಬ ಭೀತಿಯಿದ್ದಾಗ ಆಟಗಾರರ ಮೇಲೆ ತೀವ್ರ ಒತ್ತಡವಿರುತ್ತದೆ. ಆಟಗಾರರು ಒತ್ತಡ ಮುಕ್ತರಾಗಿರಬೇಕೆಂಬುದು ತನ್ನ ನಿಲುವು ಎಂದು ಹೇಳಿದ್ದಾರೆ.
ಈ ಎಲ್ಲ ಹೇಳಿಕೆಗಳು ಕೊಹ್ಲಿಗೆ ವಿರುದ್ಧವಾಗಿವೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಗರಿಷ್ಠ ಬದಲಾವಣೆ ಕಂಡಿದೆ. ಅವರ ನಾಯಕತ್ವದಡಿ ಆಡಿದ ಬಹುತೇಕ ಪಂದ್ಯಗಳಲ್ಲಿ ಆಟಗಾರರು ಬದಲಾಗಿದ್ದಾರೆ. ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ತಕ್ಷಣವೇ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿಯಿದೆ. ಇದಕ್ಕೆ ಟೀಕೆಯೂ ವ್ಯಕ್ತವಾಗಿದೆ.
ಶಾಂತವಾಗಿರುವುದರಲ್ಲಿ ನಾನು ಧೋನಿಗೆ ಸಮ!
ಪಂದ್ಯದ ವೇಳೆ ಶಾಂತವಾಗಿ ಪರಿಸ್ಥಿತಿ ನಿಭಾಯಿಸುವುದರಲ್ಲಿ ತಾನು ಧೋನಿಗೆ ಸಮ ಎಂದು ರೋಹಿತ್ ಹೇಳಿದ್ದಾರೆ. ಶಾಂತವಾಗಿರುವಾಗ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು. ಅದನ್ನು ಧೋನಿಯನ್ನು ನೋಡಿಯೇ ಕಲಿತೆ. ಎಂತಹ ಸಂದರ್ಭದಲ್ಲೂ ಧೋನಿ ಬಳಿ ಹೋಗಿ ಸಲಹೆ ಕೇಳಿದರೆ ಅವರಿಂದ ಉತ್ತರ ಸಿದ್ಧವಾಗಿರುತ್ತದೆ ಎಂದು ಧೋನಿಯನ್ನು ಮನಃಪೂರ್ತಿ ಹೊಗಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.